ಪವರ್ ಸ್ಟಾರ್ ಡಾ.ಪುನೀತ್ ರಾಜಕುಮಾರ ರವರ ಹುಟ್ಟು ಹಬ್ಬದ ಪ್ರಯುಕ್ತ ಯುವರತ್ನ ಪ್ರಶಸ್ತಿ ಕಾರ್ಯಕ್ರಮ

Yuvratna Award program on the occasion of Power Star Dr. Puneeth Rajkumar's birthday

ಪವರ್ ಸ್ಟಾರ್ ಡಾ.ಪುನೀತ್ ರಾಜಕುಮಾರ ರವರ ಹುಟ್ಟು ಹಬ್ಬದ ಪ್ರಯುಕ್ತ ಯುವರತ್ನ ಪ್ರಶಸ್ತಿ ಕಾರ್ಯಕ್ರಮ

ಗದಗ 03:250 ಜನರಿಗೆ ಯುವರತ್ನ ಪ್ರಶಸ್ತಿಯನ್ನ 5 ವಿಭಾಗಗಳಲ್ಲಿ ವಿತರಿಸಲು ಉದ್ದೇಶ ಹೊಂದಿದ್ದು,  ಕನ್ನಡ ಫಿಲಂ ಚೇಂಬರ್ ಸಂಸ್ಥೆಯ ವತಿಯಿಂದ ಕರ್ನಾಟಕ ರತ್ನ ಪವರ್ ಸ್ಟಾರ್ ಡಾ.ಪುನೀತ್ ರಾಜಕುಮಾರ ರವರ ಹುಟ್ಟು ಹಬ್ಬದ ಪ್ರಯುಕ್ತ 2025 ನೇ ಸಾಲಿನ ಮಾರ್ಚ- 23 ರಂದು ನಡೆಯಲಿರುವ ಯುವರತ್ನ ಪ್ರಶಸ್ತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಾಗೂ ಸಾಧನೆ ಹಾದಿಯಲ್ಲಿ ಸಾಗುತ್ತಿರುವ ಸಾಧಕರಿಗೆ ಮಾರ್ಚ-23 ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಸನ್ಮಾನಿಸಲಾಗುವುದಾಗಿ ಕನ್ನಡ ಫಿಲಂ ಚೇಂಬರ್ ಅಧ್ಯಕ್ಷ ಎಂ ಎಸ್ ರವೀಂದ್ರ ತಿಳಿಸಿದರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಯುವರತ್ನ ಪ್ರಶಸ್ತಿ,ಸಂಗೀತ ಸೇವಾರತ್ನ, ಸಮಾಜ ಸೇವಾ ರತ್ನ ಪ್ರಶಸ್ತಿ, ಕಲಾ ಸೇವಾ ರತ್ನ ಪ್ರಶಸ್ತಿ, ಶಿಕ್ಷಣ ಸೇವಾ ರತ್ನ ಮುಂತಾದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು. ಅದಕ್ಕಾಗಿ  ನೊಂದಣಿ ಶುಲ್ಕ ರೂ. 2000/- ಇರುತ್ತದೆ.ಆಸಕ್ತರು ನಿಮ್ಮ ಸ್ವ ವಿವರಗಳನ್ನು ಫೆಬ್ರವರಿ 28, 2025 ರ ಒಳಗೆ ಅಧ್ಯಕ್ಷರಾದ ಎಂ. ಎಸ್‌. ರವೀಂದ್ರ ಅವರ 9900844344 ಈ ವಾಟ್ಸಾಪ್ ನಂಬರ್ ಗೆ ಕಳುಹಿಸಿ ಕೊಡಬೇಕೆಂದು ಹೇಳುದರ ರೈತರು, ವಿದ್ಯಾರ್ಥಿಗಳು,ಡಾಕ್ಟರ್ಸ, ನೌಕರರು,ಶಿಕ್ಷಕರು, ಅಧಿಕಾರಿಗಳು, ಸಮಾಜ ಸೇವಕರು,ಚಲನಚಿತ್ರದ ಎಲ್ಲ ವಿಭಾಗದ ಕಲಾವಿದರು, ನಿರ್ದೇಶಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಅರ್ಜಿ ಸಲ್ಲಿಸಬಹುದಾಗಿದೆ ಎಂದು ರವೀಂದ್ರ  ತಿಳಿಸಿದರು.  ಪತ್ರಿಕಾ ಗೋಷ್ಠಿ ಸಂದರ್ಭದಲ್ಲಿ ಫಿಲಂ ಚೇಂಬರ್ ಪ್ರಧಾನ ಕಾರ್ಯದರ್ಶಿ ನರಸಿಂಹಯ್ಯ ಎನ್, ಫಿಲಂ ಚೇಂಬರ್ ಸದಸ್ಯರಾದ ಯಲ್ಲಪ್ಪ, ವಿಶ್ವನಾಥ, ಪ್ರಭು, ಶ್ರೀಮತಿ ಪದ್ಮಶ್ರೀ, ಶ್ರೀಮತಿ ಪೂರ್ಣಿಮಾ, ಶ್ರೀಮತಿ ಪರಿಮಳಾ, ಶ್ರೀಮತಿ ವರಮಹಾಲಕ್ಷ್ಮೀ ಸೇರಿದಂತೆ ಇತರರಿದ್ದರು.