ಗ್ರಾಮೀಣ ಸಾಹಿತ್ಯ ಸಂಸ್ಕೃತಿ ರಕ್ಷಿಸಲು ಜೀರಗ್ಯಾಳ ಕರೆ

ಲೋಕದರ್ಶನ ವರದಿ 

ಮಾಂಜರರಿ  27: ಬದಲಾಗುತ್ತಿರುವ ಪಾಶ್ಚತ್ಯ ಸಂಸ್ಕೃತಿಯಲ್ಲಿ ಜನರು ತಮ್ಮ ದೇಶದ ಸಂಸ್ಕೃತಿ ಮರೆತು, ಗ್ರಾಮೀಣ ಸಾಹಿತ್ಯಕ್ಕೆ ಧಕ್ಕೆ ತರುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಅನೇಕ ಬದಲಾವಣೆಗಳು ಕಂಡುಬರುತ್ತಿದ್ದು, ಒಳ್ಳೇಯ ಸಮಾಜ ನಿಮರ್ಿಸಲು ಗ್ರಾಮೀಣ ಸಾಹಿತ್ಯ ಹಾಗೂ ಸಂಸ್ಕೃತಿ ಉಳಿಸಬೇಕೆಂದು ಸಾಂಸ್ಕೃತಿಕ ಸಂಘಟಕರು ರಜನಿ ಜೀರಗ್ಯಾಳ ಕರೆ ನೀಡಿದರು.

ಸಮೀಪದ ಜನವಾಡ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ, ಮೌಲ್ಯ ಸಂಪದ ಸ್ವಯಂ ಸೇವಾ ಸಂಸ್ಥೆ ರಾಮದುರ್ಗ ಹಾಗೂ ಗಡಿನಾಡ ಕನ್ನಡ ಸೇವಾ ಬಳಗ ಇವರ ಸಹಯೋಗದಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ಉತ್ತಮ ಸಮಾಜ ನಿಮರ್ಾಣಕ್ಕೆ ಅನೇಕ ಶರಣರು, ಸಾಹಿತಿಗಳು ಮಹಾಪುರುಷರು ಶ್ರಮಿಸಿದ್ದಾರೆ.ಇವರು ಹೇಳಿಕೊಟ್ಟ ಪುರಾಣ,ಕವನ,ವಚನ ಹಾಗೂ ಸಂಸ್ಕೃತಿ ಇನ್ನು ಗ್ರಾಮೀಣ ಭಾಗದಲ್ಲಿ ಉಳಿದಿದೆ. ಮೊಬೈಲ ಹಾವಳಿ ಹೆಚ್ಚಾಗಿ ಪುಸ್ತಕ ಸಂಸ್ಕೃತಿ ಕಡಿಮೆಯಾಗಿದೆ. ಪರಿಣಾಮ ಕುಟುಂಬದಲ್ಲಿ ಸಂವಾದ ಕಡಿಮೆ, ಸಮಾಜದ ವಿಕೃತಿಯಾಗತೊಡಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶೈಲಾ ಸೊಗಲದ ಮಾತನಾಡಿ ಕಳೆದ 13 ವರ್ಷಗಳಿಂದ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಎಲ್ಲರ ಸಹಕಾರ್ಯ ಹಾಗೂ ಸಾಹಿತಿಗಳ ಬೆಂಬಲದಿಂದ ವಿವಿಧ ಕ್ಷೇತ್ರಗಳಲ್ಲಿಯ ಪ್ರತಿಭಾವಂತರನ್ನು ಗುರುತಿಸಲು ಸಾಧ್ಯವಾಗುತ್ತಿದೆ. ಸೋಮಶೇಖರ ಸೊಗಲದರವರ ಕಾರ್ಯ ಹಾಗೂ ಸಾಮಾಜೀಕ ಸೇವೆ ನಮಗೆ  ಪ್ರೇರಣೆಯಾಗಿದ್ದು ಶಿಕ್ಷಣ, ಸೇವೆ, ಸಂಸ್ಕೃತಿಗೆ ಹೆಚ್ಚಿನ ಆದ್ಯತೆ ನೀಡಿರುವದಾಗಿ ಹೇಳಿದರು.

ಹಾಲಶುಗರ ಕಾಖರ್ಾನೆ ನಿದರ್ೇಶಕ ರಾಮಗೊಂಡ ಪಾಟೀಲ ಸಮಾರಂಭವನ್ನು ಉದ್ಗಾಟಿಸಿದರು ಈ ಸಂದರ್ಭದಲ್ಲಿ ಬಿ.ಎ.ಗುಂಡಕಲ್ಲೆ, ಆರ್.ಎಸ್.ಪಚಂಡಿ,ಚಂದ್ರಕಾಂತ ಹುಕ್ಕೇರಿ,ಯಲ್ಲೇಶ ಕಾಳೆ, ಮಹಾಲಿಂಗ ಶಾಸ್ತ್ರಿ, ಡಾ.ಬಿ.ಎ.ಮಾನೆ, ಬಿ.ಎಸ.ಅಲುಗುಸುಂದರಂ, ಅಪ್ಪಾಸಾಬ ಮರಜಕ್ಕೆ,  ಕೃಷ್ಣಾಬಾಯಿ ಮಗದುಮ್ಮ, ಎಂ.ಎಮ್.ಖೋತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 40 ಕ್ಕೂ ಹೆಚ್ಚು ಜನರನ್ನು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಹಿರಿಯ ಸಾಹಿತಿ ಆರ.ಎಸ.ಪಾಟೀಲ, ಗ್ರಾ.ಪ.ಂ ಅಧ್ಯಕ್ಷೆ ಮೇಘಾ ಪೂಜಾರಿ, ಉಪಾಧ್ಯಕ್ಷೆ ಸೋನಾಲಿ ಮಗದುಮ್ಮ, ಸದಸ್ಯ ಉದಯಕುಮಾರ ಪಾಟೀಲ, ಪಿರಗೋಂಡಾ ಮಗದುಮ್ಮ, ಬ್ಲಾನಿ ಡಿಸೋಜಾ, ಚಿದಾನಂದ ಸರವಡೆ, ಬಾಬಾಸಾಬ ಘಾಟಗೆ, ಬಾಹುಬಲಿ ನರವಾಡೆ, ಶಕುಂತಲಾ ಜನವಾಡೆ, ಬಿ.ಟ.ಸೋಮೆಗೌಡ, ಜೆ.ಬಿ.ಜನವಾಡೆ, ರಾಜಶ್ರೀ ಸರವಡೆ, ಸುಭಾಷ ಪಾಟೀಲ, ಅಪ್ಪಾಸಾಬ ಮಾಣಕೆ ಸೇರಿದಂತೆ ಸಾಧಕರು, ಶಾಲಾ ಮಕ್ಕಳು, ಮೌಲ್ಯ ಸಂಪದ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.