ಮೂಡಲಗಿ 20: ಮೊದಲೆಲ್ಲ ಮನೆಯ ಮಾಡು, ಹಿತ್ತಲ ಗಿಡದಲ್ಲಿ ಗೂಡು ಮಾಡಿಕೊಂಡು ಮನೆಯ ಮಹಿಳೆ ಕಾಳು ಹಸನು ಮಾಡುವಾಗ ಫುರ್ ಫರ್ ಎಂದು ಹಾರಿ ಬರುತ್ತಿದ್ದ ಗುಬ್ಬಚ್ಚಿಗಳ ಸಂಕುಲ ಕಾಂಕ್ರಿಟ್ ಕಾಡು ಮತ್ತು ಆಧುನಿಕತೆಯ ಆರ್ಭಟದಲ್ಲಿ ಜನರಿಂದ ಮರೆಯಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಮಕ್ಕಳ ಸಾಹಿತಿ ಪ್ರೊ. ಸಂಗಮೇಶ ಗುಜಗೊಂಡ ಹೇಳಿದರು.
ಇಲ್ಲಿಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಆವರಣದಲ್ಲಿ ಆಚರಿಸಿದ ವಿಶ್ವ ಗುಬ್ಬಚ್ಚಿ ದಿನಾಚರಣೆ ಕಾರ್ಯಕ್ರಮವನ್ನು ಗಿಡಗಳಿಗೆ ಕಟ್ಟಿರುವ ಮಣ್ಣಿನ ತಟ್ಟೆಗಳಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಪ್ರಾಣಿ, ಪಕ್ಷಿಗಳ ನಾಶವು ಮನುಷ್ಯರ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ನಮ್ಮ ಯಾವುದೇ ಪ್ರಯತ್ನ ಒಂದು ದಿನಕ್ಕೆ ಸೀಮಿತವಾಗದೇ ನಿರಂತರವಾದರೆ ಸಾರ್ಥಕವಾಗುತ್ತದೆ ಎಂದರು.
ಇತಿಹಾಸ ಪ್ರಾಧ್ಯಾಪಕ ಪ್ರೊ. ಎಸ್.ಜಿ. ನಾಯಿಕ ಮಾತನಾಡಿ ಮೊಬೈಲ್ ಟಾವರ, ಕೃಷಿಯಲ್ಲಿ ಕ್ರೀಮಿನಾಶಕದ ಅತೀಯಾದ ಬಳಕೆಯಿಂದ ಗುಬ್ಬಿಗಳ ಸಂತತಿ ಇಲ್ಲವಾಗಿದೆ. ಗುಬ್ಬಚ್ಚಿಗಳ ಚಿಂವ್ ಚಿಂವ್, ಪಕ್ಷಿಗಳ ಕಲರವವೇ ಇಂದು ಮರೆಯಾಗುತ್ತಿದೆ. ಮುಂದೊಂದು ದಿನ ನಮ್ಮ ಮುಂದಿನ ಮಕ್ಕಳಿಗೆ ಚಿತ್ರದಲ್ಲಿ ತೋರಿಸಬೇಕಾದ ಅನಿವಾರ್ಯತೆ ಎದುರಾಗುವ ಪರಿಸ್ಥಿತಿ ಬಂದರೂ ಅಚ್ಚರಿಯಿಲ್ಲ. ಪಕ್ಷಿಗಳು ಇಲ್ಲದ ಜಗತ್ತನ್ನು ನೆನೆಸಿಕೊಳ್ಳುವುದು ಭಯಾನಕವಾಗಿದ್ದು, ಜನರು ಈ ಗಲೇ ಎಚ್ಚರಗೊಳ್ಳಬೇಕು. ಇಂದು ಗುಬ್ಬಚ್ಚಿ ದಿನ ಆಚರಿಸಬೇಕಾಗಿ ಬಂದಿರುವುದು ವಿಷಾದಕರ ಎಂದರು.
ಡಾ. ಬಿ.ಸಿ. ಪಾಟೀಲ, ಪ್ರೊ. ಜಿ.ವಿ. ನಾಗರಾಜ ಮಾತನಾಡಿ ಗುಬ್ಬಿಗಳ ಕಲರವ ಇಲ್ಲದೆ ಇಂದು ಪರಿಸರ ಬಿಕೋ ಎನ್ನುತ್ತಲಿದೆ. ಜನರು ಗಿಡಮರಗಳನ್ನು ಬೆಳೆಸುವ ಮೂಲಕ ಪಕ್ಷಿಗಳಿಗೆ ರಕ್ಷಣೆ ಕೊಡಬೇಕು ಎಂದರು.
ಗ್ರಂಥಾಲಯ ಆವರಣದಲ್ಲಿಯ ಗಿಡಗಳಿಗೆ ಗುಬ್ಬಿಗಳಿಗಾಗಿ ಮಣ್ಣಿನ ಮಡಕೆ, ತಟ್ಟೆಗಳನ್ನು ಕಟ್ಟಿ ಪ್ರಾಧ್ಯಾಪಕರು ಮತ್ತು ವಿದ್ಯಾಥರ್ಿಗಳು ನೀರು ಸಂಗ್ರಹಿಸಿದರು.
ಪ್ರೊ. ಪಿ.ಕೆ. ರಡ್ಡೇರ, ಪ್ರೊ. ಎ.ಪಿ. ರಡ್ಡಿ, ಪ್ರೊ. ಎಸ್.ಎ. ಶಾಸ್ತ್ರೀಮಠ, ಪ್ರೊ. ಜಿ. ಸಿದ್ರಾಮ್ರಡ್ಡಿ, ಮನೋಹರ ಲಮಾಣಿ, ಅಜರ್ುನ ಗಸ್ತಿ ಇದ್ದರು.
ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿದರು, ಬಿ.ಎಂ. ಬರಗಾಲಿ ನಿರೂಪಿಸಿದರು. ಪ್ರೊ. ಎಸ್.ಎ. ಶಾಸ್ತ್ರೀಮಠ ವಂದಿಸಿದರು.