ಕಂಪ್ಲಿ: ನವೋದಯ ಶಾಲೆಗೆ 40 ಆಯ್ಕೆ: ಮಕ್ಕಳಿಗೆ ಸನ್ಮಾನ

ಲೋಕದರ್ಶನ ವರದಿ

ಕಂಪ್ಲಿ 01: ಸುಮಾರು ವರ್ಷಗಳಿಂದ ಕಂಪ್ಲಿ ನಗರದಲ್ಲಿ ಹಲವಾರು ಮಕ್ಕಳನ್ನು  ನವೋದಯ ಶಾಲೆಗೆ ಆಯ್ಕೆ ಮಾಡಿಕಳುಹಿಸಿದ ಕೀತರ್ಿ ಈಸಂಸ್ಥೆಗಿದೆ. ಗ್ರಾಮೀಣ ನಗರ ಪ್ರದೇಶದ ವಿದ್ಯಾರ್ಥಿಗಳ ಸೂಕ್ತ ತರಬೇತಿ ನೀಡಿದ್ದರಿಂದ ಸ್ಪರ್ಧಾತ್ಮಕ  ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಇಲ್ಲಿನ ಸ್ಪೋರ್ತಿ ನವೋದಯ ತರಬೇತಿ ಕೇಂದ್ರದ ಸಂಚಾಲಕ ರಮೇಶ್ ಎನ್.ಶಿವಪೂರ್ ಹೇಳಿದರು. 

ತಾಲೂಕಿನ ನಂ.10ಮುದ್ದಾಪುರ ಗ್ರಾಪಂ ವ್ಯಾಪ್ತಿಯ ಹುಲಿಗೆಮ್ಮ ಕ್ಯಾಂಪಿನ ಸ್ಫೂರ್ತಿ ನವೋದಯ ಕೇಂದ್ರದ ವಿದ್ಯಾರ್ಥಿಗಳು ನವೋದಯ ಶಾಲೆಗೆ ಆಯ್ಕೆಗೊಂಡ 40ವಿದ್ಯಾಥರ್ಿಗಳನ್ನು ಸನ್ಮಾನಿಸಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ 40 ವಿದ್ಯಾರ್ಥಿಗಳು  ನವೋದಯ ಶಾಲೆಗೆ ಆಯ್ಕೆಯಾಗಿದ್ದಾರೆ.90 ವಿದ್ಯಾರ್ಥಿಗಳು  ಮುರಾರ್ಜಿ  ಶಾಲೆಗೆ ಆಯ್ಕೆಯಾಗಿದ್ದಾರೆ ಸಕಾಲದಲ್ಲಿ ಮಕ್ಕಳಿಗೆ ಸೂಕ್ತ ತರಬೇತಿ ನೀಡಿದಲ್ಲಿ ಸ್ಪಧರ್ಾತ್ಮಕ ಪರೀಕ್ಷೆಗಳಲ್ಲಿ ಸುಲಭವಾಗಿ ಯಶಸ್ಸುಗೊಳ್ಳಬಲ್ಲರು. ಮಕ್ಕಳ ಮನಸ್ಸನ್ನರಿತು ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಪ್ರಸಕ್ತ ಸಾಲಿನ ಪ್ರವೇಶಗಳು ಪ್ರಾರಂಭವಾಗಿದ್ದು ಗ್ರಾಮೀಣ ವಿದ್ಯಾರ್ಥಿಗಳಿಗೆ ಹೆಚ್ಚಿನ ಆಧ್ಯತೆ ನೀಡಲಾಗಿದೆ ಎಂದು ಹೇಳಿದರು. 

   ನವೋದಯ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯಗುರು ಮುತ್ತಣ್ಣ ವೈ.ನಂದ್ಯಾಲ ಸೇರಿ ಮಕ್ಕಳು, ಗಣ್ಯರು, ಪೋಷಕರು ಉಪಸ್ಥಿತರಿದ್ದರು.