ಮೂಡಲಗಿ 21: ಪ್ರಜ್ಞಾವಂತ ಯುವ ಮತದಾರನು ತಮ್ಮ ವಿವೇಚನಾ ಶಕ್ತಿಯ ಮೂಲಕ ವಿಚಾರ ಮಾಡಿ ಭವ್ಯ ಭವಿಷ್ಯತ್ತಿನಲ್ಲಿ ದೇಶವು ಅಭಿವೃದ್ಧಿ ಹೊಂದಲು ಮತದಾನ ಅವಶ್ಯಕವಾಗಿದೆ. ಪ್ರತಿಯೊಬ್ಬರು ಮತದಾನದ ಅರಿವು ಹಾಗೂ ಅದರಿಂದಾಗುವ ಪ್ರಯೋಜನಗಳ ಕುರಿತು ತಿಳಿದುಕೊಳ್ಳುವದು ಅತ್ಯಾವಶ್ಯಕವಾಗಿದೆ ಎಂದು ಸ್ವೀಪ್ ಸಮೀತಿ ಅಧ್ಯಕ್ಷ ಗೋಕಾಕ ತಾ.ಪಂ ಕಾರ್ಯನಿವರ್ಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ ಹೇಳಿದರು.
ಅವರು ಪಟ್ಟಣದಲ್ಲಿ ಜರುಗಿದ ಮತದಾನ ಜಾಗೃತಿ ಜಾಥಾ ಹಾಗೂ ಯುವಕರಿಗಾಗಿ ಏರ್ಪಡಿಸಿದ್ದ ಶಟಲ್ ಕಾಕ್ ಬ್ಯಾಟಮಿಂಟನ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಮಾತನಾಡಿದರು. ತಾಲೂಕಿನಲ್ಲಿ ಈ ಸಲ ಲೋಕಸಭೆ ಚುನಾವಣೆಯಲ್ಲಿ ಪ್ರತಿಶತ ಮತದಾನ ಮಾಡಿಸುವ ಮೂಲಕ ಎಲ್ಲರು ಪ್ರಜಾಪ್ರಭುತ್ವಕ್ಕೆ ಸಹಾಯಕವಾಗುವ ನಿಟ್ಟಿನಲ್ಲಿ ಕೈಜೊಡಿಸಬೇಕು. ಚುನಾವಣೆಗಳು ನಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಸುವದಲ್ಲದೆ ಜನ ಪರ ಸಾಮಾಜಿಕ ಕೆಲಸ ಕಾರ್ಯಗಳು ಯಶಸ್ವಿಯಾಗಲು ಸಹಾಯಕವಾಗುವದು. ದೇಶದ ಅಭಿವೃದ್ಧಿ, ಭದ್ರತೆ, ಶಿಕ್ಷಣ, ಜನೋಪಯೋಗಿ ಕಾರ್ಯಗಳು ಆಗಬೇಕಾದರೆ ಉತ್ತಮ ನಾಯಕರ ಆಯ್ಕೆ ಮಾಡಿ ಕಳಿಸುವದು ನಮ್ಮೇಲ್ಲರ ಕರ್ತವ್ಯವಾಗಿದೆ. ಯುವ ಸಮುಹ ಚುನಾವಣೆಯ ಕುರಿತು ಅಸಡ್ಯೆ ಭಾವನೆ ತೊರತೆ ಜಾಗೃತರಾಗಿ ಆಸೆ ಆಮೀಷಗಳಿಗೆ ಒಳಗಾಗದೆ ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ದೇಶದ ಪ್ರಗತಿಯಲ್ಲಿ ಕೈಜೊಡಿಸ ಬೇಕು.
ತಾಲೂಕಿನಲ್ಲಿರುವ ಪ್ರತಿಯೊಂದು ಮತಗಟ್ಟೆಗಳಿಗೆ ಅಸಹಾಯಕರಿಗೆ 384 ವ್ಹೀಲ್ ಚೇರ್, ಅಂಗವಿಕಲ, ಹಿರಿಯ ವೃದ್ಧರಿಗೆ ವಾಹನದ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿಯೊಂದು ಮತಗಟ್ಟೆಗೆ ಇಬ್ಬರನ್ನು ಸ್ವಯಂ ಸೇವಕರನ್ನು ನಿಯೊಕ್ತಿಗೊಳಿಸಲಾಗಿದೆ. ಚುನಾವಣೆ ಸಂದರ್ಭದಲ್ಲಿ ತುತರ್ಾಗಿ ಅವಶ್ಯಕ ವಿರುವ ವೈಧ್ಯಕೀಯ ಶಿಬಿರಗಳನ್ನು ಆಯೋಜಿಸಿದೆ. ಗೋಕಾಕ ಮತ್ತು ಅರಭಾಂವಿ ಕ್ಷೇತ್ರಗಳಲ್ಲಿ ಸಖಿ ಮತಗಟ್ಟಗಳನ್ನು ಸಜ್ಜುಗೋಳಿಸಲಾಗಿದೆ. ಮತದಾರರು ಶಾಂತ ರೀತಿಯಿಂದ ಮತದಾನ ಮಾಡುವ ಮೂಲಕ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಹೇಳಿದರು.
ಪುರಸಭೆ ಆವರಣದಿಂದ ಹೋರಟ ಜಾಗೃತಿ ಜಾಥಾ ಕಾರ್ಯಕ್ರಮವು ಕಲ್ಮೇಶ್ವರ ವೃತ್ತದ ಮೂಲಕ ಎಸ್.ಎಸ್.ಆರ್ ಕಾಲೇಜಿನವರೆಗೆ ನಡೆಯಿತು. ಶಟಲ್ ಕಾಕ್ ಬ್ಯಾಟಮಿಂಟನ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಸುಪರ್ ಕಿಂಗ್ಸ್, ದ್ವೀತಿಯ ಡೇವಿಲ್, ಪವರ್ ತಂಡ ತೃತೀಯ ಸ್ಥಾನಗಳನ್ನು ಪಡೆದುಕೊಂಡವು. ಮತದಾರರ ಮನಸೇಳೆಯುವ ಗೀತೆಗಳು ಕೇಳುಗರನ್ನು ರೂಮಾಂಚನಗೊಳಿಸಿದವು.
ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಎಸ್.ಎಚ್ ದೇಸಾಯಿ, ಸಮನ್ವಯಾಧಿಕಾರಿ ಬಿ.ಎಚ್ ಮೋರೆ, ಅಭಿವೃದ್ದಿ ಅಧಿಕಾರಿಗಳಾದ ಹಣಮಂತ ತಾಳಿಕೋಟಿ, ಎಸ್.ಎಸ್ ರೊಡ್ಡನವರ, ಹಣಮಂತ ಬಸಳಿಗುಂದಿ, ಎಸ್.ಎಲ್ ಬಬಲಿ, ಗಂಗಾಧರ ಮಲ್ಹಾರಿ, ಉದಯಕುಮಾರ ಬೆಳ್ಳೊಂಡಿಗಿ, ಬಿ.ಎಸ್ ದೊಡಮನಿ, ಬಿ.ಆರ್.ಪಿಗಳಾದ ಕೆ.ಎಲ್ ಮೀಶಿ, ಬಿ.ಎಮ್ ನಂದಿ, ಪಿ.ಜಿ ಪಾಟೀಲ್, ಸಿಆರ್.ಪಿ ಎಫ್ ಆರ್ ಯಲಿಗಾರ, ಶ್ರೀಶೈಲ್ ಪಾಟೀಲ, ಪ್ರಧಾನಗುರು ಎಸ್.ವಿ ಸೋಮವ್ವಗೋಳ, ಸ್ಕೌಟ್ಸ ಗೈಡನ ಬಸವರಾಜ ನಿಡೋಣಿ ಇದ್ದರು.