ಲೋಕದರ್ಶನ ವರದಿ
ಸಂಕೇಶ್ವರ, 8: ನಿಡಸೋಸಿಯಲ್ಲಿ ಹಮ್ಮಿಕೊಂಡ ವಿವಿಧ ಅಭಿವೃದ್ಧಿಗಳ ಕಾಮಗಾರಿಗಳ ಆದೇಶ ಪತ್ರವನ್ನು ವಿತರಿಸುತ್ತಾ ಚಿಕ್ಕೋಡಿ ಲೋಕಸಭಾ ಸದಸ್ಯ ಪ್ರಕಾಶ ಬಾಬಣ್ಣ ಹುಕ್ಕೇರಿ ರೈತರಿಗೆ ಯಾತ ನೀರಾವರಿ ಸೌಲಭ್ಯಗಳನ್ನು ಯೋಜನೆಗಳ ಕಾಮಗಾರಿಗಳಿಗೆ ರಾಜ್ಯ ಸಕರ್ಾರದಿಂದ 11 ಕೋಟಿ ರೂಪಾಯಿ ಮಂಜೂರು ಮಾಡಿದ್ದು ಶೀಘ್ರವೆ ಟೆಂಡರ್ ಕರೆದು ಕಾಮರಿಗಳನ್ನು ಮಾರ್ಚ 7 ನೇ ದಿನಾಂಕಕ್ಕೆ ಪೈಪ್ ಲೈನ್ ಗಳನ್ನು ಹಾಕಿ ಯಾತ ನೀರಾವರಿ ಯೋಜನೆಗಳಾದ ಹಿರಣ್ಯಕೇಶಿ ನದಿಯಿಂದ ನಿಡಸೋಸಿ ಚಿಮ್ಮಟಗಿ ತೋಟ 95 ಲಕ್ಷ, ನಿದಸೋಸಿ ಕೊರಂದವಾಡೆ ತೋಟ 83 ಲಕ್ಷ, ನಿಡಸೋಸಿ ಪಾಟೀಲ ತೋಟ 80 ಲಕ್ಷ ಮಂಜೂರಾಗಿದೆ. ಕೋಳಿಗುಡ್ಡ 99 ಲಕ್ಷ, ಐನಾಪುರ-ಮೋಳೆ ಸೈಟ್1-148 ಲಕ್ಷ, ಸೈಟ್ 2-145 ಲಕ್ಷ, ಜುಗೂಳ 140 ಲಕ್ಷ, ಕಾಗವಾಡ 110 ಲಕ್ಷ ಸೇರಿ 9 ಕೋಟಿ ಅನುದಾನ ಮಂಜೂರಾಗಿದೆ ಎಂದು ನೀಡಸೋಸಿಯ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳ ಆಶರ್ಿವಾದದಲ್ಲಿ ರೈತರಿಗೆ ಆದೇಶ ಪತ್ರವನ್ನು ವಿತರಿಸಿದರು.
ಈ ಸಂಧರ್ಬದಲ್ಲಿ ನಿಡಸೋಸಿಯ ಶ್ರೀಗಳು ರೈತರನ್ನು ಉದ್ದೆಶಿಸಿ ಮಾತನಾಡುತ್ತಾ ರೈತರು ನೀರನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಹೋಲ ಗದ್ದೆಗಳಿಗೆ ಒಳ್ಳೆಯ ಫಸಲನ್ನು ತರುವಂತೆ ತಾವು ಶ್ರಮಿಸಬೇಕು ಅಂತಾ ರೈತರಿಗೆ ಬುದ್ಧಿ ಮಾತು ಹೇಳಿದಲ್ಲದೇ ಬೆಳಗಾವಿ ಜಿಲ್ಲೆಯಲ್ಲಿ ಒಳ್ಳೆಯ ಫಲವತ್ತಾದ ಭೂಮಿಗಳು ಇರುವುದರಿಂದ ರೈತಾಪಿ ವರ್ಗವು ಕೈಚಾಚಿ ಸಾಲ ಬೇಡುವ ಅವಶ್ಯಕತೆ ಬರುವುದಿಲ್ಲ ರೈತರು ಸಾಲ ಮನ್ನಾ ಇಂತಹ ಆಮಿಶಗಳನ್ನು ತೆಗೆದುಕೋಳ್ಳದೆ ಮತ್ತು ಸೋಮಾರಿಯಾಗದೆ ತಾವು ಬೆಳೆದ ಬೆಳೆಗೆ ಕೆಂದ್ರ ಸರಕಾರ ಅಥವಾ ರಾಜ್ಯ ಸರಕಾರ ಬೆಂಬಲ ಬೆಲೆ ಕೊಟ್ಟರೇ ಬೆಳಗಾವಿ ಜಿಲ್ಲೆಯ ರೈತರೆಲ್ಲರೂ ಬಲಾಡ್ಯರಾಗುತ್ತಾರೆ ಎಂದು ಶ್ರೀಗಳು ಹೇಳಿದರು. ಮತ್ತು ನಿಡಸೊಸಿ ಸುತ್ತಮುತ್ತಲಿನ ಗ್ರಾಮಗಳಿಗೆ 110 ಎಕರೆ ನೀರಾವರಿ ಕಲ್ಪಿಸಿದಂತಾಗುತ್ತದೆ ಎಂದು ಹೇಳಿದರು. ಸಂತೋಷ ಪಾಟೀಲ, ಉಮೇಶ ಪಾಟೀಲ, ಮಲ್ಲಿಕಾಜರ್ುನ ಪಾಟೀಲ, ಸುರೇಶ ಬಾಡಕರ, ರವಿ ಪಾಟೀಲ, ಎಲ್. ಬಿ.ಖೋತ ಮೊದಲಾದವರು ಉಪಸ್ಥಿತರಿದ್ದರು.