ಕಡಬಿ 07: ಸಮೀಪದಲ್ಲಿರುವ ತೋಟದಲ್ಲಿನ ಸೋಮಲಿಂಗ ಪುಂಡಲೀಕ ಮಾಳಕ್ಕನವರ ಮನೆಗೆ ರವಿವಾರ ದಿ.7ರಂದು ಬೆಂಕಿ ಬಿದ್ದು ಸುಟ್ಟು ಬೂದಿಯಾಗಿದೆ.
ಘಟನೆ: ಮುಂಜಾನೆ ಮನೆಯ ಪಕ್ಕದಲ್ಲಿರುವ ತಿಪ್ಪೆ ಗುಂಡಿಯಲ್ಲಿ ಒಲೆಯ ಬೂದಿಯನ್ನು ತಂದು ಹಾಕಿದ್ದರು. ಅದರಲ್ಲಿನ ಬೆಂಕಿ ಮನೆಗೆ ತಗುಲಿ ಸುಟ್ಟು ಹೋಗಿದೆ ಮನೆಯಲ್ಲಿನ ರೈತರು ಉಪಯೋಗಿಸುವ ಗಳೆಯ ಸಾಮಗ್ರಿಗಳು, ದವಸ ದಾನ್ಯಗಳು, ಬಾಳೆ ಹಣ್ಣು ಮಾರಿದ 50ಸಾವಿರ ಹಣ, ಗೃಹ ಬಳಕೆ ಸಾಮಾನುಗಳು, ಒಂದು ಬೈಕ್ ಸಂಪೂರ್ಣ ಸುಟ್ಟು ಹಾನಿಯಾಗಿದೆ ಎಂದು ಬಾಲವ್ವ ಪುಂಡಲೀಕ ಮಾಳಕ್ಕನವರ ತಿಳಿಸಿದರು.
ಮನೆಗೆ ಬೆಂಕಿ ಬಿದ್ದ ಕೂಡಲೆ ಅಕ್ಕಪಕ್ಕ ಯಾರು ಇರಲಿಲ್ಲ. ಹಾದಿಯಲ್ಲಿ ಸಂಚೆರಿಸುವವರು ನೋಡಿದಾಗ ಮನೆಗೆ ಬೆಂಕಿ ಹತ್ತಿದ್ದನ್ನು ಕಂಡು ಹೊಲದಲ್ಲಿ ಇದ್ದ ಸಾರ್ವಜನಿಕರು ಬೆಂಕಿ ನುಂದಿಸಲು ಪ್ರಯತ್ನಿಸಿದ್ದಾರೆ. ಆದರೆ ಬೆಂಕಿ ಆರದೆ ಹೋದ ಕಾರಣ ತಕ್ಷಣ ಗೋಕಾಕ ಅಗ್ನಿ ಶ್ಯಾಮಕ ಸಿಬ್ಬಂದಿಗೆ ಕರೆ ಮಾಡಿದ ಕೂಡಲೆ ಬಂದು ಬೆಂಕಿ ನಂದಿಸಿದರು.