ಲೋಕದರ್ಶನವರದಿ
ರಾಣೇಬೆನ್ನೂರ 25: ಇಲ್ಲಿನ ಕೃಷ್ಣಮೃಗ ಅಭಯಾರಣ್ಯ ಆವರಣದಲ್ಲಿ ಇತ್ತೀಚಗೆ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ವಿಶ್ವ ಭೂಮಿ ಸಂರಕ್ಷಣಾ ದಿನಾಚರಣೆ ನಿಮಿತ್ತ ಕಾನೂನು ಅರಿವು ನೆರವು ಕಾರ್ಯಕ್ರಮವು ಆಯೋಜಿಸಿಲಾಗಿತ್ತು.
ಸಸಿಗಳಿಗೆ ನೀರುಣಿಸುವ ಮೂಲಕ ಭೂಮಿ ಸಂರಕ್ಷಣಾ ಕಾರ್ಯಕ್ರಮಕ್ಕೆ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ಬಿ.ಜಿ.ಪ್ರಮೊದ ಅವರು ಉದ್ಘಾಟಿಸಿ ಚಾಲನೆ ನೀಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಪ್ರಧಾನ ದಿವಾಣಿ ನ್ಯಾಯಾಧೀಶರು ಮತ್ತು ತಾಲೂಕಾ ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದಶರ್ಿಗಳಾದ ಪಿ.ಶಿವರಾಜ ಅವರು ಇಂದಿನ ತಾಪಮಾನದ ಕಾರಣಕ್ಕೆ ಪರಿಸರ ವಿನಾಶವೇ ಕಾರಣವಾಗಿದೆ. ಪರಿಸರ ಸಂರಕ್ಷಿಸದೇ ಹೋದರೆ, ಭವಿಷ್ಯದಲ್ಲಿನ ಮಕ್ಕಳು ಶಪಿಸದೇ ಇರಲಾರರು. ಸಮಾಜದಲ್ಲಿ ಇಂದು ಪ್ರತಿಯೊಬ್ಬರೂ ಭೂಮಿಯ ರಕ್ಷಣೆ ಮತ್ತು ಗಿಡ-ಮರಗಳ ರಕ್ಷಣೆಯ ಜೊತೆಗೆ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಿಸುವ ಗುರುತರ ಹೋಣೆ ಹೋರಬೇಕಾಗಿದೆ ಎಂದರು.
ಜಿಲ್ಲೆಯಲ್ಲಿ ರಾಣೇಬೆನ್ನೂರು ವಾಣಿಜ್ಯ ನಗರವೂ ಸೇರಿದಂತೆ ತಾಲೂಕಿನಲ್ಲಿರುವ ಅತ್ಯಂತ ಪ್ರವಾಸಿ ತಾಣವಾಗಿ ಕಂಗೊಳಿಸುತ್ತಿರುವ ಏಕೈಕ ಕೃಷ್ಣಮೃಗ ಅಭಯಾರಣ್ಯವು ಇಲ್ಲಿರುವುದು ಈ ಭಾಗದ ನಾಗರೀಕರ ಸೌಭಾಗ್ಯವೆಂದು ಭಾವಿಸಬೇಕಾಗಿದೆ ಎಂದು ಅಭಯಾರಣ್ಯ ಕುರಿತು ಸೈಧ್ಯಾಂತವಾಗಿ ಮಾತನಾಡಿದ ನ್ಯಾಯಾಧೀಶರು ಪ್ರತಿಯೊಬ್ಬರೂ ಇಂತಹ ಅರಣ್ಯ ಪ್ರದೇಶ ಮತ್ತು ಇಲ್ಲಿರುವ ಭೂ ಸಂಪತ್ತನ್ನು ರಕ್ಷಿಸಿಕೊಳ್ಳಲು ಇಂದಿನಿಂದಲೇ ಪಣ ತೊಡಬೇಕಾದ ಅಗತ್ಯವಿದೆ ಎಂದರು.
ವಲಯ ಅರಣ್ಯಾಧಿಕಾರಿ ಮಹಾಂತೇಶ ನ್ಯಾಮತಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭೂಮಿ ಸಂರಕ್ಷಣೆಯಲ್ಲಿ ಸಾರ್ವಜನಿಕರ ಪಾತ್ರ ಕುರಿತಂತೆ ನ್ಯಾಯವಾದಿ ಕುಮಾರ ಡಿ.ಮಡಿವಾಳರ ಅವರು ವಿಶೇಷ ಉಪನ್ಯಾಸ ನೀಡಿದರು. ವಕೀಲರ ಸಂಘದ ಉಪಾಧ್ಯಕ್ಷ ಎಂ.ಎಸ್.ರೊಡ್ಡನವರ, ವಲಯ ಅರಣ್ಯಾಧಿಕಾರಿ ಎಸ್.ಉಷಾರಾಣಿ, ನ್ಯಾಯಾಲಯದ ದ್ವಿತೀಯ ದಜರ್ೆ ಸಹಾಯಕ ಸಿದ್ಧಪ್ಪ ಬಸಪ್ಪಳವರ, ಡಿ.ಆರ್.ಎಫ್.ಓ ರವಿ, ಸೇರಿದಂತೆ ವಕೀಲರ ಸಂಘದ ಸದಸ್ಯರು, ಅರಣ್ಯ ಇಲಾಖೆಯ ಸಿಬ್ಬಂದಿ, ಕಾನೂನು ಸೇವಾ ಸಮಿತಿಯ ಪದಾಧಿಕಾರಿಗಳು, ಗಣ್ಯರು ಉಪಸ್ಥಿರಿದ್ದರು.