ಗದಗ 19: ಚುನಾವಣಾ ಆಯೋಗದ ನಿರ್ದೇಶನದ ಅನ್ವಯ ಲೋಕಸಭಾ ಚುನಾವಣೆ ಸಂಬಂಧಿಸಿದಂತೆ ಮತದಾರ ನೊಂದಣಿ ಹಾಗೂ ತಪ್ಪದೇ ಮತದಾನ ಮಾಡುವ ಕುರಿತು ಜಾಗೃತಿ ಮೂಡಿಸಲು ಗದಗ ಜಿಲ್ಲಾ ಸ್ವೀಪ್ ಸಮಿತಿ ಆಯೋಜಿಸುತ್ತಿರುವ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಎಲ್ಲ ಸಂಘ ಸಂಸ್ಥೆಗಳು ಆಸಕ್ತಿಯಿಂದ ಭಾಗವಹಿಸಲು ಜಿ.ಪಂ. ಸಿ.ಇ.ಓ. ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಮಂಜುನಾಥ ಚವ್ಹಾಣ ಮನವಿ ಮಡಿದರು.
ಗದಗ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಕಚೇರಿಯಲ್ಲಿಂದು ಜರುಗಿದ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮತದಾರರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಔಷಧ ಮಾರಾಟಗಾರರು, ಪೆಟ್ರೋಲ್ ಬಂಕ್ ಮಾಲಿಕರ, ವಿವಿಧ ವ್ಯಾಪಾರಸ್ಥರ, ಮಧ್ಯ ಮಾರಾಟಗಾರರ ಹಾಗೂ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘಗಳು ತಮ್ಮ ಸಂಪರ್ಕಕ್ಕೆ ಬರುವ ಗ್ರಾಹಕರಿಗೆ, ಯಾವುದೇ ಆಮಿಷಕ್ಕೆ ಒಳಗಾಗದೇ ತಪ್ಪದೇ ಮತದಾನ ಮಾಡಲು ಪ್ರೇರೆಪಿಸುವಂತೆ ಕ್ರಮ ವಹಿಸಬೇಕು. ಜಿಲ್ಲೆಯಲ್ಲಿರುವ ಎಲ್ಲ ಪೆಟ್ರೋಲ್ ಬಂಕ್, ಔಷಧ ಮಳಿಗೆಗಳಲ್ಲಿ ಮತದಾನ ಜಾಗೃತಿ ಬ್ಯಾನರಗಳನ್ನು ಪ್ರದಶರ್ಿಸಬೇಕು. ವಿವಿಧ ವ್ಯಾಪಾರಸ್ಥರು ಕೂಡಾ ತಮ್ಮ ಅಂಗಡಿಗಳಲ್ಲಿ ಸ್ವಯಂ ಪ್ರೇರಣೆಯಿಂದ ಮತದಾನ ಜಾಗೃತಿ ಬ್ಯಾನರಗಳನ್ನು ಪ್ರದಶರ್ಿಸಲು ಮಂಜುನಾಥ ಚವ್ಹಾಣ ಸಲಹೇ ಮಾಡಿದರು. ಜಿಲ್ಲೆಯ ತಾಲೂಕು, ಹೊಬಳಿ ಮಟ್ಟದಲ್ಲಿರುವ ಜಿಲ್ಲೆಯ ಎಲ್ಲ ಅಂಚೆ ಕಚೇರಿಗಳಿಂದ ಬಟವಾಡೆ ಆಗುವಂತಹ ಪತ್ರಗಳ ಮೇಲೆ ಮತದಾನ ಜಾಗೃತಿಯ ಮೊಹರು ಹಾಕಬೇಕು. ಜೊತೆಗೆ ಕರಪತ್ರಗಳನ್ನು ಹಂಚಲು ಕ್ರಮ ವಹಿಸಲು ಅಂಚೆ ಅಧೀಕ್ಷಕರಿಗೆ ಸೂಚಿಸಿದರು. ಜಿಲ್ಲೆಯಲ್ಲಿರುವ ಎಲ್ಲ ವೈದ್ಯಕಿಯ ಸಂಸ್ಥೆಗಳು ನರ್ಸಿಂಗ್ ಹೋಂ ವೈದ್ಯರುಗಳು ಸಹ ತಮ್ಮ ಸಂಸ್ಥೆಗಳಲ್ಲಿ ಮತದಾನ ಜಾಗೃತಿ ಬ್ಯಾನರ ಪ್ರದಶರ್ಿಸಲು ಸೂಚಿಸಿದರು. ಸಂಘ ಸಂಸ್ಥೆಗಳು ಮತದಾನ ಜಾಗೃತಿ ಕುರಿತು ಕಾರ್ಯಕ್ರ ಆಯೋಜಿಸಲು ಮುಂದಾದಲ್ಲಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಜಿ.ಪಂ. ಸಿ.ಇ.ಓ ಮಂಜುನಾಥ ಚವ್ಹಾಣ ತಿಳಿಸಿದರು.
ಜಿಲ್ಲಾ ಪಂಚಾಯತ ಉಪ ಕಾರ್ಯದಶರ್ಿ ಪ್ರಾಣೇಶ ರಾವ, ಜಿ.ಪಂ. ಯೋಜನಾ ನಿದರ್ೇಶಕ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಸದಸ್ಯ ಕಾರ್ಯದಶರ್ಿ ಟಿ.ದಿನೇಶ, ಪೆಟ್ರೋಲ್ ಬಂಕ್ ಮಾಲೀಕರ, ಮದ್ಯ ಮಾರಾಟಗಾರರ, ಔಷಧ ಮಾರಾಟಗಾರರ ಸಂಘಗಳ ಪಧಾಧಿಕಾರಿಗಳು, ಬಿ.ಎಸ್.ಎನ್.ಎಲ್, ಭಾರತೀಯ ವೈದ್ಯರ ಸಂಘ ಹಾಗೂ ಅಂಚೆ ಇಲಾಖೆ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.