ಮಹಿಳಾ ಹಾಕಿ ವಿಶ್ವಕಪ್ 2018: ಉದ್ಘಾಟನಾ ಪಂದ್ಯದಲ್ಲಿ ಭಾರತ-ಇಂಗ್ಲೆಂಡ್ ಮುಖಾಮುಖಿ


ಲಂಡನ್ 20: ಫೀಫಾ ಫುಟ್ಬಾಲ್ ವಿಶ್ವಕಪ್ ಟೂನರ್ಿ ಮುಕ್ತಾಯದ ಬೆನ್ನಲ್ಲೇ ಇತ್ತ ಲಂಡನ್ ನಲ್ಲಿ ಮಹಿಳಾ ಹಾಕಿ ವಿಶ್ವಕಪ್ ಟೂನರ್ಿ ಆರಂಭವಾಗುತ್ತಿದ್ದು, ಉದ್ಘಾಟನಾ ಪಂದ್ಯದಲ್ಲಿ ಭಾರತ ತಂಡ ಅತಿಥೇಯ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. 

ಭಾರತ ತಂಡ ಗ್ರೂಪ್ ಬಿಯಲ್ಲಿದ್ದು, ಇಂಗ್ಲೆಂಡ್ ವಿರುದ್ಧದ ಪಂದ್ಯದ ಬಳಿಕ ಜುಲೈ 26ರಂದು ಭಾರತದ ಮಹಿಳೆಯರ ತಂಡ ಐಲರ್ೆಂಡ್ ತಂಡವನ್ನು ಎದುರಿಸಲಿದೆ. ಆ ಬಳಿಕ ಜುಲೈ 29ರಂದು ಅಮೆರಿಕ ತಂಡದ ವಿರುದ್ಧ ಭಾರತ ಸೆಣಸಲಿದೆ. ಇನ್ನು ಪ್ರತಿಷ್ಠಿತ ಟೂನರ್ಿಗೆ ನಾಯಕಿ ರಾಣಿ ನೇತೃತ್ವದ ಭಾರತ ತಂಡ ಸಕಲ ರೀತಿಯಲ್ಲೂ ಸಜ್ಜಾಗಿದ್ದು, ಟೂನರ್ಿಯಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. 

ಈ ಬಗ್ಗೆ ಮಾತನಾಡಿರುವ ನಾಯಕಿ ರಾಣಿ, ನಮ್ಮ ಮೇಲೆ ಯಾವುದೇ ಒತ್ತಡವಿಲ್ಲ. ಆದರೆ ಅತಿಥೇಯರಾಗಿರುವ ಇಂಗ್ಲೆಂಡ್ ತಂಡದ ಮೇಲೆ ಖಂಡಿತಾ ಒತ್ತಡ ಇರುತ್ತದೆ. ಈ ಹಿಂದೆ ಕಾಮನ್ ವೆಲ್ಚ್ ಗೇಮ್ಸ್ ಕ್ರೀಡಾಕೂಟದಲ್ಲಿ ಇಂಗ್ಲೆಂಡ್ ತಂಡವನ್ನು ನಾವು ಮಣಿಸಿದ್ದೇವೆ. ಹೀಗಾಗಿ ಈ ಪಂದ್ಯದಲ್ಲೂ ಗೆಲ್ಲುವ ವಿಶ್ವಾಸವಿದೆ. ತಂಡದ ಫಾರ್ವಡರ್್ ಪ್ರಸ್ತುತ ಅತ್ಯುತ್ತಮವಾಗಿದ್ದು, ನಾವು ಯಾವುದೇ ನಿದರ್ಿಷ್ಟ ಆಟಗಾತರ್ಿಯರ ಮೇಲೆ ಅವಲಂಬಿತರಾಗಿಲ್ಲ. 

ತಂಡದಲ್ಲಿ ಯುವ ಆಟಗಾತರ್ಿಯರಿದ್ದು, ಖಂಡಿತಾ ಉತ್ತಮ ಪ್ರದರ್ಶನ  ನೀಡುತ್ತೇವೆ. ತಂಡದ ಸ್ಟಾರ್ ಆಟಗಾತರ್ಿ ಗುಜರ್ಿತ್ ಕೌರ್ ಸೇರ್ಪಡೆಯಿಂದಾಗಿ ತಂಡದಲ್ಲಿ ಹೊಸ ಹುರುಪು ಸೃಷ್ಟಿಯಾಗಿದೆ. ಅಂತೆಯೇ 200ಕ್ಕೂ ಹೆಚ್ಚು ಪಂದ್ಯಗಳನ್ನಾಡಿರುವ ವಂದನಾ ಕಟಾರಿಯಾ ಅವರ ಅನುಭವ ನೆರವಾಗಲಿದೆ ಎಂದು ರಾಣಿ ಹೇಳಿದರು.