ಮಹಿಳೆ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಅಗತ್ಯ: ಮಂಜುಳಾ

ಜನವಾದಿ ಮಹಿಳಾ ಸಂಘಟನೆ ಹಮ್ಮಿಕೊಂಡಿದ್ದ ತಾಲೂಕು ಸಮಾವೇಶ ಉದ್ಘಾಟಿಸಿ ಜಿಲ್ಲಾಧ್ಯಕ್ಷೆ ಮಂಜುಳಾ ಹವಾಲ್ದಾರ್ ಮಾತನಾಡಿದರು

ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ 30: ರಾಜಕೀಯ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಆದ್ಯತೆ ನೀಡುವುದರ ಜೊತೆಗೆ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ಕಡಿವಾಣ ಹಾಕಬೇಕಿದೆ ಎಂದು ಜನವಾದಿ ಮಹಿಳಾ ಸಂಘಟನೆ ಜಿಲ್ಲಾಧ್ಯಕ್ಷೆ ಮಂಜುಳಾ ಹವಾಲ್ದಾರ್ ಹೇಳಿದರು.

    ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಹಮ್ಮಿಕೊಂಡಿದ್ದ ತಾಲೂಕು ಸಮಾವೇಶ ಉದ್ಘಾಟಿಸಿದ್ದರು. 

    ಮಹಿಳೆಯರು ಅನೇಕ ರೀತಿ ತೊಂದರೆಗಳನ್ನು ಅನುಭವಿಸುತ್ತಾ ಸಮಸ್ಯೆಗೆ ಸ್ಪಂದಿಸುವ ಕಾಲವನ್ನು ಹತ್ತಿಕ್ಕಲು ಸಂಘಟನೆಗಳು ಸಜ್ಜಾಗಿವೆ. ಸಂಘಗಳನ್ನು ಸೇರಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಗಂಡು ಹೆಣ್ಣು ಎಂಬ ಮನೋಭಾವನೆಯಿಂದ ಮಹಿಳೆಯರನ್ನು ಕಡೆಗಣೆಸುವವರ ವಿರುದ್ಧ ಸಂಘಗಳು ಧ್ವನಿ ಎತ್ತಬೇಕಾಗಿದೆ. ಆದ್ದರಿಂದ ಸಂಘಗಳ ಸಭೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಆಧುನಿಕ ಯುಗದ ಬದುಕಿನ ಬವಣೆ ನೀಗಿಸಲು ಅನ್ನ ನೀರು ಸೂರು ಎಂಬಿತ್ಯಾದಿ ಮೂಲ ಸೌಕರ್ಯಗಳನ್ನು ಪಡೆಯಲು ಹಲವಾರು ಅವಮಾನಗಳನ್ನು ಎದುರಿಸಿ, ನಿರಾತಂಕವಾಗಿ ಜೀವನ ಸಾಗಿಸಲು ಪಣ ತೊಡಬೇಕಾಗಿದೆ. ಇಂತಹ ಸವಲತ್ತುಗಳಿಗೆ ಸಂಘಗಳು ಸದಾ ಬೆಂಬಲ ಸೂಚಿಸುತ್ತ ಮಹಿಳೆಯರು ಸಕ್ರೀಯವಾಗಬೇಕಿದೆ.

    ಮಹಿಳೆಯರ ರಕ್ಷಣೆಗಾಗಿ ಹಲವಾರು ಕಾನೂನುಗಳನ್ನು ರೂಪಿಸಿ ಕೇವಲ ಕಡತಗಳಿಗೆ ಸೀಮಿತಗೊಳಿಸದೆ ಅವುಗಳ ಅನುಷ್ಠಾನವಾಗಬೇಕಿದೆ. ಸೌಲಭ್ಯ ವಂಚಿತ ಎಲ್ಲಾ ಬಡವರಿಗೆ ನಿವೇಶನ ಹಾಗೂ ವಸತಿ, ಮಹಿಳಾ ಸ್ವಸಹಾಯ ಸಂಘಗಳಿಗೆ ಬ್ಯಾಂಕ್ಗಳಿಂದ ಬಡ್ಡಿ ರಹಿತ ಸಾಲ ಸೌಲಭ್ಯ, ಶೇ. 33ರಷ್ಟು ಮೀಸಲಾತಿ ನೀಡುವಂತೆ ಹಾಗೂ ಮಹಿಳೆಯರ ಮೇಲಾಗುತ್ತಿರುವ ಹಲವು ರೀತಿಯ ದೌರ್ಜನ್ಯಗಳ ವಿರುದ್ಧ ಹೋರಾಡಬೇಕಿದೆ ಎಂದರು.

        ಸಂಘಟನೆಯ  ತಾಲೂಕಾಧ್ಯಕ್ಷೆ ಎಸ್. ಹುಲಿಗೆಮ್ಮ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು, ಅಂಗನವಾಡಿ ಕಾರ್ಯಕತರ್ೆಯರ ಮುಂಖಡರಾದ ರತ್ನಮ್ಮ, ಎಬಿವಿಪಿ ತಾಲೂಕು ಕಾರ್ಯದಶರ್ಿ ಜಯಶ್ರೀ, ಕನರ್ಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಮುಖಂಡ ಕೆ. ಮಲ್ಲಿಕಾಜರ್ುನ ಪಾಲ್ಗೊಂಡಿದ್ದರು.

ಜಿ. ಸರೋಜಾ ಸ್ವಾಗತಿಸಿ ನಿರೂಪಿಸಿದರು, ನಿಶಾ ಪಟೇಲ್ ಕ್ರಾಂತಿ ಗೀತೆ ಹಾಡಿದರು, ಸರಸ್ವತಿ ವಂದಿಸಿದರು.