ಸಮುದಾಯದ ಅಭಿವೃದ್ದಿಗೆ ಶ್ರಮಿಸಬೇಕು : ಮಲ್ಲೇಶಪ್ಪ
ಶಿಗ್ಗಾವಿ 25: ಸಮುದಾಯದ ಅಭಿವೃದ್ಧಿಯಾಗಬೇಕಾದರೆ ಸಮುದಾಯದ ಮಕ್ಕಳು ಶೈಕ್ಷಣಿಕವಾಗಿ ಯುವಕರು ಆರ್ಥಿಕವಾಗಿ ಸಬಲರಾಗಬೇಕು ಎಂದು ಚಲವಾದಿ ಮಹಾಸಭಾ ಜಿಲ್ಲಾ ಅಧ್ಯಕ್ಷ ಮಲ್ಲೇಶಪ್ಪ ಮಡ್ಲೆರ್ ಹೇಳಿದರು . ನಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆದ ಅಕ್ರಮ ಸಕ್ರಮ ಸಮೀತಿಯ ನೂತನ ನಾಮ ನಿರ್ದೇಶಿತ ಸದಸ್ಯ ಪರಶುರಾಮ ಕಾಳೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿವಿಧ ರಂಗದಲ್ಲಿ ನಮ್ಮ ಸಮುದಾಯದ ಹಿರಿಯರು ಸೇವೆ ಸಲ್ಲಿಸುತ್ತಿದ್ದಾರೆ ಅಂತವರನ್ನು ಗುರುತಿಸಿ ಗೌರವಿಸುವ ಕೆಲಸವಾಗಬೇಕು ಆ ಹಿನ್ನೆಲೆಯಲ್ಲಿ ಪರಶುರಾಮ ಕಾಳೆ ಅವರು ರಾಜಕೀಯ ಕ್ಷೇತ್ರದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಕೊಂಡು ಕೆಲಸ ಮಾಡುತ್ತಿದ್ದಾರೆ ಅವರಿಗೆ ಇನ್ನೂ ಹೆಚ್ಚಿನ ಸೇವೆಯ ಅವಕಾಶ ಸಿಗಲಿ ಎಂದರು.
ಸಮುದಾಯದ ಹಿರಿಯರಾದ ಮಂಜುನಾಥ ಮಿಲಗನವರ ಮಾತನಾಡಿ ಚಲವಾದಿ ಸಮುದಾಯ ಜಿಲ್ಲೆಯಲ್ಲಿ ಅತಿ ಹಿಂದುಳಿದ ಸಮುದಾಯ ಇಲ್ಲಿ ಬಡ ಕೂಲಿ ಕಾರ್ಮಿಕರು ಹೆಚ್ಚಾಗಿರುವದರಿಂದ ಅಂತಹ ಕುಟುಂಬಗಳ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು ನಮ್ಮ ಸಮುದಾಯದ ಸವಾಂರ್ಗೀಣ ಅಭಿವೃದ್ದಿಗೆ ಕೈಜೋಡಿಸಿ ಎಂದರು. ಚಲವಾದಿ ಮಹಾಸಭಾ ಅಧ್ಯಕ್ಷ ಪ್ರಮೋದ ಚಲವಾದಿ , ಚಂದ್ರ್ಪ ಸನದಿ, ಪರಶುರಾಮ ಕಾಳೆ ಮಾತನಾಡಿದರು. ಈ ಸಂದರ್ಭದಲ್ಲಿ ಶಂಕರ ಲಕಮಣ್ಣವರ , ಶಿವರಾಜ ಚಲವಾದಿ ,ಶಂಕರ್ ಇಂಗಳಗಿ ,ನೀಲವ್ವ ಕಾಲವಾಡ ವೀರೇಶ ಚಲವಾದಿ, ಮಹೇಶ ಕಳಸದ ,ಹನಮಂತಪ್ಪ ಕಾಳೆ, ಚಂದ್ರ್ಪ ಡೊಲ್ಲೇಶ್ವರ, ಮಹಾಂತೇಶ್ ಮಾಕಾಪುರ ಹಾಗೂ ವಿವಿಧ ತಾಲೂಕುಗಳ ಅಧ್ಯಕ್ಷರು ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು ಶರೀಫ ಮಾಕಪ್ಪನವರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.