ಲೋಕದರ್ಶನ ವರದಿ
ಬೆಳಗಾವಿ, 12: ಯುವ ಉದ್ಯಮದಾರರು ಸೃಜನಶೀಲತೆ ಹಾಗೂ ಸೋಲನ್ನು ಸ್ವೀಕರಿಸುವ ಗುಣವನ್ನು ಬೆಳಸಿಕೊಳ್ಳಬೇಕು ಎಂದು ಕಲಬುಗರ್ಿಯ ಕೆ-ಲ್ಯಾಂಪ ಮಹಿಳಾ ಸಂಘದ ಕಾರ್ಯದಶರ್ಿ ಸರ್ವಮಂಗಳ ಪಾಟೀಲ್ ಯುವ ಉದ್ಯಮಿಗಳಗೆ ಕರೆ ನೀಡಿದರು.
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ ಮಹಿಳಾ ಸಬಲೀಕರಣ ಘಟಕದಿಂದ ಆಯೋಜಿಸಿದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಯಮಶೀಲ ಕೌಶಲ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಯುವ ಉದ್ಯಮಿಗಳು ಸವಾಲನ್ನು ಸ್ವೀಕರಿಸಿ ತಮ್ಮಲ್ಲಿರುವ ಉದ್ಯಮ ಕೌಶಲವನ್ನು ಪ್ರತಿಬಿಂಬಿಸಿ ಹೊಸ ಉದ್ಯಮಗಳನ್ನು ಪ್ರಾರಂಭಿಸುವುದರ ಮೂಲಕ ದೇಶದ ಸುಸ್ಥಿರ ಅಭಿವೃದ್ಧಿಯಲ್ಲಿ ಪಾಲಗೊಳ್ಳುವುದರ ಮೂಲಕ ದೇಶದ ನೀರುದ್ಯೋಗ ಸಮಸ್ಯೆಯನ್ನು ಬಗೆಹರಿಸಬೇಕೆಂದು ಅಭಿಪ್ರಾಯಪಟ್ಟರು. ಯುವ ಉದ್ಯಮಿಗಳು ತಮ್ಮ ಉದ್ಯಮ ಕ್ಷೇತ್ರದಲ್ಲಿ ಯಶಸ್ವೀಯಾಗಬೇಕಾದರೆ ಶಿಸ್ತು, ಅಂತರ ಪ್ರೇರಣಾ, ಸಮಯ ಪಾಲನೆ, ಹಾಗೂ ಅಡಳಿತ ಕಲೆ ಮುಂತಾದ ಕೌಶಲಗಳನ್ನು ಜೀವನ ಅನುಭವದ ತಳಹದಿಯ ಮೇಲೆ ಪಡೆದು ಯಶಸ್ವೀಯಾಗಬೇಕೆಂದು ತಿಳಿಸಿದರು. ಎಲ್ಲಾ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ ಮಹಿಳೆಯರು ಉದ್ಯಮ ಕ್ಷೇತ್ರದಲ್ಲಿ ಎತ್ತರವಾಗಿ ಬೆಳೆಯಬೇಕು ಎಂದರು.
ಕಾರ್ಯಕ್ರಮದ ಕೊನೆಯಲ್ಲಿ ಜುಡೋ ಟ್ರೇನರ್ ತ್ರೀವೆನಿ ಸಿಂಗ್ ಮಾರ್ಗದರ್ಶನದಲ್ಲಿ ವಿದ್ಯಾಥರ್ಿಗಳು ಜುಡೋ ಪ್ರದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ರಂಗರಾಜ ವನದುರ್ಗ, ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಶಂಕರಾನಂದ ಬನಶಂಕರಿ, ತ್ರೀವೇಣಿಸಿಂಗ್, ಜಿತೇಂದ್ರ ಸಿಂಗ್, ಪ್ರೋ. ಮನಿಷಾ ನೇಸರ್ಕರ್ ಪ್ರೋ. ವಿ.ಎಂ. ಗಾಯಕವಾಡ್ ಹಾಗೂ ಶ್ರೀಮತಿ ಪೂಜಾ ಹಳಿಯಾಳ, ಅಧ್ಯಾಪಕ ವೃಂದ ಹಾಗೂ ವಿದ್ಯಾಥರ್ಿಗಳು ಇದ್ದರು. ಇದೆ ವೇಳೆ ವಿದ್ಯಾಥರ್ಿಗಳಲ್ಲಿ ಉಧ್ಯಮಶೀಲತೆ ಬೆಳೆಯಲಿ ಎನ್ನುವ ಉದ್ದೇಶದಿಂದ ವಿವಿಯಲ್ಲಿ ಆಹಾರ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು.