ಲೋಕದರ್ಶನ ವರದಿ
ಕಂಪ್ಲಿ 24: ಪ್ರತಿಯೊಬ್ಬರು ತಮ್ಮ ಮನೆ ಮುಂದೆ ಮತ್ತು ಹೊರಗಿನ ವಾತಾವರಣವನ್ನು ಸದಾ ಸ್ವಚ್ಛತೆಯಿಂದ ಇಟ್ಟುಕೊಳ್ಳುವಲ್ಲಿ ಸಾರ್ವಜನಿಕರು ಜಾಗೃತಿ ತೋರಬೇಕು ಎಂದು ಯುವ ಸೇನೆಯ ಶಶಿಧರ ಹೇಳಿದರು.
ಪಟ್ಟಣದ 4ನೇವಾರ್ಡ ಜನತೆಯಲ್ಲಿ ಸ್ವಚ್ಛತೆಯ ಅರಿವು ಮೂಡಿಸಲು ಯುವ ಸೇನೆಯ ಯುವಜನತೆ ಹಮ್ಮಿಕೊಂಡ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿ, 4ನೇವಾರ್ಡನಲ್ಲಿ ಜನತೆಯಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿಸಬೇಕಾಗಿದೆ. ಸ್ವಚ್ಛತೆ ಕಾಪಾಡುವುದರಿಂದ ಆರೋಗ್ಯದಿಂದ ಇರಬಹುದು. ಸ್ವಚ್ವತೆಯಿಂದ ರೋಗಗಳನ್ನು ನಿಯಂತ್ರಿಸಲು ಸಾಧ್ಯವಿದೆ. ಸ್ವಚ್ವತೆಯಿಂದ ರೋಗಗಳನ್ನು ನಿಯಂತ್ರಿಸಲು ಸಾಧ್ಯವಿದೆ..
ಈ ದಿಸೆಯಲ್ಲಿ ಯುವ ಸೇನೆಯ ಯುವಕರು ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಂಡಿದ್ದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಯುವ ಸೇನೆಯ ಚಂದ್ರು, ಮಂಜು, ಗಿರಿ, ರಮೇಶ್, ರುದ್ರಮುನಿ ಸೇರಿ ಅನೇಕರು ಉಪಸ್ಥಿತರಿದ್ದರು.