ಹಾವೇರಿ24: ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನ ನಡೆದಿದೆ. ಅಂದಾಜು ಶೇ.70.36ರಷ್ಟು ಮತದಾನ ನಡೆದಿದೆ. ಶಾಂತಿಯುತ ಮತದಾನ ನಡೆಯಲು ಸಹಕರಿಸಿದ ಜಿಲ್ಲೆಯ ಜನತೆಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೃಷ್ಣ ಬಾಜಪೇಯಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಲೋಕಸಭಾ ಕ್ಷೇತ್ರದ ವಿಧಾನಸಭಾವಾರು ಮತದಾನ ವಿವರದಂತೆ ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.63.43, ಗದಗ ವಿಧಾನಸಭಾ ಕ್ಷೇತ್ರದಲ್ಲಿ ಶೇ.64.64, ರೋಣ ವಿಧಾನಸಭಾ ಕ್ಷೇತ್ರದಲ್ಲಿ ಶೇ.67.5, ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಶೇ.80.13, ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.60.12, ಬ್ಯಾಡಗಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.73.35, ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ.74.8 ಹಾಗೂ ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ.73.4 ರಷ್ಟು ಮತದಾನವಾಗಿದೆ. ಸಂಜೆ 7 ಗಂಟೆವರೆಗೆ ಜಿಲ್ಲೆಯ 50ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಮತದಾನ ಮುಂದುವರೆದಿದೆ. ಮತದಾನ ನಿಖರ ಶೇ.ವಿವರ ತಡರಾತ್ರಿ ದೊರೆಯಲಿದೆ.
ಈ ಚುನಾವಣೆಯಲ್ಲಿ ಮೊದಲ ಹಂತದಲ್ಲೇ ಬೆಳಿಗ್ಗೆ 9 ಗಂಟೆಯ ವರದಿಯಂತೆ ಶೇ.5.25, ಬೆಳಿಗ್ಗೆ 11 ಗಂಟೆಗೆ ಶೇ.18.10, ಮಧ್ಯಾಹ್ನ 1 ಗಂಟೆಗೆ ಶೇ.32.79, ಮಧ್ಯಾಹ್ನ 3 ಗಂಟೆಗೆ ಶೇ.50.24, ಸಂಜೆ 5 ಗಂಟೆಗೆ ಶೇ63.22 ರಷ್ಟು ಹಾಗೂ ಸಂಜೆ 6 ಗಂಟೆಗೆ ಶೇ. 70.36 ರಷ್ಟು ಮತದಾನವಾಗಿದೆ.
ಇತ್ತೀಚೆಗೆ ಹಾವೇರಿಗೆ ಜಿಲ್ಲಾಧಿಕಾರಿಯಾಗಿ ವಗರ್ಾವಣೆಗೊಂಡ ಕೃಷ್ಣ ಬಾಜಪೇಯಿ ಅವರು ತಮ್ಮ ಹೆಸರನ್ನು ಜಿಲ್ಲೆಯ ದೇವಗಿರಿ ಮತಗಟ್ಟೆಗೆ ವಗರ್ಾಯಿಸಿಕೊಂಡು ಮತದಾನಮಾಡಿದ್ದು ವಿಶೇಷವಾಗಿತ್ತು. ಅಲ್ಲದೆ ಜಿಲ್ಲಾ ಸ್ವೀಪ್ ಸಮಿತಿ ರಾಯಭಾರಿ ಹನುಮಂತಪ್ಪ ಲಮಾಣಿ ಅವರು ಚಿಲ್ಲೂರಬಡ್ನಿ ಗ್ರಾಮದಲ್ಲಿ ಮೊದಲಬಾರಿಗೆ ಮತದಾನ ಮಾಡಿದರು. ವಿಕಲಚೇತನರ ರಾಯಭಾರಿ ಹಸಿನಾ ಹೆಡಿಯಾಲ ಹಾವೇರಿ ನಗರದಲ್ಲಿ ಮತದಾನ ಮಾಡಿದರು.
ಮುಂಜಾನೆ 6 ಗಂಟೆಗೆ ಅಣುಕುಮತದಾನ ನಡೆಸಿದ ಸಿಬ್ಬಂದಿಗಳು 7 ಗಂಟೆಗೆ ವಾಸ್ತವ ಮತದಾನ ಪ್ರಕ್ರಿಯೆ ಆರಂಭಿಸಿದರು. ಹಾವೇರಿ ನಗರದ ಜಿಲ್ಲಾ ಪಂಚಾಯತಿ ಹಳೇ ಕಚೇರಿಯಲ್ಲಿ ಸ್ಥಾಪಿಸಲಾದ ವಿಕಲಚೇತರ ಮತಗಟ್ಟೆಗೆ ಆಗಮಿಸಿದ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಕೆ.ಲೀಲಾವತಿ ಹಾಗೂ ವಿಕಲಚೇತನರ ಮತದಾನ ಜಾಗೃತಿ ರಾಯಭಾರಿ ಹಸೀನಾ ಹೆಡಿಯಾಲ ಅವರು ವಿಕಲಚೇತನರ ಮತಗಟ್ಟೆಯನ್ನು ಉದ್ಘಾಟಿಸಿ ಮತದಾನ ಪ್ರಕ್ರಿಯೆ ಚಾಲನೆ ನೀಡಿದರು.
ಜಿಲ್ಲೆಯಲ್ಲಿ ಸ್ಥಾಪಿಸಲಾದ ಮಾದರಿ ಮತಗಟ್ಟೆಗಳು ವಿಶೇಷ ಚೇತನರ ಮತಗಟ್ಟೆಗಳು ಹಾಗೂ ಸಖಿ ಮತಗಟ್ಟೆಗಳು ಎಲ್ಲರ ಗಮನಸೆಳೆದವು. ಹೊಸಮಠ ಕಾಲೇಜಿನಲ್ಲಿ ಸ್ಥಾಪಿಸಲಾದ ಮತಗಟ್ಟೆಯಲ್ಲಿ ತೆರೆಯಲಾದ ಸೆಲ್ಫಿಕೌಂಟರ್ ಎಲ್ಲರ ಆಕರ್ಷಣೀಯ ಕೇಂದ್ರವಾಗಿತ್ತು. ವೈದ್ಯಕೀಯ ಸೌಲಭ್ಯದ ಕೌಂಟರ್ ಹಾಗೂ ಸ್ಕೌಟ್ ಆಂಡ್ ಗೈಡ್ಸ್ ವಿದ್ಯಾಥರ್ಿಗಳು ಹಿರಿಯ ಮತದಾರರಿಗೆ ನೀಡುತ್ತಿರುವ ನೆರವು ಎಲ್ಲರಿಗೂ ಮೆಚ್ಚುಗೆಯಾಯಿತು. ವಿಶೇಷವಾಗಿ ಮತಗಟ್ಟೆ ಕೇಂದ್ರದಲ್ಲಿ ಸಣ್ಣ ಮಕ್ಕಳಿಗಾಗಿ ವಿವಿಧ ಆಟಿಕೆಗಳನ್ನು ನೀಡಿ ಮಕ್ಕಳ ಖುಷಿಗೆ ಕಾರಣವಾಗಿತ್ತು. ಸಖಿ ಮತಗಟ್ಟೆಯ ಉಸ್ತುವಾರಿ ವಹಿಸಿದ್ದ ಸಮಾಜ ಕಲ್ಯಾಣಾಧಿಕಾರಿ ಚೈತ್ರಾ ಮತದಾರರಿಗೆ ನೀಡುತ್ತಿದ್ದ ಮಾರ್ಗದರ್ಶನ ಗಮನ ಸೆಳೆಯಿತು.
ಬಣ್ಣಗಳಿಂದ ಅಲಂಕೃತಗೊಂಡಿದ್ದ ಸಖಿ ಮತಗಟ್ಟೆಗಳಲ್ಲಿ ಸಮವಸ್ತ್ರ ಧರಿಸಿದ ಮಹಿಳಾ ಅಧಿಕಾರಿಗಳು ಕರ್ತವ್ಯ ನಿರತರಾಗಿದ್ದರು.
ಜಿಲ್ಲೆಯ ಬಹುಪಾಲು ಮತಗಟ್ಟೆಗಳಲ್ಲಿ ಅತ್ಯಂತ ಸಂಭ್ರಮದಿಂದ ಜನರು ಮತದಾನದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಯಾವುದೇ ಅಹಿತಕರ ಘಟನೆಗಳು, ಮಾತಿನಚಕಮಕಿ, ನೀತಿ ಸಂಹಿತೆ ಉಲ್ಲಂಘನೆಯಂತಹ ಘಟನೆಗಳು ವರದಿಯಾಗಿಲ್ಲ. ಮತಗಟ್ಟೆಯಲ್ಲಿ ನೇಮಕಗೊಂಡ ಸಿಬ್ಬಂದಿಗಳು ಅತ್ಯಂತ ಸೌಜನ್ಯವಾಗಿ ಮತದಾರರನ್ನು ಸ್ವಾಗತಿಸುವುದು ವಿಶೇಷವಾಗಿತ್ತು. ವಿಕಲಚೇತನರ ಮತಗಟ್ಟೆ ಸೇರಿದಂತೆ ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಹಿರಿಯ ನಾಗರಿಕರಿಗೆ ಹಾಗೂ ವಿಕಚೇತನರಿಗೆ ಗಾಲಿ ಖುಚರ್ಿ ವ್ಯವಸ್ಥೆ ಮಾಡಲಾಗಿತ್ತು. ಸಹಾಯಕರು ವ್ಹೀಲ್ ಚೇರಗಳಲ್ಲಿ ಕೂಡ್ರಿಸಿಕೊಂಡು ಹಿರಿಯರಿಗೆ ಹಾಗೂ ವಿಕಲಚೇತನರಿಗೆ ಸೇವೆ ನೀಡುತ್ತಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಯಿತು.
ಹಿರಿಯ ನಾಗರಿಕರಿಗೆ, ವಿಕಲಚೇತನರಿಗೆ, ಮಹಿಳೆಯರಿಗಾಗಿ ಚುನಾವಣಾ ಆಯೋಗ ವಿಶೇಷ ಕಾಳಜಿ ವಹಿಸಿರುವುದು ಅತ್ಯಂತ ಸಂತೋಷಕರವಾದ ಸಂಗತಿಯಾಗಿದೆ ಎಂದು ಮತದಾರರು ಹರ್ಷ ವ್ಯಕ್ತಪಡಿಸಿದರು.
ತಾಯಂದಿರೊಂದಿಗೆ ಮತಗಟ್ಟೆಗೆ ಬಂದಿದ್ದ ಮಕ್ಕಳು ಪಕ್ಕದಲ್ಲೇ ಆಟಿಕೆ ಸಾಮಾನುಗಳನ್ನು ಹಿಡಿದು ಆಟವಾಡುತ್ತಿರುವುದು ಎಲ್ಲರಿಗೂ ಮುದನೀಡುತ್ತಿತ್ತು. ವಿಲಚೇತನರ, ಸಖಿ ಹಾಗೂ ಮಾದರಿ ಮತಗಟ್ಟೆಗಳು ಮತದಾನದ ಸಂಭ್ರಮಕ್ಕೆ ಸಾಕ್ಷಿಯಾಗಿದ್ದವು. ಎಲ್ಲಕ್ಕಿಂತ ಮಿಗಿಲಾಗಿ ಮತಗಟ್ಟೆ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳಿಗೆ ಬಿಸಿಯೂಟ ಸಹಾಯಕರು ಬಡಿಸಿದ ಊಟ, ಉಪಹಾರ ವ್ಯವಸ್ಥೆ ಬಗ್ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಯಿತು. ಕೆಲವೆಡೆ ಸಣ್ಣಪುಟ್ಟ ಮತ ಯಂತ್ರಗಳ ದೋಷ ಕಂಡುಬಂದರು ನಿವರ್ಿಘ್ನವಾಗಿ ಶಾಂತಿಯುತ ಮತದಾನ ನಡೆದಿದೆ.