ಮಹಿಳೆಯರು ಸ್ವಾವಲಂಬನೆಯಾಗಿ ಬದುಕಿ: ಜಯಂತಿ ನಾಯಕ
ಇಂಡಿ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಟ್ರಸ್ಟ್) ಇಂಡಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ಜೋಡಗುಡಿ ಶ್ರೀ ಮರುಳಸಿದ್ದೇಶ್ವರ ದೇವಾಲಯದ ಆವರಣದಲ್ಲಿ ನಡೆಯಿತು.ಈ ಕಾರ್ಯಕ್ರಮ ವಿಜಯಪೂರ ಪೋಲಿಸ್ ಹೇಡ್ ಕಾನ್ಸ್ಟೇಬಲ್ ಶ್ರೀಮತಿ ಜಯಂತಿ ನಾಯಕ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು ಭಾರತ ಭವ್ಯವಾದ ಸಂಸ್ಕೃತಿಯನ್ನು ಹೊಂದಿರುವ ರಾಷ್ಟ್ರವಾಗಿದೆ.ಇಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನವಿದೆ,ಮಹಿಳಿಯರು ಈ ಸಮಾಜದಲ್ಲಿ ಧೈರ್ಯವಾಗಿ ಇರಬೇಕು, ಮಕ್ಕಳಿಗೆ ಸಂಸ್ಕಾರಯುತ್ತವಾದ ಶಿಕ್ಷಣ ನೀಡಬೇಕು.ಯಾರನ್ನು ಅತಿಯಾಗಿ ನಂಬಬೇಡಿ ತಮ್ಮ ಯಾವುದೇ ಸಮಯದಲ್ಲಿ ಸಿಲುಕಿದಾಗ ತಕ್ಷಣವೇ ಪೋಲಿಸ್ ಇಲಾಖೆ ಸಾಹಯವಾಣಿ 112 ಕ್ಕೆ ಕರೆ ನಾವು ನಿಮ್ಮ ನೆರವಿಗೆ ಬರುತ್ತದೆ,ತಮ್ಮ ಮೇಲೆ ದೌರ್ಜನ್ಯಕ್ಕೆ ಬಂದ ವ್ಯೆಕ್ತಿಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ಪ್ರಾಯೋಗಿಕವಾಗಿ ಮಾಡಿ ನೆರೆದ ಮಹಿಳಿಯರ ಮೆಚ್ಚುಗೆ ಪಾತ್ರರಾದರು.ಈ ಸಂದರ್ಭದಲ್ಲಿ ಇಂಡಿ ತಾಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಅಧಿಕಾರಿ ನಟರಾಜ್ ಎಲ್ ಎಂ ಮಾತನಾಡಿ ಮಹಿಳೆಯರನ್ನು ಸಾಮಾಜಿಕವಾಗಿ ಆರ್ಥಿಕವಾಗಿ ಮುಂದೆ ತರಲು ನಮ್ಮ ಸಂಘದಿಂದ ಅನೇಕ ಬಗೇಯ ಯೋಜನೆಯಗಳನ್ನು ಜಾರಿಗೆ ತಂದಿದ್ದು ನಾವು ಸಾಲದ ರೂಪದಲ್ಲಿ ಹಣ ನೀಡಿ ಮಹಿಳಿಯರ ಸ್ವಾವಲಂಬನೆ ಬದುಕು ಹಸನಾಗಿಸಲು ನಮ್ಮ ಸಂಘ ಸದಾ ಸಿದ್ಧವಾಗಿದೆ ಎಂದು ಹೇಳಿದರು, ಉಪನ್ಯಾಸಕರಾದ ಸುರೇಶ ಗೌಡಪ್ಪಗೋಳ ಭಾರತದಲ್ಲಿ ತಾಯಿಯಂದಿರಗೆ ದೇವತೆ ಎಂತೆ ಗೌರವಿಸುತ್ತಾರೆ ಭಾರತೀಯ ಮಹಿಳೆಯ ಸಂಸ್ಕೃತಿ ಇಡೀ ಜಗತ್ತು ಮೆಚ್ಚುವಂಥದ್ದು ಎಂದು ಹೇಳಿದರು. ತಮ್ಮಣ್ಣ ಪೂಜಾರಿ ಅವರು ಮಾತನಾಡಿ ಮಕ್ಕಳಿಗೆ ಸಂಸ್ಕಾರಯುತ್ತವಾದ ಶಿಕ್ಷಣ ನೀಡಬೇಕು, ಮಕ್ಕಳ ಬೆಳವಣಿಗೆಯಲ್ಲಿ ತಾಯಿ ಪಾತ್ರ ಬಹುಮುಖ್ಯವಾದ್ದು ಎಂದು ಹೇಳಿದರು.ಈ ಪತ್ರಕರ್ತರಾದ ಸಚೀನ ಇಂಡಿ ಸೇರಿದಂತೆ ಅನೇಕರು ಮಾತನಾಡಿದರು, ಪೋಲಿಸ್ ಕಾನ್ಸ್ಟೇಬಲ್ ಸಂಗೀತಾ ಶೆಡಬಾಳ, ತಡವಲಗಾ ವಲಯ ಮೇಲ್ವಿಚಾರಕರಾದ ಅಶ್ವಿನಿ, ಜೈವಿಕ ,ತಾಂಬಾ ವಲಯ ಸವಿತಾ ಆರ್ ಕೆ, ಸುರೇಶಗೌಡ ಗೌಡಪ್ಪಗೊಳ,ಮಳಸಿದ್ದಪ್ಪ ಖಸ್ಕಿ, ಶ್ರೀಶೈಲ ಇಂಡಿ, ಶಶಿಧರ ಬಡಿಗೇರ ಶಿಕ್ಷಕರಾದ ಶಂಕರ ಗೀಡಘಂಟಿ,ಆನಂದ ಮೋರೆ,ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ನಂತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲಾ ಮಹಿಳಿಯರಿಗೆ ಬಹುಮಾನ ವಿತರಣೆ ಮಾಡಲಾಯಿತು.ಈ ಕಾರ್ಯಕ್ರಮದಲ್ಲಿ ಇಂಡಿ ಮತ್ತು ಚಡಚಣ ತಾಲೂಕು ಮಹಿಳಾ ಸಂಘಟನೆಗಳ ಮಹಿಳಾ ಸದಸ್ಯರು ಉಪಸ್ಥಿತರಿದ್ದರು.