“ಜಗತ್ತಿನ ಮೊದಲ ಸೂಫಿ ಮಹಿಳೆ ರಾಬಿಯಾಅಲ್-ಅದವಿಯ”
ವಿಜಯಪುರ 07 : “ದೇವನೊಂದಿಗೆ ಲೀನವಾಗುವುದೇ ಸೂಫಿಯ ಮೂಲತತ್ತ-್ವ. ಸೋಫಿಯಾ (ಜ್ಞಾನ) ಪದದರೂಪಾಂತರವೇ ಸೂಫಿ. ಪುರುಷ ಸೂಫಿಗಳೇ ಹೆಚ್ಚಾಗಿದ್ದ 8ನೇ ಶತಮಾನದಲ್ಲಿರಾಬಿಯಾಅಲ್‌ಅದವಿಯ ಎಂಬಾಕೆ ಜಗತ್ತಿನ ಮೊದಲ ಸೂಫಿ ಮಹಿಳೆಯಾಗಿ ಹೊರಹೊಮ್ಮಿದಳು. ಇರಾಕ್‌ದೇಶದ ಬಸರಾ ಪ್ರದೇಶದಲ್ಲಿ ನಾಲ್ಕನೇ ಮಗಳಾಗಿ ಬಡತನದಲ್ಲಿ ಜನಿಸಿದಳು. ಬಾಲ್ಯದಲ್ಲೇತಂದೆ-ತಾಯಿಯನ್ನು ಕಳೆದುಕೊಂಡ ರಾಬಿಯಾ ದಿನಾಲು ರಾತ್ರಿ ವೇಳೆಯಲ್ಲಿ ಪ್ರಾರ್ಥನೆ ಮಾಡುತ್ತ, ಯಾರ ಹಂಗಿಗೂ ಒಳಗಾಗದೇ ಮರಭೂಮಿಯಲ್ಲೇಗುಡಿಸಲೊಂದನ್ನು ನಿರ್ಮಿಸಿಕೊಂಡು ಚಾಪೆಯನ್ನೇ ಹಾಸಿಗೆಯಾಗಿ, ಇಟ್ಟಿಗೆಯನ್ನೇ ದಿಂಬನ್ನಾಗಿ ಮಾಡಿಕೊಂಡು ಭಗವಂತನಿಗಾಗಿ ಪರಿತಪಿಸುತ್ತ, ಧ್ಯಾನಿಸುತ್ತಅನುಭವದ ನೆಲೆಯಲ್ಲಿಅನುಭಾವದತುತ್ತತುದಿಗೆಏರಿದ ಮೊದಲ ಸೂಫಿ ಮಹಿಳೆ” ಎಂದು ಬ.ಬಾಗೇವಾಡಿ ಸರಕಾರಿ ಪ್ರಥಮದರ್ಜೆಕಾಲೇಜಿನ ಸಹಾಯಕ ಪ್ರಾಧ್ಯಾಪಕಿಡಾ. ಬಸೀರಾಬಾನು ನಿಡಗುಂದಿ ಹೇಳಿದರು.ಡಾ. ಫ.ಗು.ಹಳಕಟ್ಟಿ ಸಂಶೋಧನಕೇಂದ್ರದಚಿಂತನ ಸಾಂಸ್ಕೃತಿಕ ಬಳಗ ಅನುಭಾವಿಗಳು ಮರುಭೆಟ್ಟಿ(3) ನಿಮಿತ್ತ ಹಮ್ಮಿಕೊಂಡ ‘ರಾಬಿಯಾಅಲ್-ಅದವಿಯ’ ಎಂಬ ಅನುಭಾವದಕುರಿತು ಮಾತನಾಡುತ್ತ “ನನಗೇನಾದರುಕೊಡುವುದಿದ್ದರೆಅವುಗಳಅಸಹಾಯಕರಿಗೆಕೊಡು, ಎಲ್ಲದಕ್ಕೂದೇವರೇ ನಿರ್ಣಯಿಸುವನು. ಬದುಕಿನ ಏರಿಳಿತಗಳಿಗೆ ದೇವರೇಕಾರಣ.ನನ್ನ ಹೃದಯದಲ್ಲಿ ಪರಮಾತ್ಮನ ಪ್ರೇಮವಿದೆ. ಹೊರಗಿನ ಸೃಷ್ಠಿ ಸೌಂದರ‌್ಯಕ್ಕಿಂತ ಸೃಷ್ಠಿಯನ್ನು ನಿರ್ಮಾಣ ಮಾಡಿದ ಸೃಷ್ಠಿಕರ್ತನಲ್ಲಿಅನುಭಾವದ ಸೌಂದರ್ಯಕಾಣಬಹುದು ಎಂಬ ಸಂದೇಶ ಸಾರಿದವಳು ರಾಬಿಯಾ. ಹಸನ್‌ಬಸ್ರಾ ಎಂಬ ಶ್ರೇಷ್ಠ ಬರಹಗಾರನನ್ನು ಒಳಗೊಂಡ ಅನೇಕ ಶಿಷ್ಯರು ಅವಳ ಮಾರ್ಗದಲ್ಲಿ ನಡೆದರು” ಎಂದರು.ಪ್ರಾರಂಭದಲ್ಲಿ ಹಿಂದಿನ ಪ್ರಧಾನಮಂತ್ರಿ ದಿವಂಗತ ಮನಮೋಹನ ಸಿಂಗ, ಸಾಹಿತಿಗಳಾದ ಡಾ.ಎಂ.ಎನ್.ವಾಲಿ, ಸಾಹಿತಿ ನಾ. ಡಿಸೋಜಾ ಮತ್ತು ಪ್ರೊ.ಸುಶೀಲಾ ಪಟ್ಟಣಶೆಟ್ಟಿಹಿಅವರಿಗೆ ಶ್ರದ್ಧಾಂಜಲಿ ಅರ್ಿಸಲಾಯಿತು.ಡಾ. ವಿ.ಎಸ್.ಬಾಗಾಯತ, ಸಿ.ಎಂ.ಬಂಡಗರ, ನೂತನ ಬ್ಯಾಕೋಡ ಸಂವಾದ ಮಾಡಿದರು. ಸಂಶೋಧನಕೇಂದ್ರದ ಕಾರ‌್ಯದರ್ಶಿ ಡಾ.ಎಂ.ಎಸ್.ಮದಭಾವಿ ಅತಿಥಿಗಳನ್ನು ಪರಿಚಯಿಸಿದರು.ಡಾ. ವಿ.ಡಿ.ಐಹೊಳ್ಳಿ ಕಾರ‌್ಯಕ್ರಮ ನಿರೂಪಿಸಿದರು.ಡಾ. ಸುಭಾಸಕನ್ನೂರ ವಂದಿಸಿದರು.ಡಾ. ಎಸ್.ಎಂ.ಮೇತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ‌್ಯಕ್ರಮದಲ್ಲಿ ಸುಮಾರು 50ಕ್ಕೂ ಹೆಚ್ಚು ಸಾಹಿತಿಗಳು ಕವಿಗಳು ಭಾಗವಹಿಸಿದ್ದರು.