ಲೋಕದರ್ಶನವರದಿ
ಶಿಗ್ಗಾವಿ14 : ಕಳೆದ ಶುಕ್ರವಾರ ಸುರಿದ ಬಿರುಗಾಳಿ ಸಹಿತ ಗುಡುಗಿನ ಮಳೆಗೆ ಪಟ್ಟಣದ ವೀರಭದ್ರೇಶ್ವರ ಓಣಿ ಆಶ್ರಯ ಪ್ಲಾಟ್ ಸೇರಿದಂತೆ ವಿವಿಧ ನಗರಗಳಲ್ಲಿ ಅಪಾರ ಹಾನಿ ಸಂಭವಿಸಿದೆ.
ಪಟ್ಟಣದ ವೀರಭದ್ರೇಶ್ವರ ಓಣಿಯಲ್ಲಿ ವಿದ್ಯುತ್ ಕಂಬ ಉರುಳಿ ಬಸವಣ್ಣೆಪ್ಪ ಬೈಲವಾಳ ಅವರ ಬೈಕ್ ನಜ್ಜುಗುಜ್ಜಾಗಿದ್ದು ಅದೇ ಓಣಿಯ ಫಕ್ಕೀರಪ್ಪ ಗಂಜೀಗಟ್ಟಿ ಎಂಬುವವರ ಮನೆಯ ಮೇಲ್ಚಾವಣಿಯ ಶಡ್ಡ್ ಬಿದ್ದು ಮನೆ ಹಾನಿಯಾಗಿದೆ.
ಇನ್ನು ಆಶ್ರಯ ಪ್ಲಾಟ್ನಲ್ಲಿ ವಿದ್ಯುತ್ ಕಂಬ ಬಿದ್ದು ನಡೆದಾಡಲು ಕೆಲಕಾಲ ಅಡಚಣೆಯಾದರೂ ಕೆಇಬಿ ಸಿಬ್ಬಂದಿಯ ಮುಂಜಾಗ್ರತಾ ಕ್ರಮದಿಂದ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಪ್ರತ್ಯಕ್ಷದಶರ್ಿಗಳು ತಿಳಿಸಿದ್ದಾರೆ.
ಒಟ್ಟಾರೆ ಪಟ್ಟಣದಲ್ಲಿ ಬಂದ ಬಿರುಗಾಳಿ ಸಮೇತ ಮಳೆಗೆ ಪಟ್ಟಣದ ವ್ಯಾಪಾರಸ್ಥರ ಅಂಗಡಿಗಳ ಬೋರ್ಡಗಳು ಸೇರಿದಂತೆ ವರ್ಷದ ಮೊದಲ ಬಿರುಸಿನ ಮಳೆಯಾಗಿರುವುದರಿಂದ ಚರಂಡಿಗಳು ತುಂಬಿ ನೀರು ರಸ್ತೆಗೂ ಮತ್ತು ಮನೆಗಳಿಗೆ ನುಗ್ಗಿ ಹಾನಿ ಮಾಡಿದೆ.