1ಕೋಟಿ ನಗದು ವ್ಯವಹಾರಕ್ಕೆ ಮಿತಿ ಗೊಳಿಸಬೇಕು: ಗದಾಡಿ

ಲೋಕದರ್ಶನ ವರದಿ

ಮೂಡಲಗಿ: ಕೆಂದ್ರ  ಸರಕಾರದ ತೆರಿಗೆ ನೀತಿ 194ಎನ್ ನಿಯಮ ಸಹಕಾರಿ ಸಂಘಗಳಲ್ಲಿ ಗೊಂದಲ ಮೂಡಿಸಿದೆ. ಸದ್ಯದ ನಿಯಮದ ಪ್ರಕಾರ ರಾಷ್ಟ್ರೀಕೃತ ಬ್ಯಾಂಕುಗಳಿಂದ ಒಂದು ಖಾತೆಯಿಂದ ಒಂದು ಕೋಟಿ  ನಗದು  ಸ್ವೀಕರಿಸಬಹುದು. ಕಾರಣ ಸಹಕಾರಿ ಸಂಘಗಳು  ತನ್ನ ಗ್ರಾಹಕರಿಗೆ ಹೆಚ್ಚು  ನಗದು ರೂಪದಲ್ಲಿ ವ್ಯವಹರಿಸದೇ ನೆಪ್ಟ್ ಅಥವಾ ಆರ್ಟಿಜಿಎಸ್ ಹಾಗೂ ಚೆಕ್ಕ ಮೂಲಕ ವ್ಯವಹರಿಸಬೇಕೆಂದು ಗೋಕಾಕದ ಲೆಕ್ಕ ಪರಿಶೋಧಕರಾದ ಸೈದಪ್ಪ ಗದಾಡಿ ಹೇಳಿದರು.

ಅವರು ಸ್ಥಳೀಯ ಕುರುಹಿನಶಟ್ಟಿ ಅರ್ಬನ್ ಸೊಸಾಯಿಟಿ ಮೂಡಲಗಿ ಇದರ ಸಭಾ ಭವನದಲ್ಲಿ ಕನರ್ಾಟಕ ರಾಜ್ಯ ಸಹಕಾರಿ ಮಹಾ ಮಂಡಳ,ಸಹಕಾರಿ ಪತ್ತಿನ ಸಂಘಗಳ ಮಹಾ ಮಂಡಳ ಮತ್ತು ಬೆಳಗಾಂವಿ ಜಿಲ್ಲಾ ಸಹಕಾರ ಯುನಿಯನ್ ಹಾಗೂ ಮೂಡಲಗಿ ನಗರ ಸಹಕಾರ ಸಂಘಗಳ ಒಕ್ಕೂಟ ಇವುಗಳ ಸಂಯುಕ್ತ ಆಶ್ರಯದಲ್ಲಿ  ಹಮ್ಮಿಕೊಂಡ 66ನೇ ಜಿಲ್ಲಾ ಮಟ್ಟದ ಅಖಿಲ ಭಾರತ ಸಹಕಾರಿ ಸಪ್ತಾಹ ಸಮಾರಂಭದಲ್ಲಿ ಅತಿಥಿ ಉಪನ್ಯಾಸಕರಾಗಿ ಮಾತನಾಡಿ, ಕ್ರೆಡಿಟ್ ಸಹಕಾರಿ ಸಂಘಗಳು ತನ್ನ ಶೇರುದಾರರೊಂದಿಗೆ ಮಾತ್ರ ವ್ಯವಹರಿಸಬೇಕೆಂದರು.

   ರಾಜ್ಯ ಸಹಕಾರಿ ಮಹಾ ಮಂಡಳ,ಸಹಕಾರಿ ಪತ್ತಿನ ಸಂಘಗಳ ಮಹಾ ಮಂಡಳ ಮತ್ತು ಬೆಳಗಾಂವಿ ಜಿಲ್ಲಾ ಸಹಕಾರ ಯುನಿಯನ್ ಈ  ಕೆಂದ್ರ  ಸರಕಾರದ ತೆರಿಗೆ ನೀತಿ 194 ಎನ್ ನಿಯಮ ರದ್ದು ಪಡಿಸಲು ಹೋರಾಟ ಮಾಡಲು ಸಹಕಾರಿ ಸಂಘಟನೆಗಳಿಗೆ ಗದಾಡಿ ಸಲಹೆ ನೀಡಿದರು.

ಅತಿಥಿ ಗೋಕಾಕ ಆದಾಯ ತೆರಿಗೆ ಅಧಿಕಾರಿ ಶ್ರೀಶೈಲ ಚಿನಗುಂಡಿ ಮಾತನಾಡಿ, ಸಹಕಾರ ಸಂಘಗಳಲ್ಲಿ ರೂ 15 ಸಾವಿರಕ್ಕಿಂತ ಹೆಚ್ಚು ಸಂಬಳ ಪಡೆಯುವ ಪ್ರತಿಯೊಬ್ಬ ನೌಕರರು ವೃತ್ತಿ ತೆರಿಗೆಯನ್ನು ಕಡ್ಡಾಯವಾಗಿ ಇಲಾಖೆಗೆ ತುಂಬಬೆಕೆಂದರು.

ರಾಜ್ಯ ಸಹಕಾರಿ ಪತ್ತಿನ ಮಹಾಮಂಡಳದ ನಿದರ್ೇಶಕ ಡಾ.ಸಂಜಯ ಹೊಸಮಠ ಮಾತನಾಡಿ,  ರಾಜ್ಯದ ವಿವಿಧ ಸಹಕಾರ ಸಂಘಟನೆಗಳ ಮೂಲಕ ಈಗಿನ 194 ಎನ್ ನಿಯಮವನ್ನು ರದ್ದು ಪಡಿಸಲು ಎಲ್ಲ ತೆರನಾದ  ಹೋರಾಟ ಮಾಡಿ ಸಹಕಾರಿ ಸಂಘಗಳ ಉಳಿವಿಗೆ ಕಂಕಣಬದ್ದರಾಗಿದ್ದೇವೆ ಎನ್ನುತ್ತಾ ಮೂಡಲಗಿಯನ್ನು ಸಹಕಾರಿ ನಗರ  ಎಂದು ಘೋಷಣೆ ಮಾಡಿಯೇ  ತೀರುತ್ತೇವೆ ಎಂದು ಭರವಸೆ ನೀಡಿದರು.

ಆರ್ಬಿಎಲ್ ಬ್ಯಾಂಕಿನ ವಿಭಾಗಿಯ ಅಧಿಕಾರಿಗಳಾದ ಕಪೀಲ , ಸಾಗರ ತಮ್ಮ ಬ್ಯಾಂಕಿನೊಂದಿಗೆ ವ್ಯವಹರಿಸಿದರೆ  ನಿಮ್ಮ ಸಹಕಾರಿ ಸಂಘಗಳ ಬಾಗಿಲಿಗೆ ಸೇವೆಯನ್ನು ನೀಡುವದಾಗಿ ಭರವಸೆ ನೀಡಿದರು.

ಕನರ್ಾಟಕಾ ಕ್ರೇಡಿಟ್ ಸೌಹಾರ್ದ ಸಹಕಾರಿಯ ಅದ್ಯಕ್ಷ ಸಂಗಪ್ಪ ಸೂರನ್ನವರ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾದ ತಮ್ಮಣ್ಣ ಕೆಂಚರಡ್ಡಿ, ಬಸಪ್ಪ ಸಂತಿ,  ವರ್ಧಮಾನ ಬೋಳಿ,ಸುಭಾಸ ಬೆಳಕೂಡ,ಸಹಕಾರಿ ಸಂಘಗಳ ಅಧಿಕಾರಿ ಆಯ್.ಎ.ಬೆಟಗೇರಿ,ವಿಶೇಷ ಆವ್ಹಾನಿತರಾಗಿ ಮೂಡಲಗಿ ನಗರದ ಎಲ್ಲ ಸಹಕಾರಿ ಸಂಘಗಳ ಅದ್ಯಕ್ಷರು, ಉಪಾಧ್ಯಕ್ಷರು ನಿಧರ್ೆಶಕರು ಆಗಮಿಸಿದ್ದರು

ಜಿಲ್ಲಾ ಸಹಕಾರ ಯುನಿಯನ್ ಮುಖ್ಯಕಾರ್ಯ ನಿವರ್ಾಹಣಾಧಿಖಾರಿ ಎಸ್ ವ್ಹಿ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಹಾಮಂಡಳದ ನಿದರ್ೇಶಕ ಡಾ.ಸಂಜಯ ಹೊಸಮಠ, ತಮ್ಮಣ್ಣ ಕೆಂಚರಡ್ಡಿ, ಯುನಿಯನ್ ನಿದರ್ೆಶಕರಾದ ಬಸಪ್ಪ ಸಂತಿ,ವರ್ಧಮಾನ ಬೋಳಿ ಮತ್ತು ಉತ್ತಮ ಸಹಕಾರಿ ವಿಜೇತ ಪ್ರಶಸ್ತಿ ಸುಭಾಸ ಬೆಳಕೂಡ, ಸಹಕಾರಿ ಕ್ಷೇತ್ರದಲ್ಲಿ ನಿವೃತ್ತರಾದ ಬಾಲಚಂದ್ರ ಗುಬಚಿ, ವಿಠ್ಠಲ ಪೂಜೇರಿ ಇವರನ್ನು ಒಕ್ಕೂಟದ ವತಿಯಿಂದ ಸತ್ಕರಿಸಲಾಯಿತು.

ಚೈತನ್ಯ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಜಿ.ಎಸ್. ಬಿಜಗುಪ್ಪಿ ಸ್ವಾಗತಿಸಿದರು.ಮೂಡಲಗಿ ಸಹಕಾರಿ ನೌಕರರ ಪತ್ತಿನ  ಸಂಘದ ಅದ್ಯಕ್ಷ ಸಿ.ಎಸ್.ಬಗನಾಳ  ನಿರೂಪಿಸಿದರು. ಬಸವೇಶ್ವರ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕಬಿ.ಎಸ್.ಬಡಿಗೇರ ವಂದಿಸಿದರು.