ಲೋಕದರ್ಶನ ವರದಿ
ಬಳ್ಳಾರಿ25: ನಗರದ ಪಂಚಾಕ್ಷರಿ ಕರಾಟೆ ಸಂಸ್ಥೆ, ವಿದ್ಯಾಥರ್ಿಗಳು ದಿ.20, 21ರಂದು ಶ್ರೀಲಂಕ ದೇಶದ ನವಾರ ಇಲಾಯಿ ಅಡಿಟೋರಿಯಂ ಹಾಲ್ನಲ್ಲಿ ನಡೆದ ಇಂಡೋ ಮತ್ತು ಶ್ರೀಲಂಕ ಅಂತರಾಷ್ಟ್ರೀಯ ಕರಾಟೆ ಸ್ಪಧರ್ೆಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿ ಬಂಗಾರ ಮತ್ತು ಬೆಳ್ಳಿ ಪದಕವನ್ನು ಪಡೆದಿದ್ದಾರೆ.
ಈ ಸ್ಪಧರ್ೆಯಲ್ಲಿ ಇಂಡೋ ಮತ್ತು ಶ್ರೀಲಂಕ ದೇಶದಿಂದ ಸುಮಾರು 500ಕ್ಕೂ ಹೆಚ್ಚು ವಿದ್ಯಾಥರ್ಿಗಳು ಭಾಗವಹಿಸಿದ್ದರು. ಭಾರತದಿಂದ ವಿವಿಧ ರಾಜ್ಯಗಳಿಂದ ಸುಮಾರು 150ಕ್ಕೂ ಹೆಚ್ಚು ವಿದ್ಯಾಥರ್ಿಗಳು ಈ ಸ್ಪಧರ್ೆಯಲ್ಲಿ ಭಾಗವಹಿಸಿದ್ದರು, ಈ ಸ್ಪಧರ್ೆಯನ್ನು ಹಾಲ್ ಜಪಾನ್ ಕರಾಟೆ ಡೂ, ಕೆಂಡ್ರೋಕಾನ್ ಕರಾಟೆ ಅಸೋಸಿಯೇಷನ್ ಶ್ರೀಲಂಕ ಈ ಸ್ಪಧರ್ೆಯನ್ನು ಆಯೋಜಿಸಿದ್ದರು.
ಈ ಸ್ಪಧರ್ೆಯಲ್ಲಿ 15 ವರ್ಷ ಮೇಲ್ಪಟ್ಟ ಕಟಾ ಮತ್ತು ಸ್ಪೈರಿಂಗ್ ವಿಭಾಗದಲ್ಲಿ ನಮ್ಮ ಸಂಸ್ಥೆಯ ವಿದ್ಯಾಥರ್ಿಯಾದ ರಾಜು ಗೋಲ್ಡ್ ಮೆಡಲನ್ನು ಪಡೆದಿದ್ದಾರೆ ಮತ್ತು 15ವರ್ಷಕ್ಕಿಂತ ಕೆಳ ಮಟ್ಟದ ವಿಭಾಗದ ಕಟಾ ಮತ್ತು ಸ್ಪೈರಿಂಗ್ ವಿಭಾಗದಲ್ಲಿ ಒಂದು ಬಂಗಾರ, ಬೆಳ್ಳಿ ಪದಕವನ್ನು ಭುವನ್ಗುಪ್ತ ಪಡೆದಿದ್ದಾನೆ.
ಇಂತಹ ಸ್ಪಧರ್ೆಯಲ್ಲಿ ನಮ್ಮ ಜಿಲ್ಲೆಯಿಂದ ಭಾಗವಹಿಸಿ ಸ್ಪಧರ್ೆಯಲ್ಲಿ ಬಂಗಾರ ಮತ್ತು ಬೆಳ್ಳಿ ಪದಕವನ್ನು ಪಡೆಯುವುದರ ಮೂಲಕ ಬಳ್ಳಾರಿ ನಗರಕ್ಕೆ ಕೀತರ್ಿ ತಂದಿದ್ದಾರೆ. ಸಾಧನೆ ಮಾಡಿದ ವಿದ್ಯಾಥರ್ಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಬಂಡ್ರಾಳ್ ಮೃತ್ಯುಂಜಯಸ್ವಾಮಿ, ಉಪಾಧ್ಯಕ್ಷರಾದ ರವಿಚಂದ್ರನ್ ಶಬರಿ ವಿದ್ಯಾಥರ್ಿಗಳನ್ನು ಅಭಿನಂದಿಸಿದ್ದಾರೆ.