ಲೋಕದರ್ಶನ ವರದಿ
ಕುಷ್ಟಗಿ 02: ಹಣ ಅಂತಸ್ತು ಗಳಿಸಬಹುದು ಆದರೆ ಸಂಗೀತ ಮತ್ತು ವಿದ್ಯ ಈ ಮೂರು ಅಕ್ಷರವನ್ನು ಗಳಿಸಲು ಸಾಧ್ಯವಿಲ್ಲ ಸರಸ್ವತಿ ವಲಿದಾಗ ಮಾತ್ರ ಸಂಗೀತ ಮತ್ತು ವಿದ್ಯ ವಲಿಯುತ್ತದೆ. ಆದ್ದರಿಂದ ಯುವ ಪೀಳಿಗಳು ಮತ್ತು ಬುದ್ಧಿ ಜೀವಿಗಳು ಈ ನಮ್ಮ ಸಂಸ್ಕೃತಿಯ ಪರಂಪರೆಯ ಜನಪದದ ಮೂಲ ಪದವಾಗಿರುವ ತತ್ವ ಪದವನ್ನು ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬರು ಸಹಕಾರಿಯಾಗಬೇಕಾಗಿದೆ ಎಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸಂದೀಪ್ ನಗರ ಕುಷ್ಟಗಿ ಮುಖ್ಯಗುರುಗಳಾದ ಕಳಕಮಲ್ಲೇಶ ಬೋಗಿ ಹೇಳಿದರು.
ಇಲ್ಲಿನ ಸಂದೀಪ್ ನಗರದ ಹುಲಿಗೆಮ್ಮ ದೇವಿ ದೇವಸ್ಥಾನ ಹತ್ತಿರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸಂಭಾಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಹಾಗೂ ಮಂಜುನಾಥ ಗ್ರಾಮೀಣ ವಿವಿದ್ಧೋಶಗಳ ಅಭಿವೃದ್ಧಿ ಹಾಗೂ ಸಾಂಸ್ಕೃತಿ ಕಲಾ ಸಂಸ್ಥೆ ನೆರೆಬೆಂಚಿ ಇವರುಗಳ ಆಶ್ರಯದಲ್ಲಿ ತತ್ವಪದಗಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಮ್ಮ ಜನಪದ, ತತ್ವಪದ, ಶಾಸ್ತ್ರೀಯ ಸಂಗೀತ, ಅತ್ತಿಪದ ದೊಡ್ಡಾಟದಪದ, ನಾಟಕ ಕಲೆ ಇನ್ನು ಅನೇಕ ಪದಗಳು ಪ್ರತಿ ಮನುಷನ ಒಳ್ಳೆಯ ಗುಳಗಳನ್ನು ಅಳೆಯುತ್ತವೆ. ಈ ನಮ್ಮ ಮೂಲ ಜನಪದ ಡೋಲಾಕ್ ನಾದ ಇರಬಹುದು ಹಲಗೆ ನಾದಗಳು, ಹಾಮರ್ೋನಿಯಂ, ತಬಲ, ಡೊಳ್ಳು ಇವುಗಳು ದೇವರಿಗೆ ಪ್ರೀಯವಾದದ್ದು ಇಂತಹ ಕಲೆಗಳು ಸಿನಿಮಾರಂಗಕ್ಕೆ ಅಟ್ಟಿಕೊಂಡಿವೆ. ಆದರೆ ವಿದ್ಯೆ ಎಷ್ಟು ಮುಖ್ಯನೋ ಎಷ್ಟೆ ಜನಪದವು ಕೂಡ ಮುಖ್ಯವಾಗಿದ್ದು ಇಂತಹ ಜನಪದ ಉಳಿಸಿ ಬೆಳೆಸುವಲ್ಲಿ ನಮ್ಮ ನಿಮ್ಮಲ್ಲರ ಪಾತ್ರ ಬಹುಮುಖ್ಯವಾಗಿದ್ದು ಇಂತಹ ಕಾರ್ಯಕ್ರಮ ಯಶಸ್ವಿಯಾಗಬೇಕೆಂದರೆ ಸಾರ್ವಜನಿಕರ ಸಹಕಾರ ಅಗತ್ಯವಾಗಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಕಾಡಮಿ ಪ್ರಶಸ್ತಿ ವಿಜೇತ ವಾಲ್ಕೀಕಪ್ಪ ಯಕ್ಕರನಾಳ ಮಾತನಾಡಿ ಸರಕಾರ ಹೆಚ್ಚು ಹೆಚ್ಚಾಗಿ ಸಂಘ ಸಂಸ್ಥೆಯ ಮೂಲಕ ಮತ್ತು ಕಲಾ ಸಂಘಗಳ ಮೂಲಕ ಹೆಚ್ಚು ಕಾರ್ಯಕ್ರಮವನ್ನು ನೀಡುತ್ತಿದೆ ಆದರೆ ಇಂತಹ ಕಾರ್ಯಕ್ರಮಗಳಿಗೆ ಸಾರ್ವಜನಿಕರ ಸಹಕಾರ ಕಡಿಮೆ ಇದ್ದು ಸಾರ್ವಜನಿಕರು ಇಂತಹ ಕಾರ್ಯಕ್ರಮಗಳಿಗೆ ಸಹಕರಿಸಿದೆ ನಮ್ಮ ಮೂಲ ಜನಪದ ಉಳಿಸಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ತತ್ವಪದ ಕಲಾವಿದರಾದ ಪವಾಡೆಪ್ಪ ಚೌಡ್ಕಿ ಹಾಗೂ ಕಲಾ ತಂಡ ಶಾಲಾ ಮಕ್ಕಳಿಗೆ ಮತ್ತು ಕಾರ್ಯಕ್ರಮದಲ್ಲಿ ಕುಡಿದ ಪ್ರೇಕ್ಷಕರ ಮುಂದೆ ಅದ್ಬುತವಾಗಿ ತತ್ವಪದ ಕಾರ್ಯಕ್ರಮವನ್ನು ನೆಡೆಸಿಕೊಟ್ಟರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯಧಶರ್ಿಗಳಾದ ಬಸವರಾಜ ಉಪ್ಪಲದಿನ್ನಿ, ಹಾಮರ್ೋನಿಯಂ ಕಲಾವಿದರಾದ ದೇವೇಂದ್ರಪ್ಪ ಕಮ್ಮಾರ, ಶರಣಯ್ಯ ಬಾಗಲವಾಡಮಠ, ಮಾನಪ್ಪ ಮಂಡಲಮರಿ, ದುರಗಪ್ಪ ಚೂರಿ, ಅಯಪ್ಪ ಬಡಿಗೇರ, ಚನ್ನಪ್ಪ ಬಾವಿಮನಿ, ಮರಿಸ್ವಾಮಿ, ಪರಶುರಾಮ ವಣಗೇರಿ ಕೊಳ್ಳಪ್ಪ ಬೂದ್ ಸೇರಿದಂತೆ ಶಾಲಾ ಶಿಕ್ಷಕರು, ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.