ಯಲುಬುರ್ಗ: ಪೋಲಿಸ್ ಇಲಾಖೆ ಉತ್ತಮ ಕಾರ್ಯ ಮಾಡುತ್ತಿದೆ: ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರೇಣುಕಾ ಹೇಳಿಕೆ

ಲೋಕದರ್ಶನ ವರದಿ

ಯಲುಬುರ್ಗ 19: ಜಿಲ್ಲೆಯಲ್ಲಿ ಪೋಲಿಸ್ ಇಲಾಖೆ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು ಇವರ ಕಾರ್ಯ ತೃಪ್ತಿ ತಂದಿದೆ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಎಲ್ಲಾ ಮುಂಜಾಗೃತ ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರೇಣುಕಾ ಸುಕುಮಾರ ಹೇಳಿದರು.

ನಗರದ ಪೋಲಿಸ್ ಠಾಣೆಗೆ ಬೇಟಿ ನೀಡಿ ಪರಿಶಿಲನೆ ಮಾಡಿ ಅವರು ಮಾತನಾಡಿದರು. ಪೋಲಿಸರ ಕುಟುಂಬಗಳಿಗಿರಿರುವ ಸಮಸ್ಯೆಗಳನ್ನ ಆಲಿಸಿದ ಅವರು ಇಲಾಖೆಯ ಸಿಬ್ಬಂದಿಗಳು ಹಾಗೂ ಕುಟುಂಬದವರನ್ನು ಬೇಟಿ ಮಾಡಿ ಮಾತನಾಡಿದರು ಹಾಗೂ ಪೋಲಿಸ್ ಸಿಬ್ಬಂದಿಯ ಮಕ್ಕಳಿಗೆ ಗುಲಾಬಿ ಹೂ ನೀಡುವ ಮೂಲಕ ಮಕ್ಕಳೊಂದಿಗೆ ಬೆರೆತು ಮಕ್ಕಳ ಆಟ ಪಾಠದ ಬಗ್ಗೆ ವಿಚಾರಿಸಿದರು,

ಈ ಸಂದರ್ಭದಲ್ಲಿ ಸಿಪಿಐ ರಮೇಶ ರೊಟ್ಟಿ, ಪಿಎಸ್ಐ ಬಸವರಾಜ ಅಡವಿಭಾವಿ, ಆಂಜನೇಯ, ಸೇರಿದಂತೆ ಪೋಲಿಸ್ ಸಿಬ್ಬಂದಿಗಳು ಕುಟುಂಬಸ್ಥರು ಮಕ್ಕಳು ಹಾಜರಿದ್ದರು.