ಕಂಪ್ಲಿ : ನಾಲೆಗಿರುವ ತೂಬುನ್ನು ಮುಂದುವರಿಸಲು ಆಗ್ರಹಿಸಿ ಪ್ರತಿಭಟನೆ

ಲೋಕದರ್ಶನ ವರದಿ

ಕಂಪ್ಲಿ 16: ನೀರಾವರಿ ನಿಗಮ ಕಛೇರಿ ಆವರಣದಲ್ಲಿ ಚಿಕ್ಕಜಾಯಿಗನೂರು ಮತ್ತು ಬಳ್ಳಾಪುರ ಗ್ರಾಮದ ರೈತರು 40ವರ್ಷದಿಂದ ಎಲ್ಎಲ್ಸಿ ಕಾಲುವೆಗೆ ಅಳವಡಿಸಿರುವ ಡಿಪಿ3ರಲ್ಲಿರುವ ತೂಬುಗಳನ್ನು ಮುಂದುವರಿಸಲು ಆಗ್ರಹಿಸಿ ಏಕಾಏಕಿ ನೀರಾವರಿ ಕಛೇರಿ ಮುಂದೆ ಷಾಮಿನ ಹಾಕಿ ರೈತ ಮಹಿಳೆಯರು ಮತ್ತು ರೈತರು ದಿಢೀರ್ ಪ್ರತಿಭಟಿಸಿದರು ನಂತರ ರೈತರು ಮಾತನಾಡಿ, ಈಭಾಗದ ಎಲ್ಲಾ ರೈತರಿಗೆ ಹೂಲಗಳಿಗೆ ನೀರು ಬರುತ್ತಿದ್ದು. ಡಿಪಿ3 ವಿತರಣಾ ನಾಲೆಗೆ 186ಎಕರೆಯ ಆಯಕಟ್ಟಿನ ಭೂಮಿ ವ್ಯಾಪ್ತಿಯಿದ್ದು ಹೊಸ ಡ್ರಾಪ್ ಮಾಡುವುದರಿಂದ 16ಎಕರೆ ತೂಬಿನಲ್ಲಿ ರೈತರಿಗೂ ತೊಂದರೆಯಾಗುತ್ತದೆ. ಹಳೆಯ ಡ್ರಾಪ್ಗಳನ್ನು ಯತಾಸ್ಥಿತಿಯಲ್ಲಿ ಮುಂದುವರೆಸಿಕೊಂಡು ಹೋಗಬೇಕು. ಒಂದುವೇಳೆ ಹೊಸ ಡ್ರಾಪ್ ಮಾಡಿದಲ್ಲಿ ರೈತರ ನಡುವಿನ ಪರಸ್ಪರ ಸಂಘರ್ಷ, ಅನಾಹುತಗಳಿಗೆ ನೀರಾವರಿ ಅಧಿಕಾರಿಗಳೇ ಹೊಣೆಗಾರುತ್ತಾರೆ ಎಂದು ಎಚ್ಚರಿಕೆ ನೀಡಿದರು. 

    ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಪಿ.ನಾರಾಯಣರೆಡ್ಡಿ, ಚಲ್ಲಾ ವೆಂಕಟನಾಯ್ಡು, ಚಿಕ್ಕಜಾಯಿಗನೂರು ಮತ್ತು ಬಳ್ಳಾಪುರ ಗ್ರಾಮಗಳ ರೈತ ಮುಖಂಡರಾದ ಕೆ.ಆಶೋಕ, ಕೆ.ಎಂ.ವೃಷಭೇಂದ್ರಯ್ಯ, ಉಪ್ಪಾರ ಮಲ್ಲೇಶಪ್ಪ, ಕೆ.ವೀರೇಶ್, ಜಿ.ವೀರೇಶ್, ಕೋರಿ ಹೊನ್ನೂರಪ್ಪ, ಪಕ್ಕೀರಪ್ಪ, ಮೌನೇಶ್, ಹನುಮಂತ, ಗಾದಿಲಿಂಗಮ್ಮ, ಯು.ಹೊನ್ನೂರಮ್ಮ, ನಾಗಮ್ಮ, ಸಿದ್ಧಮ್ಮ, ಹಂಪಮ್ಮ, ಬಿ.ನೀಲಮ್ಮ, ಹನುಮಂತಮ್ಮ ಸೇರಿ ಚಿಕ್ಕಜಾಯಿಗನೂರು, ಬಳ್ಳಾಪುರ ಗ್ರಾಮಗಳ ರೈತರು, ರೈತ ಮಹಿಳೆಯರು ದಿಢೀರ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

   ನೀರಾವರಿ ನಿಗಮದ ಎಇ ಯಲ್ಲಪ್ಪ ಮನವಿ ಪತ್ರ ಸ್ವೀಕರಿಸಿ ಮಾತನಾಡಿ, 

 ಕಟ್ಟಡವು ಕಾಡಾ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದೆ. ಜು.25ರೊಳಗಾಗಿ ಕಾಡಾ ಅಧಿಕಾರಿಗಳು ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಪರಿಶೀಲಿಸಿ ಸೂಕ್ತ ನಿರ್ದಾರ ಕೈಗೊಳ್ಳಲಾಗುವುದುದೆಂದು ಪ್ರತಿಭಟನಾಕಾರರಲ್ಲಿ ಮನವಿ ಮಾಡಿಕೊಂಡರು. ಚಿಕ್ಕಜಾಯಿಗನೂರು, ಬಳ್ಳಾಪುರ ರೈತರು  ಪ್ರತಿಭಟನೆ ವಾಪಸ್ಸ ಪಡೆದರು