ಲೋಕದರ್ಶನವರದಿ
ರಾಣೇಬೆನ್ನೂರ04: ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋದ ಮಹಿಳೆಯೋರ್ವಳು ಕಾಣೆಯಾದ ಘಟನೆ ತಾಲೂಕಿನ ಹಿರೇಬಿದರಿ ಗ್ರಾಮದಲ್ಲಿ ನಡೆದಿದೆ. ಕಾಣೆಯಾದವಳನ್ನು ಲಕ್ಷ್ಮೀ ಪ್ರಕಾಶ ಕುಂಚೂರ ಎಂದು ಗುರುತಿಸಲಾಗಿದೆ. ಸುಮಾರು 33 ವರ್ಷದ ಈ ಮಹಿಳೆ 5 ಅಡಿ ಎತ್ತರದ, ಗೋದಿ ಕೆಂಪು ಬಣ್ಣ, ಸಾದಾರಣ ಮೈಕಟ್ಟು, ದುಂಡು ಮುಖ ಹೊಂದಿದ್ದು, ಕನ್ನಡ ಭಾಷೆ ಮಾತನಾಡುವ ಇವಳು ಸೀರೆ ಮತ್ತು ಕುಪ್ಪಸ ತೊಟ್ಟಿರುವ ಹಾಗೂ ಮಧ್ಯೆ ಹಣೆಯಲ್ಲಿ ಗಾಯದ ಕಲೆ ಇರುವ ಎರಡೂ ಕೈಗಳಲ್ಲಿ ಶಾರವ್ವ ಮತ್ತು ಪ್ರಕಾಶ ಎಂದು ಹಚ್ಚೆ ಹಾಕಿದೆ ಗುರುತು ಇದೆ. ಇವಳ ಸುಳಿವು ಸಿಕ್ಕಲ್ಲಿ ಗ್ರಾಮೀಣ ಪೊಲೀಸ್ ಠಾಣೆಗೆ ತಿಳಿಸಬೇಕೆಂದು ಪಿಎಸ್ಐ ಸುನೀಲ್ಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ