ಲೋಕದರ್ಶನ ವರದಿ
ಕುಮಟಾ: ಪಟ್ಟಣದ ನಿರ್ಮಲಾ ಸಂಯುಕ್ತ ಪ್ರಾಥಮಿಕ, ಪ್ರೌಡ, ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಪರಿಸರದ ಜಾಗೃತಿ ಹಾಗೂ ಮಹತ್ವವನ್ನು ಸಾರುವ ವಿವಿಧ ಗೀತೆಗಳು,ಭಾಷಣಗಳು, ಸಂದೇಶಗಳು, ಕಿರು ನಾಟಕಗಳು ಬಿತ್ತಿ ಪತ್ರಗಳು ಪ್ರದರ್ಶಿತಗೊಂಡವು.
ನೆಲ್ಲಿಕೇರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪಾಂಡೇಶ ಮೂರ್ತಿ ಮಾತನಾಡಿ, ಮೊದಲನೆಯಾಗಿ ನಾನು ಪರಿಸರ ದಿನಾಚರಣೆಯ ಶುಭಾಶಯಗಳನ್ನು ಹೇಳುತ್ತಿದ್ದೇನೆ.ಇಂದು ನಾವು ಪರಿಸರ ಮಾಲಿನ್ಯದಿಂದಾಗುವ ಪರಿಣಾಮಗಳನ್ನು ಎದುರಿಸಬೇಕಾದ ಅನಿವಾರ್ಯತೆ ಎದುರಾಗಿದೆ.ಇವತ್ತು ಮಾಲಿನ್ಯಗೊಂಡ ಪರಿಸರದ ಮಧ್ಯೆ ನಮ್ಮ ಜೀವನವನ್ನು ಸಾಗಿಸಬೇಕಾದ ಅನಿವಾರ್ಯತೆ ಎದುರಾಗಿದೆ.1972ರಲ್ಲಿ ಪ್ರಥಮ ಬಾರಿಗೆ ಅಮೇರಿಕಾದಲ್ಲಿ ಪ್ರಥಮ ಬಾರಿಗೆ ಒಂದು ಭೂಮಿ, ಭೂಮಿ ಉಳಿಸಿ ಎಂದ ಧ್ಯೇಯದೊಂದಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪರಿಸರ ದಿನಾಚರಣೆಯನ್ನು ಜಾರಿಗೆ ತರಲಾಯಿತು.ಇವತ್ತು ವಾಯು ಮಾಲಿನ್ಯ ಮಿತಿಮೀರಿದ್ದು, ಪ್ರಪಂಚದ ಶೇ. 90ರಷ್ಟು ಭಾಗ ಕಲುಷಿತಗೊಂಡಿದೆ.ಇಂದು ಪ್ರಪಂಚದ ಶೇ.92ರಷ್ಟು ಜನರು ಕಲುಷಿತ ಗಾಳಿಯನ್ನೇ ಸೇವಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯ ಅತಿಥಿಗಳು ಹಾಗೂ ಶಾಲಾ ಶಿಕ್ಷಕರೊಂದಿಗೆ ವಿದ್ಫ್ಯಾರ್ಥಿಗಳು ಶಾಲಾ ಆವರಣದಲ್ಲಿ ಗಿಡ ನೆಡಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಪ್ರಿನ್ಸಿಪಾಲ ಬ್ಯಾನರ್ಸ್ ತೆರೆಸಾ, ಕೋ-ಆರ್ಡನೇಟರ್ ಸಿಸ್ಟರ್ ಶೃತಿ, ಮ್ಯಾನೇಜರ್ ಸಿಸ್ಟರ್ ನೆಸಿತಾ ಉಪಸ್ಥಿತರಿದ್ದರು. ಶಿಕ್ಷಕಿ ವೀಣಾ ಶಾನಭಾಗ ಸ್ವಾಗತಿಸಿದರು. ವಿದ್ಯಾಥರ್ಿಗಳಾದ ಮಹಿಮಾ ಮತ್ತು ಐಶ್ವರ್ಯ ನಿರೂಪಿಸಿದರು. ಶಿಕ್ಷಕಿ ವಿದ್ಯಾ ನಾಯ್ಕ ವಂದಿಸಿದರು.