ಹುಕ್ಕೇರಿ 11: ವಿಶ್ವ ಮಣ್ಣು ದಿನಾಚರಣೆ ಅಂಗವಾಗಿ ಕೃಷಿ ಇಲಾಖೆ ವತಿಯಿಂದ ಯಮಕನಮರಡಿ ಕಾರಿಮಠದಲ್ಲಿ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಇವರ ಸಾನಿಧ್ಯದಲ್ಲಿ ಜರುಗಿಸಲಾಯಿತು. ಸಾವಯವ ರೈತರು ಇತರ ಪ್ರಗತಿಪರ ರೈತರು ಹಾಗೂ ಡಿಪ್ಲೋಮಾ ವಿದ್ಯಾಥರ್ಿಗಳು ಪಾಲ್ಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಮಣ್ಣು ದಿನಾಚರಣೆ ಆಚರಣೆಯ ಉದ್ದೇಶ, ಮಣ್ಣಿನ ಸವಕಳಿಯಿಂದಾಗುತ್ತಿರುವ ಅಪಾಯಗಳು ಹಾಗೂ ಸುಸ್ಥಿರ ಕೃಷಿಗಾಗಿ ಮಣ್ಣಿನ ಸಮರ್ಪಕ ಬಳಕೆಯ ಕುರಿತು ಗೋಕಾಕದ ಮಣ್ಣು ಆರೋಗ್ಯ ಕೇಂದ್ರದ ಕೃಷಿ ಅಧಿಕಾರಿ ಶೈಲಜಾ ಬೆಳ್ಳಂಕಿಮಠ ಇವರು ರೈತರೊಂದಿಗೆ ಮಾಹಿತಿ ಹಂಚಿಕೊಂಡರು. ಹಾಗೂ ಪ್ರಾಸ್ತಾವಿಕವಾಗಿ ಮಾತನಾಡಿದ ಹುಕ್ಕೇರಿ ತಾಲೂಕಾ ಸಹಾಯಕ ಕೃಷಿ ನಿದರ್ೇಶಕ ಮಹಾದೇವ ಪಟಗುಂದಿ ಇವರು ಮಣ್ಣು ಮಾದರಿ ಸಂಗ್ರಹಣೆ ಹಾಗೂ ಪರೀಕ್ಷೆಯ ಮಹತ್ವದ ಕುರಿತು ರೈತರಿಗೆ ಮಾಹಿತಿ ನೀಡಿದರು. ಆಶೀರ್ವಚನ ನೀಡಿದ ಶ್ರೀಗಳು ಇಂದಿನ ಸನ್ನಿವೇಶದಲ್ಲಿ ಮಣ್ಣನ್ನು ಜೋಪಾನ ಮಾಡುವ ನಿಟ್ಟಿನಲ್ಲಿ ಯುವ ರೈತರು ಪ್ರಯತ್ನಿಸಬೇಕೆಂದರು.
ದಿನಾಚರಣೆ ಅಂಗವಾಗಿ ಉಳ್ಳಾಗಡ್ಡಿ ಖಾನಾಪೂಈರ ಹಾಗೂ ಹುಕ್ಕೇರಿ ನಗರದಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ವಿಚಾರಗೋಷ್ಠಿ ಮತ್ತು ರೈತರೊಂದಿಗೆ ಸಂವಾದ ಇಲಾಖೆಯ ವತಿಯಿಂದ ಮಣ್ಣಿನ ಮಹತ್ವದ ಕುರಿತು ರೈತರಿಗೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಏರ್ಪಡಿಸಲಾಗಿತ್ತು. ಈ ಸಂದಂರ್ಭದಲ್ಲಿ ಎಲ್ಲ ಕೃಷಿ ಅಧಿಕಾರಿಗಳು, ಸಹಾಯಕ ಕೃಷಿ ಅಧಿಕಾರಿಗಳು ಹಾಗೂ ಆತ್ಮ ಸಿಬ್ಬಂದಿ ಉಪಸ್ಥಿತರಿದ್ದರು.