'ಯುವಕರು ಶಿಕ್ಷಣದ ಜೊತೆಗೆ ಕೌಶಲ್ಯ ಜ್ಞಾನ ಹೊಂದಿ'

ಲೋಕದರ್ಶನ ವರದಿ

ಚಿಕ್ಕೋಡಿ 11: ಸ್ಪಧರ್ಾತ್ಮಕ ಯುಗದಲ್ಲಿ ಯುವಕರು ಶಿಕ್ಷಣದ ಜೊತೆಗೆ ಕೌಶಲ್ಯ ಜ್ಞಾನವನ್ನು ಹೊಂದಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕೆಂದು ನೆಹರು ಯುವ ಕೇಂದ್ರದ ಲೇಖಾಪಾಲಕರಾದ ಆರ್.ಆರ್.ಮುತಾಲಿದೇಸಾಯಿ ಯುವಕರಿಗೆ ಕರೆ ನೀಡಿದರು.

ಅವರು ಕಳೆದ ದಿ.10ರಂದು ತಾಲೂಕಿನ ಬೇಡಕಿಹಾಳ ಗ್ರಾಮದಲ್ಲಿ ನೆಹರು ಯುವ ಕೇಂದ್ರ ಬೆಳಗಾವಿ ಲಕ್ಷ್ಮೀದೇವಿ ಸುಗಮ ಸಂಗೀತ ಹಾಗೂ ಸಾಂಸ್ಕೃತಿಕ ಕಲಾ ಸಂಘ, ವಡ್ರಾಳ ಲಠ್ಠೆ ಶಿಕ್ಷಣ ಸಂಸ್ಥೆಯ ಕುಸುಮಾವತಿ ಮಿಜರ್ೆ ಕಲಾ ವಾಣಿಜ್ಯ ಪದವಿ ಮಹಾವಿದ್ಯಾಲಯ ಎನ್.ಎಸ್.ಎಸ್ ಘಟಕ ಹಾಗೂ ಎನ್.ಸಿ.ಸಿ. ಘಟಕ ಬೇಡಕಿಹಾಳ -ಶಮನೇವಾಡಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಧನಾತ್ಮಕ ಚಿಂತನೆ ಮತ್ತು ಶಿಕ್ಷಣ ಮತ್ತು ಜಾಗೃತಿ ಅರಿವು ಕಾರ್ಯಕ್ರಮ ಸಸಿಗೆ ನೀರು ಎರುಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಉಪಾಧ್ಯಕ್ಷ ಜಯಕುಮಾರ ಅ ಖೋತ ವಹಿಸಿದ್ದರು. ವೇದಿಕೆಯ ಮೇಲೆ ಪ್ರಾಚಾರ್ಯರಾದ ವಿ.ಎಸ್. ಜೋರೆ, ನೆಹರು ಯುವ ಕೇಂದ್ರದ ಕಾರ್ಯಕ್ರಮ ಸಂಯೋಜನಾಧಿಕಾರಿಗಳಾದ ಎಮ್.ವಿಕಾಸ ಹಾಗೂ ಕಾಲೇಜಿನ ಉಪನ್ಯಾಸಕ, ಉಪನ್ಯಾಸಕಿ ವೃಂದ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ನಂತರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕರಾದ ಮಾಣಿಕೇಶ್ವರಿ ಶಿರಗನ್ನವರ, ರಾಘವೇಂದ್ರ ಲಂಬುಗೋಳ, ಸಂಜೀವ ಮೇತ್ರಿ ಇವರ ಮಾರ್ಗದರ್ಶನಲದಲ್ಲಿ ಧನಾತ್ಮಕ ಚಿಂತನೆ ಕುರಿತು ಉಪನ್ಯಾಸ ನೀಡಲು ಸಂಪನ್ಮೂಲ ವ್ಯಕ್ತಿಗಳಾದ ಮಹಾದೇವ ಮೋಕಾಶಿ ಪ್ರಧಾನಮಂತ್ರಿ ಮಹತ್ತಾಕಾಂಕ್ಷಿ ಯೋಜನೆ ಮತ್ತು ಸೇವಾ ಪರಮೋಧರ್ಮದ ಬಗ್ಗೆ ಸವಿಸ್ತಾರವಾಗಿ ಉಪನ್ಯಾಸ ನೀಡಿದರು, ಎರಡನೇಯದಾಗಿ ಡಾ. ಜಿ.ಎಸ್.ಸುತಾರ ವಯಕ್ತಿಕ ಶೌಚಾಲಯ ಮಹತ್ವ ,ಸ್ವಯಂ ಸೇವೆ ಜಾಗೃತಿ ಬಗ್ಗೆ ಯುವಕರಿಗೆ ಉಪನ್ಯಾಸ ನೀಡಿದರು. ತದನಂತರದಲ್ಲಿ ಡಾ. ಎನ್.ಆರ್.ಪಾಟೀಲ ಪ್ರಾಂಶುಪಾಲರು ಸರಕಾರಿ ಪ.ಪೂ.ಕಾಲೇಜು ಸದಲಗಾ ಇವರು ಕಡ್ಡಾಯ ಮತದಾನದ ಮಹತ್ವ ಮತ್ತು ಸಮಾಜದಲ್ಲಿ ಅಂಟಿಕೊಂಡಿರತಕ್ಕಂತಹ ಪಿಡುಗುಗಳ ಬಗ್ಗೆ ಉಪನ್ಯಾಸ ನೀಡಿದರು. ಕೊನೆಯದಾಗಿ ಕೆ.ಎಸ್.ಚೈತ್ರಾ ಉಪನ್ಯಾಸಕರು ಕೆ.ಎಮ್.ಎ.ಸಿ ಕಾಲೇಜು ಬೇಡಕಿಹಾಳ ಇವರು ನಾಯಕತ್ವ ಹಾಗೂ ವ್ಯಕ್ತಿತ್ವ ವಿಕಸ ಹಾಗೂ ಗ್ರಾಮೀಣ ಕೌಶ್ಯಲದ ಬಗ್ಗೆ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಾರ್ಥನಾ ಗೀತೆಯನ್ನು ಕುಮಾರಿ ಪಲ್ಲವಿ ಕರಿಗಾರ ನಿರ್ವಹಿಸಿದರು. ಅತಿಥಿಗಳ ಪರಿಚಯವನ್ನು ಶಿವಲೀಲಾ ನಿರ್ವಹಿಸಿದರು. ಬಿ.ಎಸ್.ಇಟನಾಳ ಸ್ವಾಗತಿಸಿದರು. ಶ್ರದ್ಧಾ ಪಾಟೀಲ ವಂದಿಸಿದರು.