ಈಗಿನ ಮಹಿಳೆಯರು ಎಲ್ಲ ರಂಗಗಳಲ್ಲಿಯೂ ಮುಂದೆ ಇದ್ದಾರೆ - ಶಾಸಕ ವಿಶ್ವಾಸ ವೈದ್ಯ
ಸವದತ್ತಿ, 27 : ಈಗಿನ ಮಹಿಳೆಯರು ಮನೆಯಲ್ಲಿನ ತಮ್ಮ ಜವಾಬ್ದಾರಿಯುತವಾದ ಕೆಲಸ ಕಾರ್ಯಗಳನ್ನು ನಿರ್ವಹಿಸುವುದರ ಜೊತೆಗೆ ಸಮಾಜದ ಕೆಲಸ ಮತ್ತು ಜೀವನದಲ್ಲಿನ ಎಲ್ಲ ನೋವು ನಲಿವುಗಳನ್ನು ಅನುಭವಿಸಿ ತಮ್ಮ ಸಾಧನೆಯ ಹಾದಿಯನ್ನು ಬಿಟ್ಟಿರುವುದಿಲ್ಲ.ಈಗಿನ ಮಹಿಳೆಯರು ಎಲ್ಲ ರಂಗಗಳಲ್ಲಿಯೂ ಮುಂದೆ ಇದ್ದಾರೆ ಎಂದು ಶಾಸಕ ವಿಶ್ವಾಸ ವೈದ್ಯರವರು ಮಾತನಾಡಿದರು.ಅವರು ಪಟ್ಟಣದ ಹತ್ತಿರದ ನಿಕ್ಕಮ್ ಮಂಗಲ ಕಾರ್ಯಾಲಯದಲ್ಲಿ ತಾಲೂಕಾ ಆಡಳಿತ ಮತ್ತು ಶಿಶು ಅಭಿವೃದ್ಧಿ ಯೋಜನಾ ಇಲಾಖೆ ಇವುಗಳ ಸಯುಕ್ತ ಆಶ್ರಯದಲ್ಲಿ ಆಚರಿಸಿದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುನಿತಾ ಪಾಟೀಲ್ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ಮೇಲೆ ಮುಖ್ಯ ಅತಿಥಿಗಳಾಗಿ ಪುರಸಭೆ ಅಧ್ಯಕ್ಷರಾದ ಚಿನ್ನವ್ವ ಗಿ ಹುಚ್ಚಣ್ಣವರ, ಉಪಾಧ್ಯಕ್ಷರಾದ ದಾವಲಬಿ ಸನದಿ, ಮುನವಳ್ಳಿ ಪುರಸಭೆ ಅಧ್ಯಕ್ಷರಾದ ಸಿ. ಬಿ. ಬಾಳಿ, ಚಂದ್ರು ಪೂಜೆರ, ಬಿಇಒ ಮೋಹನ್ ದಂಡಿನ, ಟಿಎ??? ಡಾ. ಶ್ರೀಪಾದ್ ಸಬನೀಸ, ಡಾ. ಅನಿಲ್ ಮರಲಿಂಗನವರ, ಕೃಷಿ ಅಧಿಕಾರಿ ಶಿವಪ್ರಕಾಶ ಪಾಟೀಲ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಮೈತ್ರಾದೇವಿ ವಸ್ತ್ರದ, ಆರ್.ಎಫ್.ಒ ನೇಹಾ ತೊರಗಲ, ಸಿಡಿಪಿಓ ಸುನೀತಾ ಪಾಟೀಲ, ಹಾಗೂ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ದೀಪಾ . ಇಲಾಖೆಯ ಮೇಲ್ವಿಚಾರಕಿಯರು ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳಾದ ಉಪಸ್ಥಿತರಿದ್ದರು.
ಉಪನ್ಯಾಸಕರಾಗಿ ಡಾಕ್ಟರ್ ಶಕುಂತಲಾ ಅಜ್ಜಣ್ಣವರ ಮಹಿಳಾ ದಿನಾಚರಣೆ ಕುರಿತು ಉಪನ್ಯಾಸ ನೀಡಿದರು.ನಂತರ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕರಿಗೆ ತಾಲೂಕ ಮಟ್ಟದ ಅಧಿಕಾರಿಗಳಿಗೆ ಪುರಸಭೆಯ ಅಧ್ಯಕ್ಷರುಗಳಿಗೆ ಸೇವೆಯಿಂದ ನಿವೃತ್ತಿ ಹೊಂದಿದ ಅಂಗನವಾಡಿ ಶಿಕ್ಷಕಿಯರಿಗೆ. ಮತ್ತು ಇಲಾಖೆಯಲ್ಲಿ ಸಾಧನೆಗೈದ ಸಿಬ್ಬಂದಿಗಳಿಗೆ ಶಿಶು ಅಭಿವೃದ್ಧಿ ಯೋಜನಾ ಇಲಾಖೆಯ ವತಿಯಿಂದ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು. ನಂತರ ಅಂಗನವಾಡಿ ಶಿಕ್ಷಕಿಯರು ಹಾಗೂ ಸಹಾಯಕಿಯರು ಮನರಂಜನೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.ಸಾಹಿತಿ ಶ್ರೀಧರ್ ಆಸಂಗಿಹಾಳ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ದೀಪಾ ವಂದನಾರೆ್ಣ ಮಾಡಿದರು