ಲೋಕದರ್ಶನ ವರದಿ
ಯಲುಬುರ್ಗಾ 15: ದಿನ ಕಳೆದಂತೆ ಪರಿಸರ ತುಂಬಾ ಆಳಾಗುತ್ತಿದ್ದು ಗಿಡ ಮರಗಳನ್ನು ಬೆಳೆಸಿ ರಕ್ಷಣೆ ಮಾಡದೆ ಇದ್ದರೆ ಮುಂದಿನ ಪಿಳಿಗೆಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಪಪಂ ಸದಸ್ಯ ವಸಂತ ಭಾವಿಮನಿ ಹೇಳಿದರು.
ಪಟ್ಟಣದ 9ನೇ ಅಂಗನವಾಡಿ ಕೇಂದ್ರದಲ್ಲಿ ಏರ್ಪಡಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿಗಳನ್ನು ನೆಟ್ಟು ಅವರು ಮಾತನಾಡಿದರು.
ನಮ್ಮ ತಾಲೂಕಿನ ಪ್ರತಿ ಅಂಗನವಾಡಿಗಳಿಗೆ ಸಸಿ ನೆಡುವ ಕಾರ್ಯಕ್ರಮ ಮಾಡುತ್ತಿರುವದು ಉತ್ತಮವಾದದ್ದು ಹಾಗೂ ಮಕ್ಕಳ ಶಿಕ್ಷಣದ ಬುನಾದಿ ಹಾಕುವಲ್ಲಿ ಅಂಗನವಾಡಿ ಕೇಂದ್ರಗಳ ಪಾತ್ರ ಪ್ರಮುಖವಾಗಿದೆ ಅದರಂತೆ ಪಾಲಕರು ಸಹಾಯ ಸಹಕಾರ ನೀಡಿದರೆ ಇನ್ನೂ ಉತ್ತಮವಾಗಿ ಕಾರ್ಯ ಮಾಡಲು ಅನುಕೂಲವಾಗುತ್ತದೆ ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ಅಂಗನವಾಡಿಗಳಿಗೆ ತಪ್ಪದೆ ಕಳಿಸಬೇಕು ಎಂದರು.
ಸಿಡಿಪಿಓ ಶರಣಮ್ಮ ಕಾರನೂರು ಮಾತನಾಡಿ ನಮ್ಮ ಇಲಾಖೆಯಿಂದ ಮಕ್ಕಳಿಗೆ ಬೇಕಾಗುವ ಎಲ್ಲಾ ಪೌಷ್ಠಿಕ ಕಾರ್ಯಕ್ರಮಗಳನ್ನು ಚಾಚು ತಪ್ಪದೆ ಮಾಡುತ್ತಿದ್ದೇವೆ ಇದಕ್ಕೆ ಪಾಲಕರು ಸಹಕಾರ ನೀಡಿದಲ್ಲಿ ಇನ್ನೂ ನಾವು ಉತ್ತಮ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು.
ಪಪಂ ಸದಸ್ಯ ಹನುಮಂತಪ್ಪ ಭಜಂತ್ರಿ 2016-17 ನೇ ಸಾಲಿನ ಬಾಗ್ಯಲಕ್ಷ್ಮೀ ಬಾಂಡ್ ವಿತರಿಸಿ ಮಾತನಾಡಿ ಸರಕಾರದ ಈ ಒಂದು ಯೋಜನೆ ಬಡವರ ಹಾಗೂ ಕೂಲಿ ಕಾಮರ್ಿಕರ ಪಾಲಿಗೆ ವರದಾನವಾಗಿದೆ, ಅದರಂತೆ ಅದರಲ್ಲಿ ಅಪಘಾತ ವಿಮೆ, ಶಿಕ್ಷಣಕ್ಕಾಗಿ ಸಾಲ ಇಗೇ ವಿವಿಧ ಅನುಕೂಲತೆ ಇದ್ದು ಪಾಲಕರು ತಪ್ಪದೆ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಎಂದರು.
ಈ ಸಂದರ್ಭದಲ್ಲಿ ಅಂಗನವಾಡಿ ಮೇಲ್ವೀಚಾರಕಿ ಲಲಿತಾ ನಾಯಕ, ಮುಖಂಡರಾದ ಈರಪ್ಪ ಬಣಕಾರ, ದೊಡ್ಡಯ್ಯ ಗುರುವಿನ, ಕೊಟೇಶ ಭೂತೆ, ಬಸವರಾಜ ಪೂಜಾರ, ಅಂಗನವಾಡಿ ಕಾರ್ಯಕತರ್ೆ ಶಾರದಾ ಆಲೂರು ಸೇರಿದಂತೆ ಅನೇಕ ಮಕ್ಕಳ ತಾಯಂದಿರು ಪಾಲಕರು ಹಾಜರಿದ್ದರು.