ಲೋಕದರ್ಶನ ವರದಿ
ಹೊಸಪೇಟೆ: ಆಸಕ್ತಿ, ಸಾಧಿಸುವ ಛಲವಿದ್ದರೆ ಏನು ಬೇಕಾದರೂ ಸಾಧಿಸಬಹುದು, ನಿರಂತರ ಪರಿಶ್ರಮ ಯಶಸ್ಸಿಗೆ ದಾರಿ ಮಾಡಿಕೊಡುತ್ತದೆ ಎಂದು ಯುವ ಪತ್ರಕರ್ತ ಪ್ರಭಾಕರ್ ತಿಳಿಸಿದರು.
ನಗರದ ಶ್ರೀಶಂಕರ್ ಆನಂದ ಸಿಂಗ್ ಸರ್ಕಾರಿ ಪ್ರಥಮ ದಜರ್ೆ ಕಾಲೇಜಿನ ಪತ್ರಿಕೋದ್ಯಮ ವಿಭಾಗದಿಂದ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಬೇಕು ಎಂದರೆ ಪ್ರಾರಂಭದಲ್ಲಿ ದಿನ ನಿತ್ಯ ದಿನಪತ್ರಿಕೆಗಳು ಓದುವ ಮತ್ತು ಬರೆಯುವ ಆಸಕ್ತಿಯನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಬೆಳಸಿಕೊಳ್ಳಬೇಕು.
ಪತ್ರಿಕೋದ್ಯಮವೇ ನಮತ್ತ ಕೈ ಬೀಸಿ ಉದ್ಯೋಗ ನೀಡುವುದಿಲ್ಲ, ನಾವೇ ಉದ್ಯೋಗವನ್ನು ಸೃಷ್ಠಿಸಿಕೊಳ್ಳಬೇಕು. ಪತ್ರಿಕೋದ್ಯಮ ರಂಗದಲ್ಲಿ ನೂರಾರು ಅವಕಾಶಗಳು ಲಭ್ಯವಿದೆ. ಇರುವ ಸಮಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು, ಸೋಷಿಯಲ್ ಮೀಡಿಯಾಗಳ ಮೂಲಕವೇ ತಮ್ಮ ಪ್ರತಿಭೆಯನ್ನು ಹೊರಹಾಕಬಹುದು ಎಂದರು. ಜೊತೆಗೆ ತಮ್ಮ ಪತ್ರಿಕೋದ್ಯಮ ಜೀವನದ ಅನುಭವಗಳನ್ನು ಹಂಚಿಕೊಂಡರು. ತಾವೇ ಸಂಪಾದಕರಾದಿ, ವರದಿಗಾರರಾಗಿ, ಛಾಯಾಚಿತ್ರಗಾರರಾಗಿ, ಪುಟ ವಿನ್ಯಾಸಕಾರನಾಗಿ ಸೂರ್ಯ ಪ್ರಭ ವಿದ್ಯಾಥರ್ಿ ಪ್ರಾಯೋಗಿಕ ವಾರಪತ್ರಿಕೆ, ಬಳ್ಳಾರಿ ಧ್ವನಿ ವಿದ್ಯಾಥರ್ಿ ಪ್ರಾಯೋಗಿಕ ಮಾಸಪತ್ರಿಕೆ ಹಾಗೂ ಪ್ರಭಾ ನ್ಯೂಸ್ ಯೂಟ್ಯೂಬ್ ಚಾನೆಲ್ನ ಸಂಪೂರ್ಣ ವಿವರಗಳು ನೀಡಿ, ಅದನ್ನು ಪ್ರಾರಂಭಿಸಿ ಅಭಿವೃದ್ಧಿ ಪಡಿಸುವಲ್ಲಿ ಅವರು ಪಟ್ಟಿರುವ ಶ್ರಮವನ್ನು, ಅನುಭವಗಳನ್ನು ತಿಳಿಸಿದರು. ಯುವಕರಿಗೆ ಸ್ಪೂತರ್ಿಯ ಮಾತುಗಳನ್ನಾಡಿದರು.
ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಾಗೂ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಸಿ.ಮಂಜುನಾಥ್ ಮಾತನಾಡಿ, ಪ್ರತಿಯೊಬ್ಬರಲ್ಲಿ ಒಂದೊಂದು ಪ್ರತಿಭೆ ಇರುತ್ತದೆ, ಆ ಪ್ರತಿಭೆಯನ್ನು ನಿಮ್ಮಲ್ಲಿ ನೀವೇ ಗುರುತಿಸಿಕೊಳ್ಳಬೇಕು. ನಿರಂತರ ಪರಿಶ್ರಮದಿಂದ ಯಶಸ್ಸು ಖಂಡಿತ ದೊರೆಯುತ್ತದೆ ಎಂದು ಸಲಹೆ ನೀಡಿದರು.
ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಯುವ ಪತ್ರಕರ್ತ ಪ್ರಭಾಕರ್ ಗೆ ಪುಸ್ತಕ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಮುರಳೀಧರ ಬಿ.ಕೆ, ಪ್ರಕಾಶ್, ಪತ್ರಿಕೋದ್ಯಮ ವಿದ್ಯಾಥರ್ಿಗಳು ಹಾಗೂ ಮುಕ್ತ ಆಯ್ಕೆ ವಿದ್ಯಾರ್ಥಿಗಳು ಇದ್ದರು.