ಬ.ಪ್ರವೀಣ ಗಿರಿ/ವೀರೇಶ ಹಿರೇಮಠ
ಲೋಕದರ್ಶನ ವರದಿ
ಚನ್ನಮ್ಮನಕಿತ್ತೂರು 04: ದಿನದಿಂದ ದಿನಕ್ಕೆ ಪಟ್ಟಣ ಬೆಳೆಯುತ್ತಿದ್ದು, ಎಲ್ಲೆಂದರಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಟ್ರಾಫಿಕ್ ಕಿರಿಕಿರಿ ಎದುರಿಸುವ ದಯನೀಯ ಪರಿಸ್ಥಿತಿ ಇಲ್ಲಿನ ಜನರನ್ನು ಕಾಡುತ್ತಿದೆ.
ಬಸ್ ನಿಲ್ದಾಣದ ಪಾಕರ್ಿಂಗ್ ವ್ಯವಸ್ಥೆಯನ್ನು ಹೊರತುಪಡಿಸಿ, ಪಟ್ಟಣದ ಉಳಿದೆಡೆ ವಾಹನ ನಿಲುಗಡೆಗೆ ಸೂಕ್ತ ಸ್ಥಳಾವಕಾಶವಿಲ್ಲ. ವಾಹನ ಸವಾರರು ಬೇಕಾಬಿಟ್ಟಿಯಾಗಿ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುತ್ತ್ತಿದ್ದರೂ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ.
ದಿನನಿತ್ಯ ತಮ್ಮ ಕಾರ್ಯಗಳ ನಿಮಿತ್ತ ಸುತ್ತಲಿನ ಗ್ರಾಮೀಣ ಪ್ರದೇಶಗಳಿಂದ ಬರುವ ಜನರಿಗೆ ವಾಹನಗಳನ್ನು ಎಲ್ಲಿ ಪಾಕರ್್ ಮಾಡಬೇಕೆಂಬುವುದು ಗೊಂದಲಕ್ಕಿಡುಮಾಡಿದೆ. ಗುರುವಾರ ಸಂತೆಗೆ ಸ್ಪಲ್ಪ ಮಟ್ಟಿಗೆ ಟ್ರಾಫಿಕ್ ಬಿಸಿ ತಟ್ಟಿದ್ದರೇ ಸೋಮವಾರ ಸಂತೆಯಂದೂ ಜನರಿಗೆ ಅನ್ಯ ಮಾರ್ಗಗಳೇ ದಾರಿ ತೋರಿಸುತ್ತವೆ. ಎರಡು ದಶಕದ ಹಿಂದೆಯೇ ಮಾಜಿ ಸಿಎಂ ಬಂಗಾರಪ್ಪ ಕಿತ್ತೂರಿನ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ರೂಪಿಸಿದ್ದರೂ ಇಂದಿಗೂ ಅದು ಕೈಗೂಡಿಲ್ಲ. ಒಟ್ಟಾರೆ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಬೇಕು ಎಂಬುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.
ಕಿತ್ತೂರಿನ ರಸ್ತೆಗಳು ಅಗಲೀಕರಣಗೊಳ್ಳುವುದರಿಂದ ಮಾತ್ರ ಈ ಸಮಸ್ಯೆಗೆ ಪರಿಹಾರ. ಆದರೆ ಸದ್ಯದ ವ್ಯವಸ್ಥೆಗೆ ಕಂಗೆಟ್ಟಿರುವ ಸ್ಥಳೀಯರು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ದಿನದಿಂದ ದಿನಕ್ಕೆ ಪಟ್ಟಣದಲ್ಲಿ ಜನಜಂಗುಳಿ ಹೆಚ್ಚುತ್ತಿದ್ದು, ಈಗಲಾದರೂ ಮಾಸ್ಟರ್ಪ್ಲಾನ್ ಅನುಷ್ಠಾನಗೊಂಡರೆ ಸಮಸ್ಯೆಗೆ ಪರಿಹಾರ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಸ್ಥಳೀಯರಿದ್ದಾರೆ. ಆದರೆ ಇಲ್ಲಿನ ಜನಪ್ರತಿನಿಧಿಗಳು ಮನಸ್ಸು ಮಾಡಿ ತಮ್ಮ ಇಚ್ಛಾಶಕ್ತಿ ಪ್ರದಶರ್ಿಸಬೇಕಷ್ಟೇ!