ಎಲ್ಲಿ ಅಂತಃಕರುಣ ಇದೆ ಅಲ್ಲಿ ದೇವರಿದ್ದಾನೆ-ರಂಜಾನ್ದಗರ್ಾ

ಲೋಕದರ್ಶನ ವರದಿ

ತಾಳಿಕೋಟೆ 10:ಎಲ್ಲರ ಜೀವಾತ್ಮಗಳ ಲೇಸನ್ನು ಬಯಸ್ಸುವದೇ ಧರ್ಮವಾಗಿದೆ ಎಂದು ಸೋಫಿ ಸಂತರು ಹಾಗೂ ಶರಣರು ತಮ್ಮ ತತ್ವಗಳಲ್ಲಿ ಹೇಳಿದ್ದಾರೆ ಅಂತಹದ್ದನ್ನು ಅರೀಯದೇ ನಾವು ದೂರಿಕರಿಸುತ್ತಾ ಸಾಗಿಬಂದಿದ್ದೇವೆ ಹಾಗಾಗಬಾರದೆಂದು ಧಾರವಾಡದ ಸಾಹಿತಿ ಹಿರಿಯ ಪತ್ರಕರ್ತ ರಂಜಾನ್ದಗರ್ಾ ಅವರು ನುಡಿದರು.

ಗುರುವಾರರಂದು ಸಮಿಪದ ಮೂಕೀಹಾಳ ಗ್ರಾಮದ ಹಜರತ್ ಲಾಡ್ಲೇಮಶಾಕ ಜಾತ್ರಾ ಮಹೋತ್ಸವ ಕುರಿತು ಏರ್ಪಡಿಸಲಾದ 24 ನೇ ವರ್ಷದ ಮಾನವ ಏಕತಾ ಶಾಂತಿ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಸೋಫಿ ಸಂತರನ್ನು ಹಾಗೂ ಶರಣರನ್ನು ಎಂದೇಂದು ನಾವು ಒಂದು ಕ್ಷಣವೂ ಬೇರ್ಪಡಿಸಲು ಸಾದ್ಯವಿಲ್ಲಾ ಮಹ್ಮದ ಪೈಗಂಬರವರ ಹಾಗೂ ಬಸವಣ್ಣನವರ ವ್ಯಕ್ತಿತ್ವ ಹಾಗೂ ಅವರ ನಡೆ ನುಡಿಗಳು ಸನ್ಮಾರ್ಗದತ್ತ ಕೊಂಡೊಯುವಗಳಾಗಿವೆ ಎಂದರು. ಸೋಪಿ ಸಂತರು ಶರಣರು ಹೇಳಿದ್ದು ಎಲ್ಲವೂ ಒಂದೇ ಆಗಿದೆ ದೇವರು ನಮ್ಮಲ್ಲಿಯೇ ಒಳಗೆ ಇದ್ದಾನೆ ಅಗಮ್ಯ ಅಗೋಚರ ಅಪ್ರತಿಮೆ ಎಂಬಂತೆ ದೇವರನ್ನು ಯಾವ ಜೊತೆ ಹೋಲಿಕೆ ಮಾಡಲಾಗದು ಇದೇ ಮಾತನ್ನು ಬಸವಣ್ಣನವರು ಹಾಗೂ ಸಂತರು ಹೇಳಿದ್ದು ಒಂದೇ ಆಗಿದೆ ಎಂದರು. ಸಖಲ ಜೀವಾತ್ಮರಿಗೆ ಲೇಸನ್ನು ಬಯಸುವ ಮನಸ್ಸು ಶರಣರದ್ದು ಸಂತರದ್ದಾಗಿದೆ ಶ್ರೀಮಂತಿಕೆ ಎಂಬುದು ಮನಸ್ಸಿನಲ್ಲಿರುತ್ತದೆ ಅದು ಹೊಸ ಬಟ್ಟೆ ಹಾಕಿಕೊಂಡರೆ ಹೊಸ ಕಟ್ಟಡ ಕಟ್ಟಿಸಿದಲ್ಲಿ ಅಲ್ಲಿ ಇರುವದಿಲ್ಲಾವೆಂದು ಶರಣರು ಹೇಳಿದ್ದಾರೆಂದರು. ಇಸ್ಲಾಂ ಸೋಪಿಗಳಿಂದ ಬಂದಂತಹದ್ದಾಗಿದೆ ಇದನ್ನು ಸ್ವಾಮಿ ವಿವೇಕಾನಂದ ಅವರು ಹೇಳಿದ್ದಾರೆಂದು ಹೇಳಿದ ದಗರ್ಾ ಅವರು ದುಡಿಯುವ ಜೀವಗಳನ್ನು ಶರಣರು ಒಂದುಗೂಡಿಸಿ ಶರಣರು ಕ್ರಾಂತಿ ಮಾಡಿದವರಾಗಿದ್ದಾರೆ ಕಾರಣ ನಾವು ಏನಾದರೂ ಆಗಿ ನಿಜವಾದ ಭಾರತ ದೇಶದಲ್ಲಿ ಭಾರತೀಯರಾಗಬೇಕೆಂದ ಅವರು ಸಂತ ತುಕಾರಾಮ ಅವರ ವಿವರಣೆಗಳು ನೀಡಿದಲ್ಲದೇ ದುಖಃ ನೋವು ಆನಂದ ಎಲ್ಲರಲ್ಲಿದೆ ಇದನ್ನು ಅಥರ್ೈಸಿಕೊಳ್ಳಬೇಕೆಂದು ದೆಹಲಿಯ ನಿಜಾಮುದ್ದೀನ ಅವರ ವ್ಯಕ್ತಿತ್ವ ಕುರಿತು ಅಮೇರಿಕೂಸ್ರೋ ಅವರ ವ್ಯಕ್ತಿತ್ವ ಕುರಿತು ವಿವರಿಸುತ್ತಾ ಮಾನವ ಏಕತಾ ಸಮಾವೇಶಕ್ಕೆ ಮುಂದಾಗಿ ಎಲ್ಲರನ್ನು ಒಗ್ಗೂಡಿಸುವ ಕಾರ್ಯ ಮಾಡಿದ ದಗರ್ಾ ಕಮಿಟಿಯ ಅಧ್ಯಕ್ಷ ಕೆ.ಎಚ್.ಪಾಟೀಲ ಅವರ ಸೇವಾ ಕಾರ್ಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನೋರ್ವ ಸಾನಿದ್ಯ ವಹಿಸಿದ ಹೈದ್ರಾಬಾದ್ದ ಭಾವೈಕ್ಯತಾ ಹಾಗೂ ವಿಶ್ವಶಾಂತಿ ಪ್ರವಚನಕಾರರಾದ ಹಜರತ್ ಮೌಲಾನಾ ಸೈಯದ ಭಾಷಾ ಅವರು ಮಾತನಾಡಿ ಯಾವುದೇ ಉದ್ದೇಶ ವಿಲ್ಲದ ಉದ್ಯೋಗ ಮಾಡಿದರೆ ಅದು ವ್ಯರ್ಥವಾಗಲಿದೆ ಭಾರತ ದೇಶದಲ್ಲಿ ಶಾಂತಿ ಮೂಡಬೇಕಾದರೆ ಎಲ್ಲರಲ್ಲಿಯೂ ಏಕತೆ ಭಾವನೆ ಎಂಬುದು ಬರಬೇಕಾಗಿದೆ ಧರ್ಮದ ಮೇಲೆ ಅಧರ್ಮ ಬಂದು ಪಾಪದ ಹೊಳೆ ಅರಿಯುವಾಗ ಯಾರ ಅವಶ್ಯಕತೆ ಇದೆ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ ಏಕತಾ ಹಾಗೂ ಶಾಂತಿಗಾಗಿ ಶ್ರಮಿಸಿದ ಅಣ್ಣ ಬಸವಣ್ಣನವರು ಗುರು ತಂದೆ ತಾಯಿ ಹಿರಿ ಕಿರಿಯರನ್ನು ಗೌರವಿಸುವದರೊಂದಿಗೆ 12 ಸಾವಿರ ವಚನಗಳನ್ನು ಜನ ಉಪದೇಶಕ್ಕೆ ಅನವುಮಾಡಿಕೊಟ್ಟಿದ್ದಾರೆ ಧರ್ಮದ ಬಗ್ಗೆ ನಂಬಿಕೆ ಇಲ್ಲದ ಮಾನವರಾದ ನಾವು ಅರೀತು ನಡೆಯಬೇಕಾಗಿದೆ ಎಂದು ಶರಣರ ಸಂತರ ಉಪದೇಶ ಕುರಿತು ತಿಳಿ ಹೇಳಿದ ಅವರು ಶರಣರು ಸಂತರು ಎತ್ತಿ ಕೊಂಡವರ ಕೂಸಿನಂತಿರುತ್ತಾರೆ ಅವರು ಸರ್ವರಿಗೂ ಸಮಾನತೆ ಎಂಬುದನ್ನು ಹೇಳುತ್ತಾರೆ ಮೊದಲು ಏನಾದರೂ ಆಗು ಮಾನವರಾಗು ಎಂಬುದನ್ನು ಕಲಿಸುತ್ತಾರೆಂದು ಹೇಳಿದರು.

ಇನ್ನೋರ್ವ ಸಾನಿದ್ಯ ವಹಿಸಿದ ಚಿಗರಹಳ್ಳಿಯ ಮರುಳ ಶಂಕರ ಪೀಠದ ಜಗದ್ಗುರು ಪೂಜ್ಯಶ್ರೀ ಸಿದ್ದಬಸವ ಕಬೀರ ಮಹಾಸ್ವಾಮಿಗಳು ಮಾತನಾಡಿ ಹಿಂದೂ ಧರ್ಮ ಬಲಿಷ್ಠವಾಗಿ ಶ್ರೇಷ್ಠವೆನಿಸಿಕೊಳ್ಳಬೇಕಾದರೆ ದೇಹವನ್ನು ಮಂದಿರ ಮಾಡಿಕೊಂಡರೆ ಅವಾಗ ಹಿಂದೂಗಳಾಗುತ್ತಾರೆ ಮುಸಲ್ಮಾನ ಆಗಬೇಕಾದರೆ ಮಗ್ಗಲಿನ ಉಪಾಸಿಗರಿಗೆ ಅನ್ನ ನೀಡಿ ಹಸಿವು ಇಂಗಿಸುವ ಕಾರ್ಯ ಮಾಡಿದರೆ ಅಂತವರು ಮುಸಲ್ಮಾನನಾಗುತ್ತಾನೆಂದ ಅವರು ಎಲ್ಲರೂ ಒಂದಾಗುವಂತಹ ಶಾಂತಿ ಮಂತರವನ್ನು ಎಲ್ಲರಲ್ಲಿಯೂ ತುಂಬಬೇಕೆಂದರು. ಕೊಡು ತೆಗೆದುಕೊಳ್ಳುವಂತವುಗಳು ಮಹತ್ವದಲ್ಲಾ ಧರ್ಮ ಅಲ್ಲಾ ಉಣ್ಣವರು ಮನೆಗೆ ಬಂದಾಗ ಅನ್ನ ನೀಡಿದರೆ ಅದು ಧರ್ಮವಾಗುತ್ತದೆ ಎಂದ ಅವರು ಸಾರ್ಥಕ ಬಧುಕಿಗೆ ಆದ್ಯಾತ್ಮೀಕ ಸಾಧನೆ ಅಗತ್ಯವಾಗಿದೆ ಎಂದ ಅವರು ಕಡಕೋಳ ಮಡಿವಾಳೇಶ್ವರರ ನಿಷ್ಠತೆ ಸತ್ಯತೆ ಕುರಿತು ಶ್ರೀಗಳು ವಿವರಿಸಿದರು.

ಮಾನವ ಏಕತಾ ಶಾಂತಿ ಸಮಾವೇಶವನ್ನು ಉದ್ಘಾಟಿಸಿದ ಮಳಖೇಡದ ಪೂಜ್ಯಶ್ರೀ ಹಜರತ್ ಸೈಯದಶಾ ಮುಸ್ಫಾ ಖಾದ್ರಿ ಅವರು ಮಾತನಾಡಿ ಧರ್ಮವೆಂಬುದನ್ನು ಸಂಕುಚಿತಗೊಂಡು ತಿಳಿದುಕೊಂಡಿದ್ದೇವೆ ಹಿಂದೂಸ್ಥಾನದಲ್ಲಿರುವಂತವರು ಭೌಗೋಲಿಕವಾಗಿ ಹಿಂದೂಗಳಾಗಿದ್ದಾರೆ ಎಲ್ಲರೂ ಭಾವೈಕ್ಯತೆಯಿಂದ ಬಾಳಿದಂತಹ ಧರ್ಮವಾಗಿದೆ ಎಲ್ಲರೂ ಅಣ್ಣ ತಮ್ಮಂದಿರರಾಗಿ ಬಾಳಿದ್ದೇವೆ ಅಂತಹ ಧರ್ಮ ಒಡೆಯುವಂತವರನ್ನು ಸುದಾರಿಸಿ ಒಂದು ಮಾಡುವ ಕಾರ್ಯ ಮೂಕೀಹಾಳ ದಗರ್ಾದ ಇಂದಿನ ಮಹತ್ವದ ಸಮಾವೇಶದಲ್ಲಿ ನಡೆಯುತ್ತಿರುವ ಕಾರ್ಯ ಮಹತ್ವದ್ದಾಗಿದೆ ಎಂದರು.

ಸಾನಿದ್ಯವಹಿಸಿದ ಶ್ರೀ ಖಾಸ್ಗತೇಶ್ವರ ಮಠದ ವೇ.ಸಂಗಯ್ಯ ವಿರಕ್ತಮಠ, ಸ್ವಾತಂತ್ರ ಹೋರಾಟಗಾರ ಬಿ.ಎಚ್.ಮಾಗಿ, ಕೆಪಿಸಿಸಿ ಸದಸ್ಯ ಬಿ.ಎಸ್.ಪಾಟೀಲ(ಯಾಳಗಿ), ನಿವೃತ್ತ ಪ್ರೋ.ಶೇಷಾಚಲ ಹವಾಲ್ದಾರ, ಅವರು ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಕಾಂಗ್ರೇಸ್ ಮುಖಂಡ ಹಮ್ಮೀದ ಮುಶ್ರಫ ವಿಜಾಪೂರ, ಮುಸ್ಲಿಂ ಬ್ಯಾಂಕ್ ಅಧ್ಯಕ್ಷ ಎಂ.ಎ.ಅತ್ತಾರ, ಹುಣಸಗಿ ನಿಂಗಣ್ಣ ಸೌಹಕಾರಬಳಿ, ಮಲ್ಲಯ್ಯ ಹಿರೇಮಠ, ಮೂಕೀಹಾಳ ಗ್ರಾಂಪಂ ಅಧ್ಯಕ್ಷ ಮಹ್ಮದಪಟೇಲ ಬಿರಾದಾರ, ಜಿ.ಎಸ್.ಕಶೆಟ್ಟಿ, ದಗರ್ಾ ಕಮಿಟಿಯ ಅಧ್ಯಕ್ಷರಾದ ಕೆ.ಎಚ್.ಪಾಟೀಲ, ಮಹ್ಮದಲಿ ಜಮಾದಾರ, ಬಾಬು ಗುಡ್ನಾಳ, ಬಿ.ಎಸ್.ಇಸಾಂಪೂರ, ಬಾಬು ಮೋಕಾಶಿ, ರಜಾಕ ಕೂಚಬಾಳ, ಕೆ.ಕೆ.ಬಿರಾದಾರ, ಹಣಮಂತ್ರಾಯ ಹೊಕ್ರಾಣಿ, ಮೊದಲಾದವರು ಉಪಸ್ಥಿತರಿದ್ದರು.

ಶಮಶುದ್ದೀನಶಾ ಅವರು ಕುರಾನ್ ಪಠಣದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಶಿಕ್ಷಕ ಆರ್.ಎಚ್.ವಾಲಿಕಾರ ಸ್ವಾಗತಿಸಿದರು. ಶಿಕ್ಷಕ ವಿಶ್ವನಾಥ ಗಣಾಚಾರ ನಿರೂಪಿಸಿದರು.