ಲೋಕದರ್ಶನ ವರದಿ
ಕಂಪ್ಲಿ 16: ತಾಲ್ಲೂಕಿನ ನಂ.10ಮುದ್ದಾಪುರ ಗ್ರಾಪಂ ಆವರಣದಲ್ಲಿ, 14ನೇ ಹಣಕಾಸು ಯೋಜನೆ ಅನುದಾನದ ಶೇ.5ರ ಅಡಿಯಲ್ಲಿ 1.12ಲಕ್ಷ ರೂ.ಗಳ ವೆಚ್ಚದಲ್ಲಿ 16ಅಂಗವಿಕಲ ಫಲಾನುಭವಿಗಳಿಗೆ ಹೊಲಿಗೆ ಯಂತ್ರ, ಒಂದು ಊರುಗೋಲು, ಒಂದು ತ್ರಿಚಕ್ರ ವಾಹನಗಳನ್ನು ವಿತರಿಸಲಾಯಿತು. ನಂ.10ಮುದ್ದಾಪುರ ಗ್ರಾಪಂ ಅಧ್ಯಕ್ಷೆ ಎಂ.ಎಸ್.ಮಾಂತಮ್ಮ ಅಧ್ಯಕ್ಷತೆವಹಿಸಿದ್ದರು. ಪಿಡಿಒ ಬೀರಲಿಂಗ, ವರ್ಗಗೊಂಡ ಕಾರ್ಯದರ್ಶಿ ಹನುಮಂತಪ್ಪ ಬಡಿಗೇರ, ಹಾಲಿ ಕಾರ್ಯದರ್ಶಿ ಜಿ.ವೀರಭದ್ರಗೌಡ, ಉಪಾಧ್ಯಕ್ಷ ವೈ.ಉಮೇಶ್, ಗ್ರಾಪಂ ಸದಸ್ಯರಾದ ಎ.ತಾಯಣ್ಣ, ಬಂಡಾರಿ ನರಸಪ್ಪ, ಗ್ರಾಪಂ ಸದಸ್ಯರು, ಗ್ರಾಮದ ಮುಖಂಡ ಬಳೆ ಮಲ್ಲಿಕಾರ್ಜುನ ಸೇರಿ ಅನೇಕರು ಪಾಲ್ಗೊಂಡಿದ್ದರು.