ಯುವಕರು ಗ್ರಾಮೀಣ ಕ್ರೀಡೆ ಕಲೆ ಗೌರವಿಸಲಿ: ವಿವೇಕರಾವ

ರಾಯಬಾಗ 05: ಇಂದಿನ ಯುವ ಜನಾಂಗ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗದೇ ನಮ್ಮ ದೇಶದ ಗ್ರಾಮೀಣ ಕ್ರೀಡೆಗಳು, ಜಾನಪದ ಸಾಹಿತ್ಯ, ಕಲೆಗಳ ಸೊಗಡುಗಳನ್ನು ಗೌರವಿಸಿ, ಬೆಳೆಸಿ, ಮುಂದುವರಿಸಿಕೊಂಡು ಹೋಗಬೇಕೆಂದು ವಿಧಾನ ಪರಿಷತ್ ಸದಸ್ಯ ವಿವೇಕರಾವ ಪಾಟೀಲ ಹೇಳಿದರು.  

    ಶುಕ್ರವಾರ ರಾಯಬಾಗ ರೈಲ್ವೆ ಸ್ಟೇಶನ್ದ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ ವಿವಿಧ ಸ್ಪಧರ್ೆಗಳ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಕಬಡ್ಡಿ, ಖೋಖೋ, ಭಾರ ಎತ್ತುವದು, ಓಡಿ ಗುರಿ ಮಟ್ಟುವದು ಮುಂತಾದ ಗ್ರಾಮೀಣ ಕ್ರೀಡೆಗಳು ಮನುಷ್ಯನನ್ನು ಶಾರೀರಿಕವಾಗಿ ಬಲಪಡಿಸಿದರೆ ಕುದುರೆ ಸ್ಪಧರ್ೆ, ಜೋಡು ಕುದುರೆ ಗಾಡಿ ಸ್ಪಧರ್ೆಗಳು ಜಾನುವಾರಗಳ ಶಕ್ತಿ ಪ್ರದರ್ಶನದ ಪ್ರತೀಕವಾಗಿರುವದರಿಂದ ಇಂಥ ಕ್ರೀಡೆಗಳ ಆಯೋಜನೆಯಿಂದ ಜಾನುವಾರುಗಳೂ  ಆರೋಗ್ಯ ಪೂರ್ಣವಾಗಿರಲು ಸಾಧ್ಯವಿದೆ ಎಂದು ಹೇಳಿದರು.

ಕುದುರೆ ಗಾಡಿ ಶರ್ಯತ್ತಿನಲ್ಲಿ ಸಾಗರ ಮೇತ್ರಿ (ಅಂಕಲಿ) ಪ್ರಥಮ, ಕಿಶೋರ ಪೂಜಾರಿ (ಪಟ್ಟಣಕಡೋಲಿ) ದ್ವಿತೀಯ, ರಾಹುಲ ಹುಗ್ಗಿ (ಶಿರೋಳ) ತೃತೀಯ ಬಹುಮಾನ ಪಡೆದರು. ಸೈಕಲ್ ಶರ್ಯತ್ತಿನಲ್ಲಿ ಬಸವರಾಜ ದಳವಾಯಿ (ಧರ್ಮಟ್ಟಿ)ಪ್ರಥಮ,  ವಾಸು ಬೋರಗಾಂವ್ (ನಿಪನಾಳ)ದ್ವಿತೀಯ ಹಾಗೂ ಬಾಳಾಸಾಬ ಬಸ್ತವಾಡ (ಬೆಳಕೂಡ) ತೃತೀಯ ಬಹುಮಾನ ಪಡೆದುಕೊಂಡರು. ಜಾತ್ರೆಯ ನಿಮಿತ್ಯ ಕುದುರೆ ಓಟ ಹಾಗೂ ಕುಸ್ತಿ ಪಂದ್ಯಾಟಗಳು ಜರುಗಿದವು. 

    ಮಹಾವೀರ ಶೆಟ್ಟಿ, ರಾಯಪ್ಪ ಗೊಂಡೆ, ಗುಣಪಾಲ ಬಡೋರೆ, ರಮೇಶ ಕುಂಬಾರ, ಸಾತಗೌಡಾ ಪಾಟೀಲ, ಕಲ್ಲಪ್ಪ ನಾಗರಾಳೆ, ಸಂಜು ಬಾವಚೆ, ಸಂತೋಷ ತೇರದಾಳೆ, ಕುಮಾರ ಹೊಸಕೋಟೆ, ತಾನಾಜಿ ರೂಪಾಳೆ, ಬಸಗೌಡಾ ಪಾಟೀಲ, ಹಾಲಪ್ಪ ಅಳಗೂಡೆ ಹಾಗೂ ಲಕ್ಷ್ಮೀದೇವಿ ಟ್ರಸ್ಟ ಕಮೀಟಿ ಸದಸ್ಯರು, ಗ್ರಾಮಸ್ಥರು ಇದ್ದರು.