ವಿಶ್ವಮಾನವ ದಿನಾಚರಣೆ ಕಾರ್ಯಕ್ರಮ

ಲೋಕದರ್ಶನ ವರದಿ

ಹೊಸಪೇಟೆ29: ವಿಶ್ವಮಾನವ ಸಂದೇಶದಿಂದಲೆ ಜಗದ ಕವಿ ಎನಿಸಿಕೊಂಡವರು ಕುವೆಂಪು ಎಂದು ಸಹಾಯಕ ಆಯುಕ್ತ ಪಿ.ಎನ್. ಲೋಕೇಶ್ ತಿಳಿಸಿದರು. ನಗರದ ಬಸವೇಶ್ವರ ಬಡಾವಣೆಯ ಉದ್ಯಾನವನದಲ್ಲಿ ತಾಲೂಕು ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಚೇತನ ಸಾಹಿತ್ಯ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಳ್ಳಾಗಿದ್ದ ರಾಷ್ಟ್ರಕವಿ ಕುವೆಂಪು ರವರ ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕುವೆಂಪು ತಮ್ಮ ಮಗ ಪೂರ್ಣಚಂದ್ರ ತೇಜಸ್ವಿ ಯವರಿಗೆ ಬರೆದ ಪತ್ರದಲ್ಲಿ, ಮಾನವೀಯ ಮೌಲ್ಯಗಳನ್ನು ತುಂಬಿದ್ದಾರೆ ಎಂದರು.  

ವಿಶ್ವಮಾನವ ಸಂದೇಶ ಕುರಿತು ಉಪನ್ಯಾಸ ನೀಡಿ ಮಾತನಾಡಿದ ನಾಗರಾಜ ಪತ್ತಾರ್, ಮನುವಾದಕ್ಕಿಂತ ಮಾನವತಾವಾದವೇ ಶ್ರೇಷ್ಠ. ಮಗು ಹುಟ್ಟಿದಾಗ ವಿಶ್ವಮಾನವ; ಬೆಳೆದ ಮೇಲೆ ಅದನ್ನು ನಾವು ಅಲ್ಪ ಮಾನವನನ್ನಾಗಿ ಮಾಡಿಬಿಡುತ್ತೇವೆ. ಈ ರೀತಿಯ ಬೆಳವಣಿಗೆಯನ್ನು ಹೊರತು ಪಡಿಸಿ, ನೂರು ಮತದ ಹೊಟ್ಟ ತೂರಿ ಎಲ್ಲ ತತ್ವದೆಲ್ಲೆ ಮೀರಿ ನಿಧರ್ಿಂಗತವಾಗಿ ಏರಿ ನವ ಚೇತನರಾಗನ್ನಾಗಿಸಬೇಕಿದೆ. ಆ ಮತದ, ಈ ಮತದ ಹಳೆ ಮತದ ಸಹವಾಸ ಬಿಟ್ಟು, ಮನುಜ ಮತ ಕಟ್ಟಬೇಕಿದೆ; ನಾವೆಲ್ಲಾ ವಿಶ್ವಪಥ ಸೇರಬೇಕಿದೆ ಎಂದರು.

ಚೇತನ ಸಾಹಿತ್ಯ ಸಂಸ್ಥೆಯ ಅಧ್ಯಕ್ಷ ಜಂಬುನಾಥ ಹೆಚ್.ಎಂ. ಪ್ರಾಸ್ತವಿಕ ನುಡಿಗಳನ್ನಾಡಿ, ಇತ್ತೀಚಿನ ದಿನಗಳಲ್ಲಿ ಸಂವಿಧಾನ ಮತ್ತು ಕಾನೂನುಗಳಿಗಿಂತ ಧರ್ಮಗಳು ಮಿಗಿಲಾಗಿ ನಿಲ್ಲುತ್ತಿವೆ.  ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರಿ, ಅಮಾನವೀಯ ಕೃತ್ಯಗಳು ಹೆಚ್ಚುತ್ತಿವೆ. ಕುವೆಂಪುರವರ ವಿಶ್ವಮಾನವ ಸಂದೇಶ ಇಂದಿನ ಯುವಕರು ಅರಿಯಬೇಕಿದೆ.

    ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳಲ್ಲಿ ವಿದ್ಯಾಥರ್ಿಗಳನ್ನೇ ಹೆಚ್ಚಾಗಿ ಪಾಲ್ಗೊಳ್ಳುವಂತೆ ಮಾಡುವುದು ಉತ್ತಮ ಎಂದರು.

ತಹಶೀಲ್ದಾರ ಹೆಚ್.ವಿಶ್ವನಾಥ ಸ್ವಾಗತಿಸಿ, ಮುಂದಿನ ವರ್ಷ ಕುವೆಂಪುರವರ ಒಂದು ನಾಟಕ ಪ್ರದರ್ಶನಗೊಳ್ಳುವಂತಾಗಲಿ ಎಂದರು. ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕಾಧ್ಯಕ್ಷ ಎತ್ನಳ್ಳಿ ಮಲ್ಲಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಡಿ.ಜೋಶಿ, ತಾಲೂಕು ಪಂಚಾಯತ್ ಕಾರ್ಯನಿವರ್ಾಹಕ ಅಧಿಕಾರಿ ಟಿ.ವೆಂಕೋಬಪ್ಪ, ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಪ್ರಾಚಾರ್ಯ ಕನಕೇಶಮೂತರ್ಿ ಉಪಸ್ಥಿತರಿದ್ದರು.