ಲೋಕದರ್ಶನ ವರದಿ
ಬೆಳಗಾವಿ
17: ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ ಬೆಳಗಾವಿ,ಜಿಲ್ಲಾ ಆರೋಗ್ಯ ಮತ್ತು ಕು ಕ ಇಲಾಖೆ ಬೆಳಗಾವಿ, ಬೆಳಗಾವಿ ವೈದ್ಯಕೀಯ ಮಹಾವಿದ್ಯಾಲಯ ಬೆಳಗಾವಿ, ಪೊಲೀಸ ಇಲಾಖೆ, ಅಬಕಾರಿ ಇಲಾಖೆ, ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರ ಸರಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ಬೆಳಗಾವಿ, ಎಪಿಡಿ ಸಂಸ್ಥೆ ಬೆಂಗಳೂರು ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಬೆಳಗಾವಿ, ಇವರ ಸಹಯೋಗದಲ್ಲಿ "ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ" 2018ರ ಅಂಗವಾಗಿ ಜಿಲ್ಲಾ ಮಟ್ಟದ ಸಮಾರಂಭವನ್ನು ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ಕಾಕತಿವೇಸ್ ಬೆಳಗಾವಿಯಲ್ಲಿ ಜರುಗಿಸಲಾಯಿತು.
ಸಮಾರಂಭದ ಉದ್ಘಾಟನೆಯನ್ನು ಡಾ.ಅಪ್ಪಾಸಾಹೇಬ ನರಟ್ಟಿ ಜಿಲ್ಲಾ ಆರೋಗ್ಯ ಮತ್ತು ಕು ಕ ಅಧಿಕಾರಿಗಳು ಬೆಳಗಾವಿ ಇವರು ನೇರವೇರಿಸಿ ಉದ್ಘಾಟಪರ ಭಾಷಣದಲ್ಲಿ ಈಗಿನ ಕಾಲದ ಆಧುನಿಕ ತಂತ್ರಜ್ಞಾನಗಳನ್ನು ವಿದ್ಯಾಥರ್ಿಗಳು ಒಳ್ಳೆಯ ಕಾರ್ಯಗಳಿಗೆ ಬಳಸುವಂತೆ ಕರೆ ನೀಡಿದರು.
ಮುಖ್ಯ ಅಥಿತಿಗಳಾಗಿ ಕೆ ಅರುಣ ಕುಮಾರ ಮಾನ್ಯ ಉಪ ಆಯುಕ್ತರು ಅಬಕಾರಿ ಇಲಾಖೆ ಬೆಳಗಾವಿ ಇವರು ಈಗಿನ ಯುವ ಜನತೆಯು ತುಂಬಾ ಒತ್ತಡ ಜೀವನವನ್ನು ನಡೆಸುತ್ತಿದ್ದು ಮಾದಕ ದ್ರವ್ಯ ಮತ್ತು ವ್ಯಸನಗಳಿಗೆ ಬಲಿಯಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಕ್ರಿಸ್ಟೆ ಅಬ್ರಾಹಂ ಸಿ ಇ ಓ, ದಿ ಅಸೋಷಿಯೇಷನ್ ಪಿಪಲ್ ವಿತ್ ಡಿಸಬಿಲಿಟಿ ಸಂಸ್ಥೆ ಬೆಂಗಳೂರು ಇವರು ಡಿ ಎಮ್ ಹೆಚ್ ಪಿ ಸಹಯೋಗದೊಂದಿಗೆ ಸಮುದಾಯದಲ್ಲಿ ತಾವು ಸೇವೆ ನೀಡುವುದಾಗಿ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಎನ್ ಜಿ ಬಸವರಾಜು ಪ್ರಭಾರ ಪ್ರಾಂಶುಪಾಲರು ಸರಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ಇವರು ಮಾತನಾಡಿ ಇವರು ಒಬ್ಬ ಮನುಷ್ಯನಿಗೆ ದೈಹಿಕ ಆರೋಗ್ಯ ಎಷ್ಟು ಮಹತ್ವವಾಗಿದೆಯೋ ಅಷ್ಟೇ ಮಾನಸಿಕ ಆರೋಗ್ಯವು ಮಹತ್ವದಾಗಿದೆ ಹಾಗೂ ಈಗಿನ ಯುವ ಜನತೆಗೆ ಈ ರೀತಿಯ ಕಾಯರ್ಾಗಾರವು ತುಂಬಾ ಅವಶ್ಯಕವಾಗಿದೆಯೆಂದು ಹೇಳಿದರು.
ಕಾರ್ಯಕ್ರಮಕ್ಕೆ ಉಪನ್ಯಾಸಕರಾಗಿ ಡಾ.ಸರಸ್ವತಿ ಎನ್ ಮನೋವೈದ್ಯರು ಬಿಮ್ಸ್ ಆಸ್ಪತ್ರೆ ಬೆಳಗಾವಿ ಇವರು ಆಗಮಿಸಿ ಯುವ ಜನತೆಯಲ್ಲಿ ಕಂಡುಬರುವ ಮಾನಸಿಕ ಖಾಯಿಲೆಗಳು ಮತ್ತು ಲಕ್ಷಣಗಳ ಬಗ್ಗೆ ತಿಳಿಸಿದ್ದರು ಹಾಗೂ ಸೆಲ್ಪಿ, ಇಂಟರನೇಟ್ ಅತಿಯಾದ ಬಳಕೆ ಕೂಡ ಒಂದು ಮಾನಸಿಕ ಖಾಯಿಲೆ ಆಗಿದ್ದು ಅದರಿಂದಾಗುವ ಅನಾಹುತಗಳ ಬಗ್ಗೆ ಉಪನ್ಯಾಸ ನೀಡಿದರು.
ಪ್ರಾರಂಭದಲ್ಲಿ ಡಾ. ಚಾಂದನಿ ಜಿ ದೇವಡಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿಗಳು ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ಭಾಷಣದಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಪ್ರಗತಿ ಬಗ್ಗೆ ಮಾಹಿತಿ ನೀಡಿದ್ದರು ಮತ್ತು ಮಾನಸಿಕ ಅಸ್ವಸ್ಥರಿಗೆ ಮನೋಚೈತನ್ಯ ಕ್ಲಿನಿಕ, ಮಾನಸಧಾರ ಹಗಲು ಆರೈಕೆ ಕೇಂದ್ರದಲ್ಲಿ ಸಿಗುವ ಸೌಲಬ್ಯಗಳ ಬಗ್ಗೆ ತಿಳಿಸಿದರು.
ಬೆಳಗಾವಿ ವೈದ್ಯಕೀಯ ಮಹಾವಿದ್ಯಾಲಯದ ಜಿ ಎನ್ ಎಮ್ ವಿದ್ಯಾಥರ್ಿಗಳು ಪ್ರಾರ್ಥನೆ ಹಾಗೂ ನಾಡಗೀತೆ ಹಾಡಿದ್ದರು. ಸವಿತಾ ಅ ತಿಗಡಿ ವಂದಿಸಿದರು. ಸಿ ಜಿ ಅಗ್ನಿಹೋತ್ರಿ ಕಾರ್ಯಕ್ರಮ ನಿರೂಪಿಸಿದ್ದರು ಕಾರ್ಯಕ್ರಮದಲ್ಲಿ ಡಾ. ರಾಜೇಂದ್ರಕುಮಾರ ಕಟ್ಟೆ ಮುಖ್ಯಸ್ಥರು ಮಾನಸಿಕ ವಿಭಾಗ ಬಿಮ್ಸ್ ಆಸ್ಪತ್ರೆ ಬೆಳಗಾವಿ, ಡಾ. ವಿನಯ ದಾಸ್ತೀಕೊಪ್ಪ ವೈದ್ಯಕಿಯ ಅಧೀಕ್ಷಕರು ಬಿಮ್ಸ್ ಆಸ್ಪತ್ರೆ ಬೆಳಗಾವಿ, ಡಾ. ಪರಮೇಶ್ವರ್ ಮನೋವೈದ್ಯರು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಬೆಳಗಾವಿ, ಡಿ ಎಮ್ ಹೆಚ್ ಪಿ ಸಿಬ್ಬಂದಿಯವರು, ಜಿ ಎನ್ ಎಮ್ ವಿದ್ಯಾಥರ್ಿಗಳು ಮತ್ತು ಸರಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾಥರ್ಿಗಳು ಉಪಸ್ಥಿತರಿದರು.
ದಿ.11ರಂದು ಸರಕಾರಿ ಸರದಾರ್ಸ್ ಪ ಪೂ ಮಹಾವಿದ್ಯಾಲಯ ಮತ್ತು ಸರಕಾರಿ ಸರಸ್ವತಿ ಪ ಪೂ ಮಹಾವಿದ್ಯಾಲಯದಲ್ಲಿ ಮಾನಸಿಕ ಆರೋಗ್ಯದ ಕುರಿತು ಪ್ರಬಂದ ಸ್ಪಧರ್ೆಯನ್ನು ಏರ್ಪಡಿಸಿದ್ದು. ಸ್ಪಧರ್ೆಯಲ್ಲಿ ವಿಜೇತರಾದ ವಿದ್ಯಾಥರ್ಿಗಳಿಗೆ ಬಹುಮಾನ ವಿತರಿಸಲಾಯಿತು ಮತ್ತು ಸಹಿ ಆಂದೋಲನ ಕಾರ್ಯಕ್ರಮವನ್ನು ನೆರವೇರಿಸಲಾಯಿತು.