ಮಹಿಳಾ ಹಾಕಿ ವಿಶ್ವಕಪ್: ಇಂಗ್ಲೆಂಡ್-ಭಾರತ ಪಂದ್ಯ ಡ್ರಾ


ಲಂಡನ್ಇಂಗ್ಲೆಂಡ್ ವಿರುದ್ಧ ನಡೆದ ಮಹಿಳಾ ಹಾಕಿ ವಿಶ್ವಕಪ್ ರೋಚಕ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಸಮಬಲ ಸಾಧಿಸಿದ್ದು 1-1 ಅಂತರದಿಂದ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ

25 ನೇ ನಿಮಿಷದಲ್ಲಿ ನೇಹಾ ಗೋಯಲ್ ಭಾರತದ ಪರ ಗೊಲ್ ದಾಖಲಿಸಿ ಮುನ್ನಡೆ ಕಾಯ್ದುಕೊಳ್ಳಲು ನೆರವಾದರು. ಬಳಿಕ ಇಗ್ಲೆಂಡ್ ಲಿಲ್ಲಿ ಓವ್ಸ್ಲೇ 54 ನೇ ನಿಮಿಷದಲ್ಲಿ ಭಾರತದ ವಿರುದ್ಧ ಗೋಲ್ ದಾಖಲಿಸಿ ಪಂದ್ಯದಲ್ಲಿ ಸಮಬಲ ಸಾಧಿಸಿದೆ

ಆತಿಥೇಯ ತಂಡಕ್ಕೆ 5 ಪೆನಾಲ್ಟಿ ಕಾರ್ನರ್ ಗಳು ಲಭ್ಯವಾಗಿತ್ತಾದರೂ ಅದನ್ನು ಬಳಸಿಕೊಳ್ಳುವುದಕ್ಕೆ ವಿಫಲವಾಯಿತು. ಇದೇ ವೇಳೆ ಭಾರತದ ಗೋಲ್ ಕೀಪರ್ ಸಹ ಪರಿಣಾಮಕಾರಿಯಾಗಿದ್ದರಿಂದ ಇಂಗ್ಲೆಂಡ್ ತಂಡ ಹೆಚ್ಚಿನ ಗೋಲ್ ಹೊಡೆಯುವುದಕ್ಕೆ ಸಾಧ್ಯವಾಗದೇ ಭಾರತದೊಂದಿಗೆ ಪಂದ್ಯವನ್ನು ಡ್ರಾ ಮಾಡಿಕೊಂಡಿತು