ಸ್ಥಳೀಯ ಪ್ರತಿಭೆಗೆ ಹರಸಿ ಹಾರೈಸಿ: ಸಂತೋಷ್ಕುಮಾರ್

ಲೋಕದರ್ಶನ ವರದಿ

ಹಗರಿಬೊಮ್ಮನಹಳ್ಳಿ 28:ಸ್ಥಳೀಯ ಹಾಗೂ ಪಟ್ಟಣದಕ್ಕೆ ಪರಿಚಿತನಾದ ನಾನು ಇಗಷ್ಟೇ ಚಿತ್ರರಂಗಕ್ಕೆ ಅಂಬೆಗಾಲಿಡುತ್ತಿದ್ದೇನೆ ನನ್ನನ್ನು ಹರಸಿ, ಹಾರೈಸಿ, ಬೆಳೆಸಿ ನಿಮ್ಮ ಸ್ನೇಹ, ಪ್ರೀತಿ, ಅಭಿಮಾನಕ್ಕೆ ನಾನು ಸದಾ ಚಿರಋಣಿ ಎಂದು ಸಂತೋಷ್ಕುಮಾರ್ ಬೆಟಗೇರಿ ಹೇಳಿದರು. 

ಪಟ್ಟಣದ ವಿಶ್ವಕರ್ಮ ಸಮುದಾಯ ಭವನದಲ್ಲಿ ಹಳೆ ಹಗರಿಬೊಮ್ಮನಹಳ್ಳಿಯ ಸ.ಹಿ.ಪ್ರಾ.ಶಾಲೆ ಹಳೇ ವಿದ್ಯಾಥರ್ಿಗಳ ಸ್ನೇಹ ಬಳಗದಿಂದ ಆಯೋಜಿಸಲಾಗಿದ್ದ 'ಒಂಬತ್ತನೇ ಅದ್ಭುತ' ಕನ್ನಡ ಚಿತ್ರದ ಪ್ರಚಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜೀವನದಲ್ಲಿ ಏನಾದರು ಒಂದು ಸಾಧಿಸಬೇಕೆಂದು ಗಾಂಧಿನಗರಕ್ಕೆ ಬಂದ ನಾನು ಸುಮಾರು 15 ವರ್ಷಗಳ ಕಾಲ ಚಿತ್ರ ರಂಗದ ಹಲವಾರು ಆಯಾಮಗಳಲ್ಲಿ ಕೆಲಸ ಮಾಡಿದ್ದೇನೆ. ಆ ಅನುಭವದಿಂದಲೇ ಸ್ವಂತ ಚಿತ್ರ ನಿಮರ್ಾಣ ಮಾಡಲು ಸಾಧ್ಯವಾಯಿತು ಎಂದರು. 

ಪತ್ರಕರ್ತ ಜೆ.ನಾಗರಾಜ್ ಮಾತನಾಡಿ ನಮ್ಮೂರಿನ ಒಬ್ಬ ಹುಡುಗ ಈ ಮಟ್ಟಿಗೆ ಗಾಂಧಿ ನಗರದಲ್ಲಿ 'ಒಂಬತ್ತನೇ ಅದ್ಬುತ' ಎಂಬ ಹೆಸರಿನ ಟ್ರೈಲರ್ನಿಂದಲೇ ಸೌಂಡ್ ಮಾಡುತ್ತಿರುವುದು ಇಡೀ ನಮ್ಮೂರಿಗೆ ಹೆಮ್ಮೆಯ ಸಂಗತಿ. ಸಂತೋಷ್ಕುಮಾರ್ ಬೆಟಗೇರಿಯವರ ಹೊಸ ಆಲೋಚನೆಗಳು ಈ ಚಿತ್ರದ ಪೋಸ್ಟರ್ನಲ್ಲಿ ಅನಾವರಣಗೊಂಡು ನೋಡುಗರನ್ನು ಆಕಷರ್ಿಸುತ್ತಿವೆ. ಹಾಗಾಗಿಯೇ ಯೂಟೂಬ್ನಲ್ಲಿ ಲಕ್ಷಾಂತರ ಜನ ಈ ಚಿತ್ರದ ಟ್ರೈಲರ್ನ್ನು ವೀಕ್ಷಿಸುತ್ತಿದ್ದಾರೆ. ಅದೇರೀತಿ ಚಿತ್ರ ಬಿಡುಗಡೆಯಾಗಿ ಚಿತ್ರಮಂದಿರಗಳಲ್ಲೂಸಹ ಈ ಯುವ ನಾಯಕ ನಿದರ್ೇಶಕನಿಗೆ ಜನಮನ್ನಣೆ ಸಿಗಲಿ. ಇವರಿಂದ ಇನ್ನೂ ಹಲವಾರು ಚಿತ್ರಗಳು ತೆರೆ ಕಾಣಲಿ ಎಂದರು.

ಜಿಲಾನ್ ಭಾಷ ಗಡ್ಡದ್ ಮಾತನಾಡಿ ನಮ್ಮೊಂದಿಗೆ ಆಟಪಾಟದ ಜೊತೆ ಬೆಳೆದ ಸ್ನೇಹಿತನೊಬ್ಬ ಸಿನಿಮಾ ಮಾಡುತ್ತಿದ್ದಾನೆಂದರೆ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಬೆಂಗಳೂರು ನಗರದಲ್ಲಿ 15 ವರ್ಷಗಳಕಾಲ ಚಿತ್ರ ರಂಗದಲ್ಲಿ ತನ್ನನ್ನು ತಾನು ನಿರಂತರವಾಗಿ ತೊಡಗಿಸಿಕೊಂಡು ಹಲವಾರು ಚಿತ್ರ ತಂಡಗಳ ಹಾಗೂ ಕಲಾ ಪೋಷಕರ ಬಳಿ ಕೆಲಸ ಕಲಿತಿರುವ ಸಂತೋಷ್ ಕುಮಾರ್ ಆ ಪ್ರತಿಭೆಯನ್ನೆಲ್ಲ ತಮ್ಮ 'ಒಂಬತ್ತನೇ ಅದ್ಬುತ' ಚಿತ್ರಕ್ಕೆ ಧಾರೆಎರೆದಿದ್ದಾರೆ. ಯುಟೂಬ್ನಲ್ಲಿ ಈಗಾಗಲೇ 4ಲಕ್ಷಕ್ಕೂ ಹೆಚ್ಚು ಜನ ಈ ಚಿತ್ರದ ಟ್ರೈಲರ್ನ್ನು ವೀಕ್ಷಿಸಿರುವುದೇ ಇವರ ಪ್ರತಿಭೆಗೆ ಹಿಡಿದ ಕೈಗನ್ನಡಿಯಾಗಿದೆೆ ಎಂದರು. 

ವೆಂಕಟೇಶ್ ಬಡಪ್ಪನವರ್ ಮಾತನಾಡಿ ಸಂತೋಷ್ಕುಮಾರ ಮತ್ತು ನಾವು ಚಿಕ್ಕಂದಿನಿಂದಲೂ ಸ್ನೇಹಿತರಾಗಿ ಹಾಡಿ ಬೆಳೆದಿದ್ದೇವೆ ಇಂದು ಅವರು 'ಒಂಬತ್ತನೇ ಅದ್ಬುತ' ಎಂಬ ಚಿತ್ರ ನಿಮರ್ಾಣ ಮಾಡಿ ನಿದರ್ೇಶಿಸುವುದರ ಜೊತೆಗೆ ತಾವೇ ನಟರಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವುದು ನಮಗೂ ಹಾಗೂ ನಮ್ಮೂರಿಗೂ ಹೆಮ್ಮೆಯ ಸಂಗತಿಯಾಗಿದೆ. ಅವರ ಚಿತ್ರ ಪ್ರಚಾರಕ್ಕೆ ನಾವೆಲ್ಲ ಸ್ನೇಹಿತರ ಬಳಗದಿಂದ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದರು. 

ಈ ಸಂದರ್ಭದಲ್ಲಿ ವೀರೇಶ್ ಮಜ್ಗಿ, ಹಳೇ ಹ.ಬೊ.ಹಳ್ಳಿ ಸಕರ್ಾರಿ ಹಿರಿಯಪ್ರಾಥಮಿಕ ಶಾಲೆಯ ಹಳೇ ವಿದ್ಯಾಥರ್ಿಗಳ ಸ್ನೇಹಬಳಗದಿಂದ ಎಣ್ಣೆ ಯಾಸೀನ್,ವಿ.ರವಿಕುಮಾರ್, ಕೊಪ್ಪಳ ಕೊಟ್ರೇಶ್, ಎಸ್.ಎಂ.ಪ್ರಶಾಂತ್, ಕೋಡಿಹಳ್ಳಿ ರವಿಕುಮಾರ್, ಸಂಜೀವರೆಡ್ಡಿ, ಕಠಾರಿ ಶಂಕರ್, ಸಂಜೀವರೆಡ್ಡಿ, ಸಣ್ಣ ಕೊಟ್ರೇಶ್, ಹೆಚ್.ಎಂ.ರಾಜೇಶ್, ತಳವಾರ ಕೊಟ್ರೇಶ್ ಮತ್ತಿತರರು ಉಪಸ್ಥಿತರಿದ್ದರು.