ಯಲಬುರ್ಗಾ: ಕ್ರೀಡೆಯಿಂದ ಮನುಷ್ಯನ ಆರೋಗ್ಯ ವೃದ್ಧಿ: ಸಿಪಿಐ ರಮೇಶ

ಲೋಕದರ್ಶನ ವರದಿ

ಯಲಬುರ್ಗಾ  08: ಪ್ರತಿಯೊಬ್ಬರು ಅತ್ಯಂತ ಅವಶ್ಯವಾಗಿ ಕ್ರೀಡೆಯಲ್ಲಿ ಭಾಗವಹಿಸಬೇಕು ಅಂದಾಗ ಆರೋಗ್ಯವಂತರಾಗಿ ಜೀವನ ಸಾಗಿಸಬಹುದು ಎಂದು ಯಲಬುಗರ್ಾ ಸಿಪಿಐ ರಮೇಶ ರೋಟ್ಟಿ ಹೇಳಿದರು,

ಪಟ್ಟಣದ ತಾಲೂಕ ಕ್ರೀಡಾಂಗಣದಲ್ಲಿ ಪೋಲಿಸ್ ಇಲಾಖೆ, ಕಂದಾಯ ಇಲಾಖೆ, ನ್ಯಾಯಾಂಗ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಪತ್ರಕರ್ತರ ತಂಡಗಳ ಮದ್ಯೆ ನಡೆದ ಸೌಹಾರ್ದಯುತ ಕ್ರೀಕೆಟ್ ಪಂದ್ಯಾವಳಿಗೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ವರ್ಷ ಪೂರ್ತಿ  ತಮ್ಮ ತಮ್ಮ ಇಲಾಖೆಯ ಕರ್ತವ್ಯ ಮಾಡುವದರಲ್ಲಿಯೇ ಎಲ್ಲರೂ ಕಾಲ ಕಳೆಯುತ್ತಾರೆ ಅದರಂತೆ ಎಲ್ಲಾ ಇಲಾಖೆಯವರು ಒಟ್ಟಿಗೆ ಸೇರಿ ಕ್ರೀಡಾಕೂಟದಲ್ಲಿ ಭಾಗವಹಿಸುವದು ಒಳ್ಳೆಯ ಬೆಳವಣಿಗೆಯಾಗಿದೆ ಕ್ರೀಡಾಪಟುಗಳಿಗೆ ನಮ್ಮ ಇಲಾಖೆಯಿಂದ ಯಾವಾಗಲು ಸಹಾಯ ಸಹಕಾರ ಇರುತ್ತದೆ ಎಂದರು.

ಹಿರಿಯ ಶ್ರೇಣಿ ನ್ಯಾಯಾದೀಶೆ ಶುಭಾ ಮಾತನಾಡಿ ಇಂತಹ ಒಂದು ಸೌಹಾರ್ದಯುತ ಪಂದ್ಯಗಳು ನಡೆಯುವದರಿಂದ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಪೋಲಿಸ್ ಇಲಾಖೆಯವರು ಮಾಡಿದ ಈ ಒಂದು ಕಾರ್ಯ ಉತ್ತಮವಾದದ್ದು ಎಂದರು.

ಪಿಎಸ್ಐ ಬಸವರಾಜ ಅಡವಿಭಾವಿ ಮಾತನಾಡಿ ನಾವು ಹಾಗೂ ಪತ್ರಕರ್ತರು ಸೇರಿ ಪಂದ್ಯಗಳನ್ನ ಆಡಬೇಕು ಎನ್ನುವದು ಬಹಳ ದಿನಗಳ ಬೆಡಿಕೆಯಾಗಿತ್ತು ಅದರಂತೆ ಇಂದು ವಿವಿಧ ಇಲಾಖೆಗಳನ್ನ ಜೊತೆಗೂಡಿಸಿಕೊಂಡು ಅತ್ಯಂತ ಅಚ್ಚುಕಟ್ಟಾಗಿ ಪಂದ್ಯಾವಳಿಗಳು ನಡೆದದ್ದು ಆಯೋಜನೆ ಮಾಡಿದ್ದಕ್ಕು ಸಾರ್ಥಕವಾಯಿತು ಎಂದರು.

ಕೊನೆಯ ಪಂದ್ಯದಲ್ಲಿ ಕಂದಾಯ ಇಲಾಖೆ ಹಾಗೂ ಪತ್ರಕರ್ತರ ತಂಡದ ನಡುವೆ ಅಂತಿಮ ಪಂದ್ಯ ಏರ್ಪಟ್ಟು ಪತ್ರಕರ್ತರ ತಂಡ ಜಯಗಳಿಸಿ ಮೊದಲನೆ ಸ್ಥಾನವನ್ನ ಪಡೆಯಿತು, ಕಂದಾಯ ಇಲಾಖೆ, ದ್ವೀತಿಯ ಸ್ಥಾನ, ಆರೋಗ್ಯ ಇಲಾಖೆ ತೃತೀಯ ಸ್ಥಾನ ಪಡೆಯಿತು,

ಈ ಸಂದರ್ಭದಲ್ಲಿ ಕಿರಿಯ ಶ್ರೇಣಿ ಸಿವೀಲ್ ನ್ಯಾಯಾದೀಶರಾದ  ಶ್ರೀಶೈಲ್ ಬಾಗಡೆ, ತಹಸೀಲ್ದಾರ ವೈ ಬಿ ನಾಗಠಾಣ, ತಾಲೂಕ ವೈದ್ಯಾಧಿಕಾರಿಗಳಾದ ಡಾ, ಪ್ರಕಾಶ, ಬೆವೂರು ಠಾಣೆ ಪಿಎಸ್ಐ ಆಂಜನೇಯ, ಡಾ,ಶೇಖರ ಭಜಂತ್ರಿ, ತಾಲೂಕ ವಕೀಲರ ಸಂಘದ ಅದ್ಯಕ್ಷ ರಾಜಶೇಖರ ನಿಂಗೋಜಿ, ಆದೇಶ ಹುಬ್ಬಳ್ಳಿ, ಸುಧೀರ್ ಕೊರ್ಲಳ್ಳಿ, ಮಲ್ಲು ಜಕ್ಕಲಿ, ನಾಗರಾಜ ಬಿನ್ನಾಳ, ಕಲ್ಲಪ್ಪ ಕರಮುಡಿ, ಪೋಲಿಸ್ ಸಿಬ್ಬಂದಿ ಸೇರಿದಂತೆ ಅನೇಕರು ಹಾಜರಿದ್ದರು.