ದಾನದಲ್ಲಿ ಶ್ರೇಷ್ಠವಾದ ದಾನ ನೇತ್ರ ದಾನ: ಗೀತಾ ಕಾಕೋಳ

ಲೋಕದರ್ಶನವರದಿ

ರಾಣೇಬೆನ್ನೂರು11: ಎಲ್ಲ ದಾನಗಳಲ್ಲೂ ನೇತ್ರ ದಾನ ಬಹು ಶ್ರೇಷ್ಠವಾಗಿದೆ,  ಕಣ್ಣಲ್ಲ್ಲದವರಿಗೆ ಕಣ್ಣು ದಾನ ನೀಡುವುದರ ಮೂಲಕ ನಿಜವಾದ ಹಾಗೂ ಪ್ರಾಮಾಣಿಕವಾದ ಮಾನವೀಯತೆಯನ್ನು ಮೆರೆಯಲು ಮುಂದಾದಾಗ ಮಾತ್ರ  ಕಣ್ಣು ದಾನ ಮಾಡಿದವರಿಗೂ, ಕಣ್ಣು ಪಡೆದವರಿಗೂ ಒಂದು ತರಹದ ವಿಶೇಷ ಸಂತಸ, ಸಮಾಧಾನವಾಗುತ್ತದೆ ಎಂಬುದನ್ನು ಅರಿತಾಗ ಮಾನವೀಯತೆಗೆ ಬೆಲೆ ಬರುತ್ತದೆ ಎಂದು ಲಯನೆಸ್ ಸಂಸ್ಥೆಯ ಅಧ್ಯಕ್ಷೆ ಗೀತಾ ಕಾಕೋಳ ಹೇಳಿದರು.

     ಶನಿವಾರ ಸ್ಥಳೀಯ ಲಯನ್ಸ್ ಶಾಲೆಯಲ್ಲಿ ಲಯನ್ಸ್ ಮತ್ತು  ಲಯನೆಸ್ ಸಂಸ್ಥೆ, ಸ್ವಾಭಿಮಾನಿ ಕನರ್ಾಟಕ ರಕ್ಷಣಾ ವೇದಿಕೆ, ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆ, ಕಂಚಿ ಕಾಮಕೋಟಿ ಮೆಡಿಕಲ್ ಟ್ರಸ್ಟ್, ಆರೋಗ್ಯ ಇಲಾಖೆ, ದಿ.ಬಸಮ್ಮ ದಿ.ಶಿವಪ್ಪ ಕುರುಗೋಡಪ್ಪನವರ ಹಾಗೂ ಮಕ್ಕಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಏರ್ಪಡಿಸಿದ್ದ ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರಚಿಕಿತ್ಸಾ ಶಿಭಿರವನ್ನು ಉದ್ಘಾಟಿಸಿ ಮಾತನಾಡಿದರು. 

     ಸ್ವಾಕರವೇ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ ಮಾತನಾಡಿ ಅಕಾಲಿಕ ನಿಧನದ ಆನಂತರ ಅಂಧರಿಗೆ ಮನುಷ್ಯನು  ಕಣ್ಣುಗಳನ್ನು ದಾನ ಮಾಡುವುದರಿಂದ ಇನ್ನೊಬ್ಬರ ಬಾಳಿಗೆ ಬೆಳಕಾಗಬೇಕು, ನಿಧನದಿಂದ ಕಣ್ಣುಗಳು ಭೂಮಿಯಲ್ಲಿ ಲೀನವಾಗುವುದು, ಅಗ್ನಿಗೆ ಸ್ಪರ್ಶವಾಗುವುದರಿಂದ ಕಣ್ಣುಗಳು ಶವದ ಜೊತೆಗೆ ಮಣ್ಣಿಗೆ ಸೇರುತ್ತವೆ. ಸಮಾಜದಲ್ಲಿನ ಅನೇಕ ಸಂಸ್ಥೆಗಳು ನೇತ್ರ ದಾನದ ಮೂಲಕ ದೃಷ್ಠಿಹೀನರಿಗೆ ಬೆಳಕು ನೀಡುವ ಪುಣ್ಯದ ಕೆಲಸ ಮಾಡಬೇಕು ಎಂದರು.

      ನಗರ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ  410ಕ್ಕೂ ಅಧಿಕ ಜನರು ಶಿಬಿರದ ಪ್ರಯೋಜನ ಪಡೆದುಕೊಂಡರು. ಇದರಲ್ಲಿ 110 ಜನರು ಶಸ್ತ್ರಚಿಕಿತ್ಸೆಗೆ ಆಯ್ಕೆಗೊಂಡರು.  ಶಂಕರ್ ಕಣ್ಣಿನ ಆಸ್ಪತ್ರೆಯ ಡಾ.ವಿದ್ಯಾಶಾಸ್ತ್ರಿ,  ಡಾ.ಶಂಕರ, ವೆಂಕಟೇಶ, ಮತ್ತಿತರರು  ನೇತ್ರ ತಪಾಸಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಸಂಸ್ಥೆಗಳ ವತಿಯಿಂದ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

    ಎಂಎಸ್ ಅರಕೇರಿ, ಪ್ರೋ|| ಬಿ.ಬಿ. ನಂದ್ಯಾಲ, ರೇವಣಗೌಡ ಗ್ಯಾನಗೌಡ್ರ, ಬಸವರಾಜ ಕುರುಗೋಡಪ್ಪನವರ, ಬಸವರಾಜ ಹುಲ್ಲತ್ತಿ, ಯುವರಾಜ ಬಾರಾಟಕ್ಕೆ,  ಪ್ರಭು ಹಲಗೇರಿ, ಎಲ್ ಜಿ ಶೆಟ್ರ, ಬಸವರಾಜ ಬಡಿಗೇರ, ಕೊಟ್ರೇಶ ಎಮ್ಮಿ, ರಾಜಶೇಖರಪ್ಪ, ಚೋಳಪ್ಪ ಕಸವಾಳ, ದಿನೇಶ ನಾಯ್ಕ, ಶಂಕರ ಕಾಕಿ, ಶಿವಯೋಗಿ ಹಳ್ಳಳ್ಳಿ, ಅಭಿಷೇಕ ಬದಾಮಿ, ಸುಲ್ತಾನ ದೊಡ್ಡಮನಿ, ವಿಶ್ವನಾಥ ರಾಹುತನಕಟ್ಟಿ, ಶಿವಕುಮಾರ ಹರಕನಹಾಳ, ಶಿವಕುಮಾರ ಜಾಧವ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಯ ಪದಾಧಿಕಾರಿಗಳು ಮತ್ತಿತರರು ಇದ್ದರು.