ಬೆಳಗಾವಿ: ಕನರ್ಾಟಕ ಪ್ರವಾಸೋದ್ಯಮದ ತೊಟ್ಟಿಲಾಗಿದ್ದು, ವಿದೇಶಿಗರು ಭಾರತಕ್ಕೆ ಪ್ರವಾಸಕ್ಕೆಂದು ಭೇಟಿ ನೀಡುವಾಗ ಕನರ್ಾಟಕಕ್ಕೆ ಕಡ್ಡಾಯವಾಗಿ ಭೇಟಿ ನೀಡಲು ಆಶಿಸುತ್ತಾರೆ ಎಂದು ಸಂಸದ ಸುರೇಶ ಅಂಗಡಿ ಅವರು ಹೇಳಿದರು.
ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ನಗರದ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಗುರುವಾರ (ಸೆ.27) ಹಮ್ಮಿಕೊಂಡಿದ್ದ "ವಿಶ್ವ ಪ್ರವಾಸೋದ್ಯಮ ದಿನಾಚರಣೆ" ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಅನೇಕ ಪ್ರವಾಸಿ ತಾಣಗಳಿದ್ದು, ಒಂದಕ್ಕಿಂತ ಒಂದು ತಾಣಗಳು ವೈಶಿಷ್ಟ್ಯತೆಯನ್ನು ಒಳಗೊಂಡಿವೆ. ಪ್ರತಿಯೊಂದು ಪ್ರವಾಸಿ ತಾಣಗಳು ವಿಭಿನ್ನ ಹಿನ್ನೆಲೆ ಹಾಗೂ ಮಹತ್ವವನ್ನು ಹೊಂದಿವೆ ಎಂದರು.
ಕೃಷಿ ಹಾಗೂ ನೇಕಾರಿಕೆ ಹೊರತುಪಡಿಸಿ ಅತಿಹೆಚ್ಚು ಉದ್ಯೋಗಾವಕಾಶಗಳನ್ನು ಒದಗಿಸುವ ಕ್ಷೇತ್ರ ಪ್ರವಾಸೋದ್ಯಮವಾಗಿದೆ. ಪ್ರವಾಸೋದ್ಯಮ ಇಂದು ಬೃಹತ್ ಉದ್ಯಮವಾಗಿ ಬೆಳೆದಿದ್ದು, ಇದರಿಂದ ಅನೇಕರು ಬದುಕು ಕಟ್ಟಿಕೊಂಡಿದ್ದಾರೆ ಎಂದು ಹೇಳಿದರು.
ವಿದ್ಯಾಥರ್ಿಗಳು ಕೇವಲ ಗೂಗಲ್ ಮ್ಯಾಪ್ನಲ್ಲಿ ಪ್ರವಾಸಿ ತಾಣಗಳನ್ನು ವೀಕ್ಷಿಸದೇ, ನೇರವಾಗಿ ಭೇಟಿ ನೀಡಿ ವೀಕ್ಷಿಸಬೇಕು. ಪ್ರವಾಸಿ ತಾಣಗಳ ಹಿನ್ನೆಲೆ ಹಾಗೂ ವೈಶಿಷ್ಟ್ಯದ ಕುರಿತು ಸಮಗ್ರ ಅಧ್ಯಯನ ಮಾಡಬೇಕೆಂದು ಕಿವಿಮಾತು ಹೇಳಿದರು.
ಪ್ರವಾಸಿ ತಾಣಗಳಲ್ಲೇ ದಿನಾಚರಣೆ ಆಚರಿಸಿ:
ಪ್ರವಾಸೋದ್ಯಮ ದಿನಾಚರಣೆಯನ್ನು ಒಂದು ಕಟ್ಟಡದಲ್ಲಿ ಆಚರಿಸುವ ಬದಲು, ಜಿಲ್ಲೆಯ ಒಂದು ಪ್ರವಾಸಿ ತಾಣದಲ್ಲಿ ಆಚರಿಸುವುದು ಉತ್ತಮ. ಇದರಿಂದ ವಿದ್ಯಾಥರ್ಿಗಳು ಹಾಗೂ ಸಾರ್ವಜನಿಕರಿಗೆ ಪ್ರವಾಸೋದ್ಯಮ ಹಾಗೂ ಆ ತಾಣದ ಕುರಿತು ಅರಿವು ಮೂಡಿಸಿದಂತಾಗುತ್ತದೆ. ಆದ್ದರಿಂದ ಮುಂದಿನ ವರ್ಷ ಪ್ರವಾಸೋದ್ಯಮ ದಿನಾಚರಣೆಯನ್ನು ಜಿಲ್ಲೆಯ ಯಾವುದಾದರೂ ಒಂದು ಪ್ರವಾಸಿ ತಾಣದಲ್ಲಿ ಆಚರಿಸಬೇಕೆಂದು ಸಂಸದ ಅಂಗಡಿ ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.
ಈ ಬಗ್ಗೆ ರಾಜ್ಯ ಸಕರ್ಾರವೂ ಕೂಡ ಗಮನಹರಿಸಿ, ಎಲ್ಲ ಜಿಲ್ಲೆಗಳಲ್ಲಿ ಪ್ರವಾಸೊದ್ಯಮ ದಿನಾಚರಣೆಯನ್ನು ಆಯಾ ಭಾಗದ ಪ್ರವಾಸಿ ತಾಣಗಳಲ್ಲೇ ಆಚರಿಸುವುದು ಉತ್ತಮ ಎಂದು ಅಭಿಪ್ರಾಯಪಟ್ಟರು.
ವಿಶೇಷ ಉಪನ್ಯಾಸ ನೀಡಿದ ಹಿರಿಯ ಸಾಹಿತಿ ಡಾ. ಬಸವರಾಜ ಜಗಜಂಪಿ ಅವರು, ದೇಶ ಸುತ್ತುವುದರಿಂದ ಹಾಗೂ ಕೋಶ ಓದುವುದರಿಂದ ನಾವು ಅನುಭವ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಪುಸ್ತಕ ಪುಟ ತೆರೆದು ಕಲಿಸಿದರೆ, ಪ್ರವಾಸ ಕರೆದು ಕೈ ಮಾಡಿ ತೋರಿಸುತ್ತದೆ. ಪ್ರವಾಸ ಪರಿಸ್ಥಿತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಕಲಿಸಿಕೊಡುತ್ತದೆ ಎಂದು ಹೇಳಿದರು.
ಶಿಸ್ತು, ಸ್ವಚ್ಛತೆ ಇರುವ ಪ್ರದೇಶಗಳಿಗೆ ಪ್ರವಾಸಿಗರು ಹೆಚ್ಚಾಗಿ ಬರುತ್ತಾರೆ. ಆದ್ದರಿಂದ ದೇಶದಲ್ಲಿ ಶಿಸ್ತು, ಸ್ವಚ್ಛತೆ ಇನ್ನಷ್ಟು ಹೆಚ್ಚಾಗಬೇಕಿದೆ. ಪ್ರಸ್ತುತ ದಿನಮಾನಗಳಲ್ಲಿ ವಾಯುಮಾಲಿನ್ಯದಿಂದ ಪಾರಂಪರಿಕ ಕಟ್ಟಡಗಳಿಗೆ ದಕ್ಕೆಯಾಗುತ್ತಿದ್ದು, ಪಾರಂಪರಿಕ ಕಟ್ಟಡಗಳ ಉಳಿವಿಗೆ ಸಕರ್ಾರಗಳು ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ತಿಳಿಸಿದರು.
ಪ್ರವಾಸೋದ್ಯಮ ಇಲಾಖೆಯಿಂದ ನಿರುದ್ಯೋಗಿ ಯುವಕರಿಗೆ ಪ್ರವಾಸಿ ಟ್ಯಾಕ್ಸಿಗಳನ್ನು ವಿತರಿಸಲಾಗುತ್ತಿದ್ದು, ಇದರಿಂದ ನಿರುದ್ಯೋಗಿ ಯುವಕರು ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿದೆ. ಸಕರ್ಾರದ ಸೌಲಭ್ಯಗಳನ್ನು ಸದುಪಯೋಗಿಸಿಕೊಳ್ಳಲು ಯುವಕರಲ್ಲಿ ಕೌಶಲ್ಯ ಅಗತ್ಯ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಡಾ. ಎಚ್.ಬಿ. ಬೂದೆಪ್ಪ ಅವರು, ಬೆಳಗಾವಿ ಜಿಲ್ಲೆಯ ಎಲ್ಲ ಪ್ರವಾಸಿ ತಾಣಗಳನ್ನು ಡಿಜಿಟಲೀಕರಣಗೊಳಿಸಿ 3ಡಿ ವ್ಯವಸ್ಥೆ ಮೂಲಕ ತೋರಿಸುವ ಕಾರ್ಯವನ್ನು ಪ್ರವಾಸೋದ್ಯಮ ಇಲಾಖೆ ಶೀಘ್ರವೇ ಕೈಗೊಳ್ಳಬೇಕೆಂದು ಸೂಚಿಸಿದರು.
ಪ್ರವಾಸಿ ಟ್ಯಾಕ್ಸಿಗಳ ಚಾಲಕರ ಮೇಲೂ ಮಹತ್ತರ ಜವಾಬ್ದಾರಿ ಇದ್ದು, ಚಾಲಕರು ಪ್ರವಾಸಿಗರಿಗೆ ಅಭದ್ರತೆ ಕಾಡದಂತೆ ಎಚ್ಚರ ವಹಿಸಬೇಕು. ಪ್ರವಾಸಿಗರೊಂದಿಗೆ ಗೌರವದಿಂದ ನಡೆದುಕೊಳ್ಳಬೇಕು. ಪ್ರವಾಸಿ ತಾಣಗಳಲ್ಲಿ ಪ್ರತಿಯೊಬ್ಬರು ಸ್ವಚ್ಛತೆ ಕಾಪಾಡಬೇಕೆಂದು ಹೇಳಿದರು.
ಪ್ರವಾಸೋದ್ಯಮ ವಿದ್ಯಾಥರ್ಿಗಳು, ಗೃಹರಕ್ಷಕಧಳ ಸಿಬ್ಬಂದಿ ಸೇರಿದಂತೆ ಪ್ರವಾಸೋದ್ಯಮ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರವಾಸಿ ಅಧಿಕಾರಿ ಸೋಮಶೇಖರ್ ಬನವಾಸಿ ಸ್ವಾಗತಿಸಿದರು. ಪ್ರವಾಸೋದ್ಯಮ ಸಮಾಲೋಚಕರಾದ ಚೇತನ್ ಕ್ಯಾಸನೂರ ನಿರೂಪಿಸಿದರು.
ಪ್ರವಾಸಿ ಟ್ಯಾಕ್ಸಿ ಕೀ ವಿತರಣೆ:
2017-18ನೇ ಸಾಲಿನ ಪ್ರವಾಸಿ ಟ್ಯಾಕ್ಸಿ ಸೌಲಭ್ಯಕ್ಕೆ ಆಯ್ಕೆಯಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತ ವರ್ಗದ ಫಲಾನುಭವಿಗಳಿಗೆ ಸಂಸದ ಸುರೇಶ ಅಂಗಡಿ ಹಾಗೂ ಗಣ್ಯರು ವೇದಿಕೆಯಲ್ಲಿ ಸಾಂಕೇತಿಕವಾಗಿ ಪ್ರವಾಸಿ ಟ್ಯಾಕ್ಸಿ ಕೀ ವಿತರಿಸಿದರು.
ಬಹುಮಾನ ವಿತರಣೆ:
ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಅಂತರ್ ಮಹಾವಿದ್ಯಾಲಯ ಪ್ರಬಂಧ ಹಾಗೂ ಚಚರ್ಾ ಸ್ಪಧರ್ೆಯಲ್ಲಿ ವಿಜೇತರಾದ ವಿದ್ಯಾಥರ್ಿಗಳಿಗೆ ಬಹುಮಾನ ವಿತರಿಸಲಾಯಿತು.
ಪ್ರಬಂಧ ಸ್ಪಧರ್ೆಯಲ್ಲಿ ನಗರದ ಬಿ.ಕೆ. ಪದವಿ ಕಾಲೇಜಿನ ಮಂಜುನಾಥ ದಳವಾಯಿ ಪ್ರಥಮ, ಸಕಾರಿ ಪ್ರಥಮ ದಜರ್ೆ ಮಹಿಳಾ ಕಾಲೇಜಿನ ಲಕ್ಷ್ಮೀ ಉಪರಿ ದ್ವಿತೀಯ, ಸಂಗೊಳ್ಳಿ ರಾಯಣ್ಣ ಪ್ರಥಮ ದಜರ್ೆ ಮಹಾವಿದ್ಯಾಲಯದ ಚೇತನ್.ಎನ್.ಎಚ್ ಹಾಗೂ ಬಿ.ಕೆ. ಪದವಿ ಕಾಲೇಜಿನ ಭಕಿ ನಾಯ್ಕ್ ತೃತೀಯ ಸ್ಥಾನ ಬಹುಮಾನ ಗಳಿಸಿದರು.
ಚಚರ್ಾ ಸ್ಪಧರ್ೆಯಲ್ಲಿ ಸರಕಾರಿ ಪ್ರಥಮ ದಜರ್ೆ ಮಹಿಳಾ ಕಾಲೇಜಿನ ಜೇಬಾ ಪಾಟೀಲ ಪ್ರಥಮ, ಸಂಗೊಳ್ಳಿ ರಾಯಣ್ಣ ಪ್ರಥಮ ದಜರ್ೆ ಮಹಾವಿದ್ಯಾಲಯದ ಅಕ್ಷತಾ ಶಹಪೂರಕರ ದ್ವಿತೀಯ ಹಾಗೂ ಬಿ.ಕೆ. ಪದವಿ ಕಾಲೇಜಿನ ಲಗಮೇಶ ಕೋತ ತೃತೀಯ ಬಹುಮಾನ ಪಡೆದರು.