ಯಲುಬುರ್ಗ : ಕೆರೆ ಅಭಿವೃದ್ಧಿ ಮಾಡುವದು ಅವಶ್ಯಕ: ಶಾಸಕ ಆಚಾರ

ಲೋಕದರ್ಶನ ವರದಿ

ಯಲುಬುರ್ಗ  26: ನಮ್ಮ ತಾಲೂಕಿನಲ್ಲಿ ಕೆರೆಗಳ ಅಭಿವೃದ್ಧಿಯ ಪರ್ವ ಪ್ರಾರಂಭವಾಗಿದೆ ಅದು ನಮ್ಮ ಜಿಲ್ಲೆಯ ಗವಿಸಿದ್ದೇಶ್ವರ ಮಹಾಸ್ವಾಮೀಗಳ ಆಶಿರ್ವಾದ್ ದದಿಂದ ಸಾಕಷ್ಟು ಧಾನಿಗಳ ಸಹಾಯದಿಂದ ಗ್ರಾಮಸ್ಥರೆ ತಮ್ಮ ಗ್ರಾಮದ ಕೆರೆಯನ್ನು ಅಭಿವೃದ್ಧಿ ಪಡಿಸುತ್ತಿರುವದು ಒಂದು ಉತ್ತಮ ಕಾರ್ಯವಾಗಿದೆ ಎಂದು ಶಾಸಕ ಹಾಲಪ್ಪ ಆಚಾರ ಹೇಳಿದರು.

ತಾಲೂಕಿನ ಮುಧೋಳ ಗ್ರಾಮದ ಕೆರೆ ಪುನಶ್ಚೇತನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜನತೆ ಸರಕಾರದ ಅನುಧಾನವನ್ನು ಅವಲಂಬಿಸದೆ ಸ್ವ ಶಕ್ತಿಯಿಂದ ಕೆರೆ ಉಳೆತ್ತುವದು ಸಾಮಾನ್ಯ ಕೆಲಸವಲ್ಲಾ ಮನುಷ್ಯನಿಗೆ ಅವಶ್ಯವಾಗಿ ಬೇಕಾಗಿರುವದು ನೀರು ಇಂದು ನಾವು ಕೆರೆಗಳನ್ನ ನಿರ್ಲಕ್ಷೀಸಿದ್ದರಿಂದ ನೀರಿನ ಬವಣೆ ಹೇಳತಿರದು ಇಗಲಾದರು ಜನತೆ ಜಾಗೃತೆಗೊಂಡಿರುವದು ಖುಷಿ ತಂದಿದೆ ನಿಮ್ಮ ಕೈಲಾದಷ್ಟು ಅಭಿವೃದ್ಧಿಯನ್ನು ಮಾಡಿ ನಾನು ನಿಮ್ಮ ಜೊತೆ ಇರುತ್ತೇನೆ.

ನೀರಾವರಿ ವಿಷಯದಲ್ಲಿ ಜನರ ದಾರಿ ತಪ್ಪಿಸುವ ಕೆಲಸ ನಮ್ಮ ತಾಲೂಕಿನಲ್ಲಿ ನಿರಂತರವಾಗಿ ನಡೆಯುತ್ತಿದೆ ಇಷ್ಟು ವರ್ಷ ನಮ್ಮನ್ನ ಆಳಿದ ರಾಜಕೀಯ ನಾಯಕರು ನೀರಾವರಿ ಬಗ್ಗೆ ಚಕಾರ ಎತ್ತಲಿಲ್ಲಾ ಇಗ ಸೋತ ನಂತರ ನೀರಾವರಿಯ ಬಗ್ಗೆ ಅವರಿಗೆ ಜ್ಞಾನೋದಯವಾಗಿದೆ ಆದರೆ ಅದರಿಂದ ಏನು ಪ್ರಯೋಜನ ಇಲ್ಲಾ ಅದನ್ನು ಅರಿತು ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಇಗಲಾದರು ನಿಲ್ಲಿಸಬೇಕು, ಜಿಂದಾಲ್, ಕಲ್ಯಾಣಿಯಂತಹ ಉದ್ದಿಮೆದಾರರು ತಮಗೆ ಇಷ್ಟ ಬಂದಲ್ಲಿ ನೀರನ್ನು ಕೊಂಡ್ಯೊತ್ತಿದ್ದಾರೆ ಆದರೆ ನಮಗೆಕೆ ಅದು ಸಾದ್ಯವಿಲ್ಲಾ ನನ್ನ ಕನಸು ನೀರಾವರಿಯಾಗಿದೆ ಹಾಗೂ ಕಳೆದ ಬಜೆಟ್ನಲ್ಲಿ ಮುಖ್ಯಮಂತ್ರಿಯವರಿಗೆ ಪತ್ರ ಬರೆದು ಒತ್ತಾಯಿಸಿದ್ದರಿಂದ 210 ಕೋಟಿ ರೂಗಳನ್ನ ಬಿಡುಗಡೆಗೊಳಿಸಿದ್ದಾರೆ, ಯಾರೋ ಮಾಡಿದ ಕೆಲಸಕ್ಕೆ ನಾನೇ ಮಾಡಿರುವದು ಎಂದು ಹೇಳಿಕೊಳ್ಳುವ ಭಂಡತನದ ರಾಜಕಾರಣಿ ನಾನಲ್ಲಾ ನಿಮ್ಮ ಮುಧೋಳ ಗ್ರಾಮವನ್ನು ಹಲವಾರು ಭಾರಿ ಸುವರ್ಣ ಗ್ರಾಮ ಎಂದು ಘೋಷಣೆ ಮಾಡಿ ಕೋಟ್ಯಾಂತರ ರೂಗಳನ್ನ ನೀಡಿದ್ದಾರೆ ಆದರೆ ಆ ಅನುಧಾನ ದುರುಪಯೋಗವಾಗಿದೆ ಮತ್ತು ನಮ್ಮ ತಾಲೂಕಿನ ಯರೇಹಂಚಿನಾಳ ಮತ್ತು ಬಿನ್ನಾಳ ಗ್ರಾಮದ ಕೆರೆಗಳಿಗೆ ಅನುಧಾನ ಬಿಡುಗಡೆಗೊಂಡರು ಕಾಮಗಾರಿ ಮಾಡದೆ ಹಣ ಲೂಟಿ ಹೊಡೆಯಲು ಮುಂದಾಗಿದ್ದರು ಅದನ್ನು ತಡೆದು ಇಂದು ಕಾಮಗಾರಿ ಪ್ರಾರಂಭಮಾಡಿಸಿದ್ದೇನೆ ಇಲ್ಲಿಯವರೆಗೆ ನಮ್ಮ ತಾಲೂಕಿನಲ್ಲಿ ಬರಿ ಹಣ ದರೋಡೆ ಕಾಮಗಾರಿಗಳೇ ನಡೆದಿದ್ದಾವೆ ಇನ್ನೂ ಮುಂದೆ ಅವುಗಳಿಗೆ ಅವಕಾಶ ಇಲ್ಲ ಎಂದು ಅವರು ಹೇಳಿದರು.

ಗುರುಪಾದೇಶ್ವರ ಮಹಾಸ್ವಾಮೀಗಳು ಗುಲಗಂಜಿ ಮಠ ರೋಣ ಮತ್ತು ಶ್ರೀ ಸಿದ್ದರಾಮ ಸ್ವಾಮೀಗಳು ನಿಡಗುಂದಿಕೊಪ್ಪ ಅವರು ಮಾತನಾಡಿ ಗ್ರಾಮಸ್ಥರ ಈ ಒಂದು ಕಾರ್ಯ ಅತ್ಯುತ್ತಮವಾದದ್ದು ಇದಕ್ಕೆ ನಮ್ಮ ಸಹಾಯ ಸಹಕಾರ ಮಾರ್ಗದರ್ಶನ ಖಂಡಿತ ಇರುತ್ತದೆ ಯಾವುದೆ ಲೋಪವಾಗದಂತೆ ಕೆರೆಯನ್ನು ಅಭಿವೃದ್ಧಿ ಪಡಿಸಿ ಎಂದರು.

ಈ ಸಂದರ್ಭದಲ್ಲಿ ಗ್ರಾಪಂ ಅದ್ಯಕ್ಷೆ ವಿಜಯಲಕ್ಷ್ಮೀ ತಳವಾರ, ಕೆರೆ ಅಭಿವೃದ್ಧಿ ಸಮಿತಿ ಅದ್ಯಕ್ಷರಾದ ಹನುಮಂತರಾವ್ ದೇಸಾಯಿ, ಉಪಾದ್ಯಕ್ಷರಾದ ರತನ್ ದೇಸಾಯಿ, ಮುಖಂಡರಾದ ಹೇಮರಡ್ಡಿ ಮುಂಡರಗಿ, ಎ ಜಿ ಭಾವಿಮನಿ, ಶಿವಕುಮಾರ ನಾಗಲಾಪೂರಮಠ, ರುದ್ರಯ್ಯ ಬಿಳಗಿಮಠ,  ಈರಮ್ಮ ಮಂಡಲಗೇರಿ, ಅರಣ್ಯ ಇಲಾಖೆಯ ಅಂದಪ್ಪ ಕುರಿ, ಪಿಡಿಓ ಪಕ್ಕೀರಪ್ಪ ಕಟ್ಟಿಮನಿ, ಎಸ್ಬಿಎಮ್ನ ಭೀಮಪ್ಪ ಹವಳಿ, ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.