ಮುಗಳಖೋಡ 01: ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 7ನೇ ವಾಷರ್ಿಕ ಘಟಿಕೋತ್ಸವ ಸಮಾರಂಭವು ಬುಧವಾರ ದಿ 29 ರಂದು ವಿ.ಟಿ.ಯು ಸಭಾಂಗಣದಲ್ಲಿ ನೆರವೇರಿತು.
ಸಮಾರಂಭದಲ್ಲಿ ಮುಗಳಖೋಡ ಪಟ್ಟಣದ ಡಾ.ಸಿ.ಬಿ.ಕುಲಿಗೋಡ ಪದವಿ ಮಹಾವಿದ್ಯಾಲಯದ ವಿದ್ಯಾಥರ್ಿಗಳಾದ ಶಿವುಕುಮಾರ ಜಗದೇವ ಹಾಗೂ ಅನಿತಾ ಮಾನಶೆಟ್ಟಿ ಅವರು ಚಿನ್ನದ ಪದಕವನ್ನು ಪಡೆದು ಊರಿನ ಹಾಗೂ ಕಾಲೇಜಿನ ಕೀತರ್ಿಯನ್ನು ಹೆಚ್ಚಿಸಿದ್ದಾರೆ.
ಬೆಳಗಾವಿ, ವಿಜಯಪೂರ ಹಾಗೂ ಬಾಗಲಕೋಟ ಜಿಲ್ಲೆ ವ್ಯಾಪ್ತಿಯನ್ನು ಒಳಗೊಂಡ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿಯ ಬಿ.ಎ. ವಿಭಾಗದಲ್ಲಿ ಪ್ರಥಮ 10 ರ್ಯಾಂಕ್ ವಿಜೇತರಲ್ಲಿ ಶಿವುಕುಮಾರ ಅಶೋಕ ಜಗದೇವ 2ನೇ ರ್ಯಾಂಕ್ ಗಳಿಸುವುದರೊಂದಿಗೆ ಶಿಕ್ಷಣಶಾಸ್ತ್ರ ವಿಷಯದಲ್ಲಿ 800ಕ್ಕೆ 800 ಅಂಕ ಪಡೆದು ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಹಾಗೂ ಅನಿತಾ ಮಾನಶೆಟ್ಟಿ ರಾಜ್ಯಶಾಸ್ತ್ರ ವಿಷಯದಲ್ಲಿ 800ಕ್ಕೆ 744 ಅಂಕ ಪಡೆದು ಚಿನ್ನದ ಪದಕದೊಂದಿಗೆ ಪ್ರಶಸ್ತಿ ಪಡೆದುಕೊಂಡು ಕಾಲೇಜಿನ ಕೀತರ್ಿಯನ್ನು ಇಮ್ಮಡಿಗೊಳಿಸಿದ್ದಾರೆ.
ಸಮಾರಂಭದಲ್ಲಿ ಕುಲಪತಿಗಳಾದ ಶಿವಾನಂದ ಹೊಸಮನಿ, ಕುಲಸಚಿವರಾದ ಸಿದ್ದು ಆಲಗೂರ, ಮೌಲ್ಯಮಾಪನ ಕುಲಸಚಿವರಾದ ಡಾ.ರಂಗರಾಜ ವನದುರ್ಗ, ಖ್ಯಾತ ಉದ್ಯಮಿ ಭಾವೇಶ ಭಾಟೀಯಾ, ಕೆಎಲ್ಎನ್ ಮೂತರ್ಿ, ರಾಜಿ ಚಿಕ್ಕನಗೌಡರ ಹಾಗೂ ಸಿಂಡಿಕೇಟ್ ಸದಸ್ಯರು ವಿದ್ಯಾಪರಿಷತ್ ಸದಸ್ಯರು, ಪಾಲಕರು ಪಾಲ್ಗೊಂಡಿದ್ದರು.
ಈ ಸಾಧನೆ ತೋರಿದ ವಿದ್ಯಾಥರ್ಿಗಳಿಗೆ ಜಿ.ಪಂ ಮಾಜಿ ಸದಸ್ಯರಾದ ಡಾ.ಸಿ.ಬಿ.ಕುಲಿಗೋಡ, ಸಂಸ್ಥೆಯ ಅಧ್ಯಕ್ಷ ಸಂಜಯ ಕುಲಿಗೋಡ ಹಾಗೂ ಆಡಳಿತ ಮಂಡಳಿಯ ಸರ್ವ ಸದಸ್ಯರು, ಪ್ರಾಚಾರ್ಯ ಡಾ.ವ್ಹಿ.ಕೆ.ನಡೋಣಿ ಹಾಗೂ ಸಿಬ್ಬಂದಿ ವರ್ಗದವರು ಮತ್ತು ಕಾಲೇಜಿನ ಎಲ್ಲ ವಿದ್ಯಾಥರ್ಿಗಳು, ಸಂಸ್ಥೆಯ ಎಲ್ಲ ಅಂಗ ಸಂಸ್ಥೆಯ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.
ಬಾಕ್ಸ್ ಲೈನ್: ಗ್ರಾಮೀಣ ಭಾಗದ ಬಡ ವಿದ್ಯಾಥರ್ಿಗಳಿಗೆ ಅನುಕೂಲವಾಗಲೆಂದು ಹಲವಾರು ತೊಂದರೆಗಳ ನಡುವೆ ಕಾಲೇಜನ್ನು ಪ್ರಾರಂಭಿಸಿದೆವು. ಈ ಪದವಿ ಕಾಲೇಜನ್ನು ಪ್ರಾರಂಭಿಸಿದ್ದು ಇಂದು ನಿಜಕ್ಕೂ ಸಾರ್ಥಕವಾಗಿದೆ. ಏಕೆಂದರೆ ಕೇವಲ 10 ವರ್ಷಗಳ ಅವಧಿಯಲ್ಲಿ 5 ರ್ಯಾಂಕ್ ಹಾಗೂ 08 ಚಿನ್ನದ ಪದಕವನ್ನು ಪಡೆದಿರುವುದು ಹಾಗೂ ಶಿಕ್ಷಣಶಾಸ್ತ್ರದಲ್ಲಿ ಸತತ 4ನೇ ಬಾರಿಗೆ ಚಿನ್ನದ ಪದಕ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಕಾಲೇಜಿನ ಮೂಲಕ ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ಚಿನ್ನದ ಪದಕ ಪಡೆದು ಸಾಧನೆ ಮಾಡುತ್ತಿರುವ ವಿದ್ಯಾಥರ್ಿಗಳ ಕಂಡು ನಮಗೆ ಹೆಮ್ಮೆಯೆನಿಸುತ್ತದೆ. ಈ ವಿದ್ಯಾಥರ್ಿಗಳಿಗೆ ಹಾಗೂ ಕಾಲೇಜಿನ ಪ್ರಾಚಾರ್ಯ ಹಾಗೂ ಸಿಬ್ಬಂದಿಯವರಿಗೆ ನಮ್ಮ ಸಂಸ್ಥೆಯ ಆಡಳಿತ ಮಂಡಳಿಯ ಪರವಾಗಿ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.
- ಡಾ.ಸಿ.ಬಿ.ಕುಲಿಗೋಡ ಜಿ.ಪಂ ಮಾಜಿ ಸದಸ್ಯರು ಬೆಳಗಾವಿ
ಬಾಕ್ಸ್ ಲೈನ್ ಸತತ ಪ್ರಯತ್ನ ಹಾಗೂ ಸರಿಯಾದ ಮಾರ್ಗದರ್ಶನದ ಮೂಲಕ ಏನ್ನಬೇಕಾದರೂ ಸಾಧಿಸಬಹುದು. ನಮಗೆ ಸರಿಯಾದ ಸಮಯದಲ್ಲಿ ಉತ್ತಮ ಮಾರ್ಗದರ್ಶನ ನೀಡಿದ ಪ್ರೊ. ಪ್ರಕಾಶ ಕಂಬಾರ ಸರ್ ಹಾಗೂ ಉಳಿದ ಗುರು ವೃಂದದ ಸಲಹೆ ಸೂಚನೆಗಳ ಮೂಲಕ ಇಂದು ನಾನು ಈ ರ್ಯಾಂಕ್ ಹಾಗೂ ಚಿನ್ನದ ಪದಕವನ್ನು ಪಡೆಯುವಂತಾಯಿತು. ನಾನು ಈ ಗುರು ವೃಂದಕ್ಕೆ ಚಿರಋಣಿಯಾಗಿರುತ್ತೇನೆ. ಮತ್ತು ಈ ಪ್ರಶಸ್ತಿ ಹಾಗೂ ಚಿನ್ನದ ಪದಕವನ್ನು ನನ್ನ ತಂದೆ-ತಾಯಿಗಳಿಗೆ ಸಮಪರ್ಿಸುತ್ತೇನೆ.
- ಶಿವುಕುಮಾರ ಅಶೋಕ ಜಗದೇವ
2ನೇ ರ್ಯಾಂಕ್ ಹಾಗೂ ಚಿನ್ನದ ಪದಕ ಪಡೆದ ವಿದ್ಯಾಥರ್ಿ