18ರಿಂದ ಬಮ್ಮನಾಳ ಯಲ್ಲಮ್ಮಾ ದೇವಿ ಜಾತ್ರೆ
ಸಂಬರಗಿ 13: ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ಇರುವ ಬಮ್ಮನಾಳ ಗ್ರಾಮದ ಯಲ್ಲಮ್ಮಾ ದೇವಿ ಜಾತ್ರೆ ಫೆಬ್ರುವರಿ 18ರಿಂದ 20ರ ವರೆಗೆ ನಡೆಯುತ್ತದೆ. ಫೆಬ್ರುವರಿ 18ರಂದು ದೇವರ ಪಲ್ಲಕ್ಕಿ ಮೆರವಣಿಗೆ ನೂರಾರೂ ಮಹಿಳೆಯರು ಕಳಸ ಹೊತ್ತು ದೇವರ ಪೂಜೆ ನೆರವರಿಸಿ ಭಕ್ತರಿಗೆ ಮಹಾ ಪ್ರಸಾದ ವ್ಯವಸ್ಥೆ ಮಾಡಿದ್ದಾರೆ. ಫೇ19 ರಂದು ಮಹಾ ನೈವೆದ್ಯ, ದೇವಿಯ ಭಕ್ತಿಗೀತೆಗಳ ಕಾರ್ಯಕ್ರಮ, 20ರಂದು ಬೆಳಿಗ್ಗೆ 7 ಗಂಟೆಗೆ ಬೀರದೇವರ ಮಂದಿರಕ್ಕೆ ನೈವದ್ಯ ಅರೆ್ಣ, ಆರತಿ ಕಾರ್ಯಕ್ರಮ, ಆನಂತರ ವಿವಿಧ ಸರ್ತಿಗಳು 4 ಗಂಟೆಗೆ ಏರಿ್ಡಸಲಾಗಿದೆ. ಸಾಮಾನ್ಯ ಜೋಡೆತ್ತು ಶರ್ಯತ್ತು, ಎ, ಬಿ ಗ್ರೂಪ್ ಜೋಡೆತ್ತುಗಳ ಶರ್ಯತ್ತು, ಹಲ್ಲಿಲ್ಲದ ಜೋಡು ಹೋರಿಗಳ ಶರ್ಯತ್ತು, ಒಂದು ಎತ್ತು ಒಂದು ಕುದುರೆ ಜೋಡಿ ಶರ್ಯತ್ತು ಆಯೋಜಿಸಲಾಗಿದೆ. ಈ ಸ್ಪರ್ದೆಯಲ್ಲಿ ಭಾಗಿಯಾಗುವವರು ಬಹುಮಾನದ ಶೇ.10 ಡಿಪಾಜಿಟ್‌ವನ್ನು ಅಳವಡಿಸಬೇಕು. ಬಮ್ಮನಾಳ ಗ್ರಾಮದ ಹೊರವಲಯದಲ್ಲಿ ಇರುವ ಜಲಕುಂಭದ ಹತ್ತಿರ ಸ್ಪರ್ಧೆ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕು ಎಂದು ಜಾತ್ರಾ ಕಮೀಟಿ ಮುಖ್ಯಸ್ಥ ರಮೇಶ ಅವಳೆಕರ, ಪುಂಡಲಿಕ ಬಿಸರಕರ, ನೇತಾಜಿ ಅವಳೆಕರ, ಅಮರ ಅವಳೆಕರ, ದಯಾನಂದ ಅವಳೆಕರ, ಮಾಣಿಕ ಅವಳೆಕರ ತಿಳಿಸಿದ್ದಾರೆ.