ಲೋಕದರ್ಶನ ವರದಿ
ಧಾರ್ವಾಡ 16: ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ, ಧಾರವಾಡ. ಹಾಗೂ ಪ್ರಾದೇಶಿಕ ವಿಜ್ಞಾನ ಕೇಂದ್ರ ಧಾರವಾಡ ಇವರ ಸಹಯೋಗದೊಂದಿಗೆ ದಿನಾಂಕ: 13-10-2018 ರಂದು ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಭಾಭವನದಲ್ಲಿ 10ನೇ ಬೆಂಗಳೂರು ಇಂಡಿಯಾ ನ್ಯಾನೊ 2018 ಪೂರ್ವಭಾವಿ ಉಪನ್ಯಾಸ ಮಾಲಿಕೆ ಮತ್ತು ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿತ್ತು. ವಿಜ್ಞಾನ ಹಾಗೂ ತಂತ್ರಜ್ಞಾನದ ಬಗ್ಗೆ ಮಾಹಿತಿಕೊಡುವ ಹಾಗೂ ಡಿಸೆಂಬರ 5 ರಿಂದ 7ರ ವರೆಗೆ ಭಾರತ ರತ್ನ ಸಿ.ಎನ್.ಆರ್. ರಾವ್ ಅವರ ನೇತೃತ್ವದಲ್ಲಿ ನಡೆಯುವ ಬೆಂಗಳೂರು ಇಂಡಿಯಾ ನ್ಯಾನೊ 2018 ಸಮಾರಂಭದ ಬಗ್ಗೆ ತಿಳುವಳಿಕೆ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ 250 ಕ್ಕೂ ಹೆಚ್ಚು ಪ್ರಥಮ ಹಾಗೂ ದ್ವಿತೀಯ ಪಿ.ಯು.ಸಿ. (ವಿಜ್ಞಾನ) ವಿದ್ಯಾಥರ್ಿಗಳು ಧಾರವಾಡದ ವಿವಿಧ ಕಾಲೇಜುಗಳಿಂದ ಆಗಮಿಸಿದ್ದರು.
ಪ್ರೊ. ಮೂಲಿಮನಿ, ವಿಶ್ರಾಂತ ಕುಲಪತಿಗಳು, ಗುಲ್ಬಗರ್ಾ ವಿಶ್ವವಿದ್ಯಾಲಯ ಹಾಗೂ ಃಐಆಇ ಯೂನಿವಸರ್ಿಟಿ, ಬಿಜಾಪುರ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ವಿದ್ಯಾಥರ್ಿಗಳು ಜ್ಞಾನವನ್ನು ಸೃಷ್ಟಿಸುವ ಕಾರ್ಯವನ್ನು ಮಾಡಬೇಕು ಎಂದು ತಿಳಿಸಿದರು. ಮುಂದುವರಿದು ಅವರು ತಮ್ಮ ಭಾಷಣದಲ್ಲಿ ವಿಜ್ಞಾನವು ತಂತ್ರಜ್ಞಾನವನ್ನು ಸೃಷ್ಟಿಮಾಡುತ್ತದೆ, ತಂತ್ರಜ್ಞಾನವು ನಮ್ಮ ಜೀವನವನ್ನು ಸುಲಭವಾಗಿಸುತ್ತದೆ ಎಂದು ಹೇಳಿದರು. ಹಾಗೆ ಭವéಿಷ್ಯವು ಬಹಳ ಸುಂದರವಾಗಿರುತ್ತದೆ. ಏಕೆಂದರೆ ಅದನ್ನು ನಾವು ಸೃಷ್ಟಿಮಾಡುತ್ತೇವೆ. ಭವಿಷ್ಯವನ್ನು ಸುಂದರವಾಗಿ ಸೃಷ್ಟಿಸುವುದು ವಿಜ್ಞಾನದಿಂದ ಮಾತ್ರ ಸಾಧ್ಯ ಎಂದು ಅವರು ನುಡಿದರು.
ಪ್ರೊ. ಜಿ. ಯು. ಕುಲಕಣರ್ಿ, ನಿದರ್ೇಶಕರು, ಅಜಓಖ, ಬೆಂಗಳೂರು ಅವರು 10ನೇ ಬೆಂಗಳೂರು ಇಂಡಿಯಾ ನ್ಯಾನೊ 2018 ಸಮಾರಂಭದ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ಅವರ ಉದ್ದೇಶ ಮತ್ತು ಇತಿಹಾಸದ ಬಗ್ಗೆ ಸಭಿಕರಿಗೆ ತಿಳಿಸಿ ಕೊಟ್ಟರು. ಡಾ ಕೆೆ. ಬಿ. ಗುಡಸಿ, ನಿದರ್ೇಶಕರು, ಪ್ರಾದೇಶಿಕ ವಿಜ್ಞಾನ ಕೇಂದ್ರ, ಧಾರವಾಡ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ಅತಿಥಿ ಅಭ್ಯಾಗತರನ್ನು ಹಾಗೂ ಎಲ್ಲ ಆಹ್ವಾನಿತರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಪ್ರೊ. ಎಸ್. ಎಮ್ ಶಿವಪ್ರಸಾದ, ನಿದರ್ೇಶಕರು, ಉನ್ನತ ಶಿಕ್ಷಣ ಅಕಾಡೆಮಿ ಧಾರವಾಡ ಅವರು ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲ ಅತಿಥಿಗಳನ್ನು ವಂದಿಸಿದರು, ಡಾ ಅರುಂಧತಿ ಕುಲಕಣರ್ಿ, ಡೀನ್, ಉನ್ನತ ಶಿಕ್ಷಣ ಅಕಾಡೆಮಿ ಧಾರವಾಡ ಕಾರ್ಯಕ್ರಮವನ್ನು ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಅಕಾಡೆಮಿ ಹಾಗೂ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಉದ್ಘಾಟನಾ ಸಮಾರಂಭದ ನಂತರ ಪ್ರೊ. ಎಸ್. ಎಮ್.ಶಿವಪ್ರಸಾದ, ನಿದರ್ೇಶಕರು ಉನ್ನತ ಶಿಕ್ಷಣ ಅಕಾಡೆಮಿ ಧಾರವಾಡ ಇವರು ನ್ಯಾನೊ ತಂತ್ರಜ್ಞಾನದ ಹಿಂದಿರುವ ವಿಜ್ಞಾನ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಅವರು ವಿದ್ಯಾಥರ್ಿಗಳಿಗೆ ನ್ಯಾನೊ ವಿಜ್ಞಾನದ ಬಗ್ಗೆ ಬಹಳಷ್ಟು ಮಾಹಿತಿಯನ್ನು ಸರಳವಾಗಿ ವಿವರಿಸಿ ಈ ವಿಷಯದಲ್ಲಿ ಅವರಿಗೆ ಕುತೂಹಲವನ್ನು ಮೂಡಿಸುವಲ್ಲಿ ಯಶಸ್ವಿಯಾದರು. ಎರಡನೇ ಗೋಷ್ಠಿಯಲ್ಲಿ ಪ್ರೊ ಜಿ. ಯು ಕುಲಕಣರ್ಿ ನಿದರ್ೇಶಕರು, ಅಜಓಖ, ಬೆಂಗಳೂರು ಇವರು ಲ್ಯಾಬೋರೇಟರಿ ಸಂಶೋಧನೆಗಳಿಂದ ತಂತ್ರಜ್ಞಾನ ಉತ್ಪನ್ನಗಳು ಎಂಬ ವಿಷಯವಾಗಿ ಉಪನ್ಯಾಸ ನೀಡಿದರು. ನಂತರ ಶ್ರೀ ರಾಜಶೇಖರ ಪೂಜಾರ ಅವರು ಈ ಉಪನ್ಯಾಸವನ್ನು ಮುಂದುವರೆಸಿ 'ಗ್ರಾಫೀನ್ ಒಂದು ಉತ್ಪನ್ನ' ಎಂಬ ವಿಷಯದ ಬಗ್ಗೆ ವಿವರಣೆ ನೀಡಿದರು. ಅವರು ತಮ್ಮ ಲ್ಯಾಬೋರೇಟರಿಯಲ್ಲಿ ನ್ಯಾನೊ ತಂತ್ರಜ್ಞಾನದ ಕುರಿತು ಆದಂತಃ ಸಂಶೋಧನೆಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು.
ನಂತರ ಇಲ್ಲಿವರೆಗೆ ನಡೆದ 9 ಬೆಂಗಳೂರು ಇಂಡಿಯಾ ನ್ಯಾನೊ 2018 ಸಮಾರಂಭಗಳ ಕುರಿತಾದ ವಿಡಿಯೋವನ್ನು ತೋರಿಸಲಾಯಿತು. ನಂತರ ವಿದ್ಯಾಥರ್ಿಗಳ ಜೊತೆ ಸಂವಾದ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿತ್ತು. ಆನಂತರ ನ್ಯಾನೊ ತಂತ್ರಜ್ಞಾನದ ಕುರಿತಾದ ವಿವಿಧ ವಿಷಯಗಳ ಬಗ್ಗೆ ವಸ್ತು ಪ್ರದರ್ಶನ ನೆರವೇರಿತು ಎಲ್ಲ ವಿದ್ಯಾಥರ್ಿಗಳು ಈ ಕಾರ್ಯಕ್ರಮದಲ್ಲಿ ಅತ್ಯಂತ ಉತ್ಸುಕತೆಯಿಂದ ಭಾಗವಹಿಸಿ ಬಹಳಷ್ಟು ವಿಷಯಗಳ ಬಗ್ಗೆ ಜ್ಞಾನವನ್ನು ಪಡೆದುಕೊಂಡರು.