ಪರಿಹಾರ ನಿಧಿಗೆ ಐಎಂಎದಿಂದ 1 ಲಕ್ಷ ರೂ. ಚೆಕ್ ವಿತರಣೆ

ರಾಣೇಬೆನ್ನೂರು:  ಸ್ಥಳೀಯ ಭಾರತೀಯ ವೈದ್ಯಕೀಯ ಸಂಘವು(ಐಎಂಎ) ಮುಖ್ಯಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ ಸಂಘದ ಅಧ್ಯಕ್ಷ ಡಾ|| ನಾಗರಾಜ ದೊಡ್ಡಮನಿ ಅವರ ನೇತೃತ್ವದಲ್ಲಿ ತೆರೆಳಿ ತಹಶೀಲ್ದಾರ ಸಿ.ಎಸ್.ಕುಲಕಣರ್ಿ ಅವರಿಗೆ 1 ಲಕ್ಷ ರೂ.ಗಳ ಚೆಕ್ನ್ನು ವಿತರಿಸಿದರು.  ಈ ಸಂದರ್ಭದಲ್ಲಿ ಸಂಘದ  ಡಾ|| ಬಸವರಾಜ ಕೇಲಗಾರ, ಡಾ|| ಬಿ.ಎಸ್.ಅಂಗಡಿ, ಡಾ|| ನಂಜಪ್ಪ ಶೆಟ್ಟಿಕೇರಿ. ಡಾ|| ಗಿರೀಶ ಪಾಟೀಲ, ಡಾ| ರವಿ ಕುಲಕಣರ್ಿ, ಡಾ|| ನಿರಂಜನ ಮಿಜರ್ಿ, ಸೇರಿದಂತೆ ಮತ್ತಿತರರೆ ಪದಾಧಿಕಾರಿಗಳು ಪಾಲ್ಗೊಂಡಿದ್ದರು. 

ನೆರೆ ಸಂತ್ರಸ್ಥರಿಗೆ ತಪಾಸಣೆ: ತಾಲೂಕಿನ ಮುದೇನೂರು ನಾಗೇನಹಳ್ಳಿ, ಹೊಸರಿತ್ತಿ, ಕಿತ್ತೂರು, ಕೊರಡೂರು ಮೊದಲಾದ ಗ್ರಾಮಗಳಿಗೆ ತೆರೆಳಿದ ಐಎಂಎ ಸಂಘಟನೆಯ ವೈದ್ಯರು ನದಿ ಪಾತ್ರದಲ್ಲಿ ವಾಸಿಗಳಾಗಿರುವ ನೆರೆ ಸಂತ್ರಸ್ಥರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿ ಎಲ್ಲರಿಗೂ ಉಚಿತವಾಗಿ ಔಷಧಿಗಳನ್ನು ವಿತರಿಸಿ, ಅಲ್ಲದೇ ಅವರಿಗೆ ಅಗತ್ಯವಾಗಿ ಬೇಕಾಗಿರುವ ಸೀರೆ, ಪಂಚೆ, ಟವೆಲ್, ಲುಂಗಿ ಮೊದಲಾದ ವಸ್ತುಗಳನ್ನು ವಿತರಿಸಿ ಮಾನವೀಯತೆ ಮೆರೆದರು