ಲೋಕದರ್ಶನ ವರದಿ
ಯಲುಬುರ್ಗಾ 28: ತಾಲೂಕಿನ ಕಲ್ಲಭಾವಿ ಕೆರೆ ಹೂಳೆತ್ತುವ ಕಾಮಗಾರಿ ಅತ್ಯಂತ ಭರದಿಂದ ಸಾಗಿದ್ದು ಪ್ರತಿದಿನ ದಾನಿಗಳು ಆಗಮಿಸಿ ಸಹಾಯ ಸಹಕಾರ ನೀಡುತ್ತಿದ್ದು ಕೆರೆ ಅಭಿವೃದ್ಧಿಯಾಗುತ್ತಿದೆ ಎಂದು ಕಲ್ಲಭಾವಿ ಕೆರೆ ಸೇವಾ ಸಮಿತಿ ಅದ್ಯಕ್ಷ ರಾಚಪ್ಪ ಹುಳ್ಳಿ ಹೇಳಿದರು.
ತಾಲೂಕಿನ ಮರಕಟ್ ಗ್ರಾಮಸ್ಥರು ನೀಡಿದ ದೇಣಿಗೆಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ತಾಲೂಕು ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ದಾನಿಗಳು ಕೆರೆ ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದು ಉತ್ತಮವಾದ ಬೆಳವಣಿಗೆಯಾಗಿದೆ ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಗಳ ಆಶಿವರ್ಾದಿಂದ ಇಂದು ನಮ್ಮೂರ ಕೆರೆ ಅಭಿವೃದ್ಧಿಯಾಗುತ್ತಿದೆ ಮಳೆಯಾದರೆ ಸಾಕಷ್ಟು ನೀರು ಸಂಗ್ರಹವಾಗಿ ಸುತ್ತ ಮುತ್ತಲಿನ ಜಮಿನುಗಳಿಗೆ ಅಂತರ್ಜಲ ಮಟ್ಟ ಹೆಚ್ಚಾಗುವದರ ಜೊತೆಗೆ ರೈತರು ಉತ್ತಮವಾದ ಬೆಳೆ ಬೆಳೆಯಲು ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕೆರೆ ಸೇವಾ ಸಮಿತಿಯ ಸದಸ್ಯರಾದ ವಿಜಯಕುಮಾರ ತಾಳಕೇರಿ, ಪಾಲಾಕ್ಷಪ್ಪ ಕಲ್ಲಭಾವಿ, ಮರಕಟ್ ಗ್ರಾಮದ ಬಸವರಾಜ, ಮಹಾಲಿಂಗಪ್ಪ, ಹನುಮಗೌಡ, ಯಮನೂರಪ್ಪ ಹಾವೇರಿ, ನಿಂಗಪ್ಪ ಹರಿಜನ, ಕುಮಾರಪ್ಪ ಮಾಟಲದಿನ್ನಿ ಸೇರಿದಂತೆ ಅನೇಕರು ಹಾಜರಿದ್ದರು.