ಮಹಿಳೆಯರನ್ನು ನಾಯಕ ಗುಣ ಹೊಂದಿದ ವ್ಯಕ್ತಿಗಳನ್ನಾಗಿಸಬೇಕು: ಸಬಿಹಾ

ಲೋಕದರ್ಶನ ವರದಿ

ವಿಜಯಪುರ: ಮಹಿಳಾ ವಿಶ್ವವಿದ್ಯಾನಿಲಯವು ಶೈಕ್ಷಣಿಕ, ಸಾಮಾಜಿಕ ಸ್ಪಂದನೆ ಮತ್ತು ಆಡಳಿತ ನೆಲೆಯಲ್ಲಿ ನಿರಂತರ ಸುಧಾರಣೆಯ ಮಾರ್ಗದಲ್ಲಿದೆ. ಗ್ರಾಮೀಣ ಭಾಗದಲ್ಲಿ ಮಹಿಳೆಯರಿಗೆ ಉನ್ನತ ಶಿಕ್ಷಣ ನೀಡುವ ಉದ್ದೇಶದಿಂದ ನಮ್ಮ ವಿಶ್ವವಿದ್ಯಾನಿಲಯವು ತನ್ನ ಭೌಗೋಳಿಕ ವ್ಯಾಪ್ತಿಯನ್ನು ಕನರ್ಾಟಕದಾದ್ಯಂತ ವಿಸ್ತರಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದು ಮಹಿಳಾ ವಿವಿ ಕುಲಪತಿ ಪ್ರೊ.ಸಬಿಹಾ ಹೇಳಿದರು. ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ನಡೆದ ಹತ್ತನೆಯ ಘಟಿಕೋತ್ಸವದಲ್ಲಿ ಮಾತನಾಡಿ ವಿಶ್ವವಿದ್ಯಾನಿಲಯದ ಕಾರ್ಯಚಟುವಟಿಕೆಗಳನ್ನು ವಿವರಿಸಿದರು.

ರಾಜ್ಯ ಸಕರ್ಾರವು ಬೆಂಗಳೂರು ಸಮೀಪ ಅದ್ದಿಗಾನಹಳ್ಳಿಯಲ್ಲಿ 4 ಎಕರೆ ಭೂಮಿಯನ್ನು ಮಂಜೂರು ಮಾಡಿದ್ದು, ವಿಶ್ವವಿದ್ಯಾನಿಲಯವು ಅಲ್ಲಿ ಮಹಿಳೆಯರಿಗೆ ಕೆಎಎಸ್/ಐಎಎಸ್ ಪರೀಕ್ಷೆಗಳಿಗೆ ತರಬೇತಿ ಕೇಂದ್ರವನ್ನು ಮತ್ತು ಪ್ರಾದೇಶಿಕ ಕೇಂದ್ರವನ್ನು ಆರಂಭಿಸಲು ಯೋಜನೆ ರೂಪಿಸುತ್ತಿದೆ  ಶೈಕ್ಷಣಿಕ ವರ್ಷ ವಿಶ್ವವಿದ್ಯಾನಿಲಯದಲ್ಲಿ 18 ಸಹಾಯಕ ಪ್ರಾಧ್ಯಾಪಕರು, 10 ಸಹ ಪ್ರಾಧ್ಯಾಪಕರು ಹಾಗೂ 6 ಪ್ರಾಧ್ಯಾಪಕರ ನೇಮಕಾತಿಯನ್ನು ಜುಲೈ 2018ರಲ್ಲಿ ನಡೆಸಲಾಗಿದೆ ಎಂದು ಹೇಳಿದರು. ವಿಶ್ವವಿದ್ಯಾನಿಲಯವು ವಿದ್ಯಾಥರ್ಿನಿಯರ ಸಾಧನೆಗಳ ಮೂಲಕ ರಾಜ್ಯ ಹಾಗೂ ರಾಷ್ಟ್ರಾದ್ಯಂತ ಗುರುತಿಸಲ್ಪಡುತ್ತಿರುವುದು ಹೆಮ್ಮೆಯ ಸಂಗತಿ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ಗ್ರಂಥಾಲಯ ಮಾಹಿತಿ ವಿಜ್ಞಾನ ವಿಭಾಗಗಳು ಈ ವರ್ಷದಿಂದಲೇ ಕೆಲವು ಮೌಲ್ಯಾಧಾರಿತ ಕೋಸರ್ುಗಳನ್ನು ಪ್ರಾರಂಭಿಸಿವೆ. ಹಿಂದಿ ಹಾಗೂ ಆಹಾರ ಸಂಸ್ಕರಣೆ ಮತ್ತು ಪೌಷ್ಟಿಕತೆಯ ವಿಜ್ಞಾನ ವಿಭಾಗಗಳಲ್ಲಿ ಪಿಎಚ್.ಡಿ ಮಾರ್ಗದರ್ಶನ ಸೌಲಭ್ಯವನ್ನು ಮೊದಲ ಬಾರಿಗೆ ಈ ಶೈಕ್ಷಣಿಕ ವರ್ಷದಿಂದ ಕಲ್ಪಿಸಲಾಗಿದೆ. ಸಂಲಗ್ನ ಹೊಂದಿದ ಸ್ನಾತಕೋತ್ತರ ಕಾಲೇಜುಗಳಲ್ಲಿಯು ಅರ್ಹ ಪ್ರಾಧ್ಯಾಪಕರಿಗೆ ಸಂಶೋಧನಾ ಮಾರ್ಗದರ್ಶನಕ್ಕೆ ಇದೇ ಪ್ರಥಮ ಬಾರಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಪ್ರೊ.ಸಬಿಹಾ ವಿವರಿಸಿದರು. 

  ವಿಶ್ವವಿದ್ಯಾನಿಲಯವು ಪಯರ್ಾಯ ಇಂಧನ ಬಳಕೆಯನ್ನು ಉತ್ತೇಜಿಸುತ್ತಿದ್ದು, ಕೇಂದ್ರ ಸಕರ್ಾರದ ಎಸ್ಇಸಿಐ-ಬೂಟ್ ಯೋಜನೆ ಅಡಿಯಲ್ಲಿ ಎರಡು ಸೌರ ಘಟಕಗಳನ್ನು ವಿಶ್ವವಿದ್ಯಾನಿಲಯದಲ್ಲಿ ಸ್ಥಾಪಿಸಲಾಗಿದೆ. ಈ ಘಟಕಗಳು ಒಟ್ಟು 170 ಕಿಲೋವ್ಯಾಟ್ ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವ ಸಾಮಥ್ರ್ಯವನ್ನು ಹೊಂದಿವೆ. ಈ ಘಟಕಗಳಿಂದ ನಮ್ಮ ವಿಶ್ವವಿದ್ಯಾನಿಲಯಕ್ಕೆ ಪ್ರತಿ ತಿಂಗಳು ರೂ.1 ಲಕ್ಷಗಳ ಉಳಿತಾಯವಾಗುತ್ತಿದೆ ಎಂದರು.

ಮಹಿಳಾ ಪದವೀಧರರನ್ನು ನಾಯಕ ಗುಣ ಹೊಂದಿದ ಮಹತ್ತರ ವ್ಯಕ್ತಿಗಳನ್ನಾಗಿ ಮಾಡುವುದು ನಮ್ಮ ಕನಸಾಗಿದೆ. ಇದರೊಂದಿಗೆ ನಮ್ಮ ವಿಶ್ವವಿದ್ಯಾನಿಲಯವು ಅತ್ಯಂತ ಒಳ್ಳೆಯ ವಾತಾವರಣವನ್ನು ಕಲ್ಪಿಸುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ ಎಂದರು.