ವಿವಿಧ ಕಾಮಗಾರಿಗಳಿಗೆ ಪೂಜೆ

ಲೋಕದರ್ಶನ ವರದಿ

ಬ್ಯಾಡಗಿ31:ಶೈಕ್ಷಣಿಕವಾಗಿ ಅಭಿವೃದ್ಧಿಯಾಗದ ಹೊರತು ದೇಶದ ಸವರ್ಾಂಗೀಣ ಅಭಿವೃದ್ದಿ ಅಸಾಧ್ಯ, ಈ ನಿಟ್ಟಿನಲ್ಲಿ ಶೈಕ್ಷಣಿಕ ಕ್ಷೇತ್ರದ ಅಭಿವೃದ್ದಿಗೆ ಆಡಳಿತಾರೂಢ ಸಕರ್ಾರಗಳು ಹೆಚ್ಚು ಪ್ರಾಮುಖ್ಯತೆ ನೀಡಬೇಕಾಗಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅಭಿಪ್ರಾಯ ವ್ಯಕ್ತಪಡಿಸಿದರು. 

    ತಾಲೂಕಿನ ಮೋಟೆಬೆನ್ನೂರ,ಅಳಲಗೇರಿ ಗ್ರಾಮಗಳಲ್ಲಿ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ವತಿಯಿಂದ 75 ಲಕ್ಷ ರೂ.ಗಳ ವೆಚ್ಚದಲ್ಲಿ ಶಾಲಾ ಕಟ್ಟಡಗಳ ನಿಮರ್ಾಣ ಮತ್ತು ಎಸ್ಸಿಪಿ ಟಿಎಸ್ಪಿ ಯೋಜನೆಯಡಿ ರಸ್ತೆ ಹಾಗೂ ಕಾಲುವೇ ನಿಮರ್ಾಣದ ಭೂಮಿ ಪೂಜೆ ನೇರವೇರಿಸಿ ಮಾತನಾಡಿದರು. ದೇಶವನ್ನು ಶೈಕ್ಷಣಿಕವಾಗಿ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಕರ್ಾರಗಳು ಬದ್ಧತೆಯನ್ನು ತೋರಬೇಕಾಗಿದೆ ಎಂದರಲ್ಲದೇ ಮೂಲ ಸೌಕರ್ಯಗಳ ಕೊರತೆಯಿಂದ ಸಕರ್ಾರಿ ಶಾಲೆಗಳಲ್ಲಿ ಶೈಕ್ಷಣಿಕ ಪ್ರಗತಿಗೆ ಹಿನ್ನೆಡೆಯಾಗುತ್ತಿದೆ ಎಂಬುದು ಸಾರ್ವತ್ರಿಕ ಸತ್ಯ. ಇದನ್ನು ಎಲ್ಲರೂ ಕೂಡ ಒಪ್ಪಿಕೊಳ್ಳಬೇಕಾಗುತ್ತದೆ ಹೀಗಾಗಿ ಖಾಸಗಿ ಶಾಲೆಗಳು ನಡೆಸುತ್ತಿರುವ ಪೈಪೋಟಿ ನಡುವೆ ಸಕರ್ಾರಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿರುವುದು ದುರದೃಷ್ಟಕರ. ಆದರೆ ಯಾವುದೇ ಕಾರಣಕ್ಕೂ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ ಎಂದು ಹೇಳಿದರು. 

     ರಾಜ್ಯ ಭೂ ಅಭಿವೃದ್ಧಿ ಬ್ಯಾಂಕ್ ನಿದರ್ೇಶಕ ಸುರೇಶ ಯತ್ನಳ್ಳಿ ಮಾತನಾಡಿ ಅಭಿವೃದ್ಧಿ ವಿಷಯದಲ್ಲಿ ಹಿಂದೆ ಬೀಳುವ ಪ್ರಶ್ನೆಯಿಲ್ಲ, ಕೇಂದ್ರ ಸರಕಾರ ಜನಪರ ಕಾರ್ಯಗಳನ್ನು ನಡೆಸುವ ಮೂಲಕ ಸಮಗ್ರ ಅಭಿವೃಧ್ಧಿಗೆ ಪ್ರಾಧಾನ್ಯತೆ ನೀಡುತ್ತಿದ್ದು, ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ  ಸಾವಿರಾರು ಕೋಟಿ ಅನುದಾನ ಒದಗಿಸುತ್ತಿದೆ. ಪ್ರಾಥಮಿಕ ಹಂತದಿಂದ ಹಿಡಿದು ಉನ್ನತ ಶಿಕ್ಷಣದವರೆಗೂ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ಅನುಸೂಯಾ ಕುಳೇನೂರ, ಮೋಟೆಬೆನ್ನೂರ ಗ್ರಾ.ಪಂ.ಅಧ್ಯಕ್ಷೆ ನೀಲಮ್ಮ ಬ್ಯಾಟೆಪ್ಪನವರ, ಉಪಾಧ್ಯಕ್ಷ ಮುದಕಪ್ಪ ಕಪ್ಪಾರಿ, ಶಿವಬಸಪ್ಪ ಕುಳೇನೂರ, ನಾಗರಾಜ ಬಳ್ಳಾರಿ, ಬುಡಪನಹಳ್ಳಿ ಗ್ರಾ.ಪಂ.ಉಪಾಧ್ಯಕ್ಷೆ ನೀಲಮ್ಮ ಕಿತ್ತೂರ, ಗುಡ್ಡಪ್ಪ ಹೊನ್ನತ್ತಿ, ನಾಗಪ್ಪ ಯತ್ನಳ್ಳಿ, ಷಣಖಪ್ಪ ತಂಗೌಡ್ರ, ಮಹದೇವಪ್ಪ, ನಾಗರಾಜ ಹಾವನೂರ, ಚಂದ್ರಶೇಖರ ಆನ್ವೇರಿ, ಗುತ್ತಿಗೆದಾರರಾದ ವಿಜಯಭರತ ಬಳ್ಳಾರಿ, ಶಿವಪುತ್ರಪ್ಪ ಅಗಡಿ, ಎಇಇ ಪಿ.ಎಂ.ಶೆಟ್ಟಿಕೇರಿ, ಸಹಾಯಕ ಅಭಿಯಂತರರಾದ ರಾಜಶೇಖರ ಹರಮಗಟ್ಟಿ, ಕೆ.ರಾಜಣ್ಣ, ಪಿಡಿಓ ಸತೀಶ ಮೂಡೇರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು