ಕಾಗವಾಡ 08: ಪ್ರಜಾಪ್ರಭುತ್ವದಲ್ಲಿ ಮತದಾನವೆಂಬುದು ಒಂದು ಹಬ್ಬವಿದ್ದಂತೆ. ೆ ಮತದಾನದ ಹಬ್ಬವನ್ನು ನಾವೆಲ್ಲರೂ ಅತ್ಯಂತ ಹರ್ಷದಿಂದ ಆಚರಿಸೋಣ ಮತ್ತು ಅದರಲ್ಲಿ ಪ್ರಮುಖವಾಗಿ ನಮ್ಮ ಮತ-ನಮ್ಮ ಹಕ್ಕನ್ನು ಚಲಾಯಿಸುವಂತೆ ಪ್ರತಿಜ್ಞೆ ಮಾಡುವದಲ್ಲದೆ, ನಾಗರಿಕರಲ್ಲಿ ಅರಿವು ಮೂಡಿಸುವ ಎಲ್ಲ ಪ್ರಯತ್ನ ಮಾಡೋಣವೆಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿ ಎಸ್.ಎಸ್.ಹಿರೇಮಠ ಹೇಳಿದರು.
ಸೋಮವಾರ ದಿ. 8ರಂದು ಶಿವಾನಂದ ಮಹಾವಿದ್ಯಾಲಯದ ಎನ್.ಸಿ.ಸಿ., ಎನ್.ಎಸ್.ಎಸ್. ಹಾಗೂ ಕಾಲೇಜಿನ ವಿವಿಧ ಸಂಘಗಳು ತಾಲೂಕಾ ಆಡಳಿತದ ಸಹಯೋಗದೊಂದಿಗೆ ಮತದಾನ ಜಾಗೃತಿ ಅಭಿಯಾನದಲ್ಲಿ ವಿದ್ಯಾಥರ್ಿಗಳನ್ನು ಉದ್ದೇಶಿಸಿ ಮಾತನಾಡಿದರು.
ತಾಲೂಕಿನ ತಹಶೀಲ್ದಾರರಾದ ಮೇಘರಾಜ ನಾಯಿಕ್ ಮಾತನಾಡಿ, ನಿರ್ಭಯವಾಗಿ ಯಾವುದೇ ಆಮಿಷಕ್ಕೆ ಒಳಗಾಗದೆ ನಾಗರೀಕರೆಲ್ಲರೂ ತಪ್ಪದೇ ಮತದಾನ ಮಾಡಿ ದೇಶಕ್ಕೆ ಸುಭದ್ರ ಸಕರ್ಾರ ಒದಗಿಸಲು ಹೆಮ್ಮೆಯಿಂದ ಪಾತ್ರರಾಗಬೇಕೆಂದು ಕರೆ ನೀಡಿದರು.
ಉಪಪ್ರಾಚಾರ್ಯರಾದ ಡಾ. ಎಸ್.ಓ.ಹಲಸಗಿಮಾತನಾಡಿ, ಈ ಸಲದ ಚುನಾವಣಾ ಆಯೋಗದ ಘೋಷಣೆಯಾದ ಯಾವ ಮತದಾರರು ಮತಚಲಾಯಿಸದೇ ಉಳಿಯಬಾರದು. ಸ್ವೀಪ ಯೋಜನೆ ಮೂಲಕ ನಡೆಯುತ್ತಿರುವ ಈ ತರಹದ ಪ್ರಯತ್ನ ಹಿಂದೆ ಎಂದೂ ನಡೆದಿರಲಿಲ್ಲ. ಇದೊಂದು ನಾವೆಲ್ಲ ಹೆಮ್ಮೆ ಪಡುವ ವಿಷಯವಾಗಿದ್ದು ನಾವೆಲ್ಲರೂ ಮತದಾನ ಮಾಡೋಣವೆಂಬ ಜಯಘೋಷಗೊಳಿಸಿದರು.
ಪ್ರಾಚಾರ್ಯ ಡಾ. ಜಿ.ಜಿ. ಕರಲಟ್ಟಿಮಾತನಾಡಿ, ಈ ಅಭಿಯಾನ ಯಾವುದೇ ಪಕ್ಷದ ಪ್ರಚಾರವಾಗಿರದೆ, ಕೇವಲ ನಮ್ಮ ನಾಗರಿಕರೆಲ್ಲ ಪ್ರಜಾಪ್ರಭುತ್ವದ ಯಶಸ್ಸಿಗೆ ಕಾರಣೀ ಕರ್ತರಾಗಬೇಕೆಂಬ ಹೇಳಿದರು.
ಕಾರ್ಯಕ್ರಮದಲ್ಲಿ ಉಪತಹಶೀಲ್ದಾರ ವಿಜಯ ಚೌಗಲಾ, ಸಮೂದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಹಾಗೂ ಪದವಿಪೂರ್ವ ಪ್ರಾಚಾರ್ಯ ಪಿ.ಬಿ.ನಂದಾಳೆ ಉಪಸ್ಥಿತರಿದ್ದರು.